ಕನ್ನಡ ಪರಂಪರೆ ಉಳಿಸುವುದು ಎಲ್ಲರ ಜವಾಬ್ದಾರಿ-ಯಾದವಾಡ

ರಾಮದುರ್ಗ, ನ 2- ಕನ್ನಡ ನಾಡಿನ ನೆಲ. ಜಲ, ಭಾಷೆ, ಸಂಸ್ಕøತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಭಾನುವಾರ ತಾಲೂಕಾ ಪಂಚಾಯ್ತ ಸಭಾ ಭವನದಲ್ಲಿ ತಾಲುಕಾಡಳಿತ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು,
ಜೀವನಕ್ಕಾಗಿ ಎಲ್ಲ ಭಾಷೆಗಳನ್ನು ಕಲಿಯಬೇಕು. ಕನ್ನಡ ಭಾಷೆಯ ಮೇಲೆ ಹೆಮ್ಮೆ ಇರಬೇಕು ಹೃದಯದ ಭಾಷೆಯಾಗಿ ಬೆಳೆಸಿ ಮಾತೃಸ್ಥಾನ ನೀಡಬೇಕು ಮಾತೃಭಾಷೆಯಲ್ಲಿ ಕಲಿತ ಉನ್ನತ ಸ್ಥಾನ ಪಡೆದುವರು ಹಲವರಿದ್ದು ಅವರು ಮಾದರಿಯ ಜೀವನ ಮಾರ್ಗದಶನವಾಗಬೇಕು ಎಂದರು.
ಈ ಭಾರಿ ತಾಲೂಕಿನ ಸುರೇಬಾನದ ಕವಿ ರಾಮಣ್ಣ ಬ್ಯಾಟಿಗೆ ರಾಜ್ಯ ಸರಕಾರ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ತಾಲೂಕಿಗೆ ಸಂದ ಗೌರವ ಎಂದರಲ್ಲದೆ ಹಚ್ಚೇವು ಕನ್ನಡದ ಖ್ಯಾತಿಯ ಕವಿ ಡಿ ಎಸ್ ಕರ್ಕಿ, ಸಾಹಿತಿಗಳಾದ ಸಾಲಿ ರಾಮಚಂದ್ರರಾಯ ಹಾಗೂ ಬಿ ಸಿ ದೇಸಾಯಿ ಅವರು ಕನ್ನಡ ನಾಡು ನುಡಿಯ ಸಾಹಿತ್ಯದ ಅಭಿವೃದ್ದಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾದ್ದರಿಂದ ತಾಲೂಕಿನ ಎಲ್ಲ ಅಂಗಡಿಗಳ ನಾಮ ಫಲಕಗಳು ಕನ್ನಡದಲ್ಲಿಯೇ ಇರಬೇಕು ಇಲ್ಲವಾದರೆ ಪುರಸಭೆಯಿಂದ ಕ್ರಮಕೈಕೊಳ್ಳಲಾಗುವುದು ಎಂದು ಪುರಸಭೆ ಉಪಾಧ್ಯಕ್ಷ ರಾಘವೆಂದ್ರ ದೊಡಮನಿ ಹೇಳಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ 4 ವಿಧ್ಯಾರ್ಥಿಗಳಿಗೆ ಸರಕಾರದಿಂದ ಉಚಿತ ಕೊಡಲಾದ ಲ್ಯಾಪ್ ಟಾಪ್ ನೀಡಿ ತಾಲೂಕ ಅಡಳಿತದಿಂದಾ ಸನ್ಮಾನಿಸಲಾಯಿತು. ತಾಲೂಕ ಪಂಚಾಯತ ಅಧ್ಯಕ್ಷೆ ಶಾಂತವ್ವ ವಡ್ಡರ, ಎಪಿಎಮ್‍ಸಿ ಅಧ್ಯಕ್ಷ ದ್ಯಾವಪ್ಪ ಬೆಳವಡಿ, ಜಿಲ್ಲಾ ಪಂಚಾಯತ ಸದಸ್ಯರಾದ ರೇಣಪ್ಪ ಸೋಮಗೊಂಡ, ಕೃಷ್ಣ ಲಮಾಣಿ, ಪ್ರಭಾರಿ ತಹಶೀಲದಾರ ಎಸ್. ಕೆ. ತಂಗೋಳಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮುರಳೀದರ ದೇಶಪಾಂಡೆ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.