ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯರಾಗಿ ಬಿ.ಎಚ್. ನಿರಗುಡಿ ನೇಮಕ

ಕಲಬುರಗಿ,ಮಾ.17-ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯರಾಗಿ ಸಾಹಿತಿ ಹಾಗೂ ಪ್ರಾಚಾರ್ಯ ಬಿ.ಎಚ್.ನಿರಗುಡಿ ಆಯ್ಕೆಯಾಗಿದ್ದಾರೆ.
ಕನ್ನಡ ಉಪನ್ಯಾಸಕರಾಗಿ ಕಥೆ, ಕವಿತೆ, ಲೇಖನಗಳನ್ನು ಬರೆದಿರುವ ನಿರಗುಡಿ ಅವರು, ಸಾಹಿತ್ಯ, ಸಂಸ್ಕøತಿ ಸಂಘಟನೆಯನ್ನು ಮೈಗೂಡಿಸಿಕೊಂಡಿದ್ದಾರೆ.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಯಾಗಿ, ಕಲಬುರಗಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನಮಾನಸದಲ್ಲಿದ್ದಾರೆ. 25ಕ್ಕಿಂತ ಹೆಚ್ಚು ಕೃತಿಗಳನ್ನು ಕನ್ನಡ ಸಾರಸತ್ವ ಲೋಕಕ್ಕೆ ಅರ್ಪಿಸಿದ್ದಾರೆ. ಸಾಹಿತ್ಯ ಸಾರಥಿ ಪ್ರಶಸ್ತಿ ವಿತರಣೆ ಮಾಡಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ವಿಶ್ವವಿದ್ಯಾಲಯದ ಎಂ.ಎ.ತರಗತಿಗೆ ಇವರ ಗುಬ್ಬಿ ವೀರಣ್ಣ ಪಠ್ಯಪುಸ್ತಕವಾಗಿದೆ. ಅಧ್ಯಾಪನದಲ್ಲಿ ತೊಡಗಿಸಿಕೊಂಡು ಅನೇಕ ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಅಟಲಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ, ಕನ್ನಡ ಭಾಷೆ ಹಾಗೂ ವ್ಯಾಕರಣ, ಕನ್ನಡ ಸಾಹಿತ್ಯ ದರ್ಪಣ, ಮಾಧ್ಯಮ ಲೋಕ, ರಾಷ್ಟ್ರದ ಪ್ರಖ್ಯಾತ ಮಹನೀಯರು, ಕಾವ್ಯ ಸಂಭ್ರಮ, ಆದರ್ಶ ಶಿಕ್ಷಕ ಹೇಗಿರಬೇಕು, ಗುಬ್ಬಿ ವೀರಣ್ಣ, ಸಾಧಕ ಸಾರಥಿ, ಯುವ ಸಾರಥಿ, ಸಾಮಾನ್ಯ ಜ್ಞಾನ ಮುಂತಾದ ಪುಸ್ತಕಗಳನ್ನು ಓದುಗರಿಗೆ ನೀಡಿದ್ದಾರೆ.