ಕನ್ನಡ ಪದಗಳಿಗೆ ಅವಮಾನ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಯಚೂರು, ಜು.೧೯- ಸರ್ಕಾರಿ ಕಛೇರಿಗಳಲ್ಲಿ ಫೋಟೋ ,ವೀಡಿಯೋ ಮಾಡಬಾರದೆಂದು ಎಂದು ಹಿಂಪಡೆದ ಆದೇಶದಲ್ಲಿ ಕನ್ನಡ ಪದಗಳಿಗೆ ಅವಮಾನ ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಜು.೧೫ ರಂದು ರಾಜ್ಯ ಸರ್ಕಾರ ಸರಕಾರಿ ಕಛೇರಿಗಳಲ್ಲಿ ಫೋಟೋ ವಿಡಿಯೋ ಮಾಡಬಾರದು ಎಂದು ಆದೇಶ ನೀಡಲಾಗಿತ್ತು. ಈ ಆದೇಶದ ವಿರುದ್ಧ ರಾಜ್ಯದಲ್ಲಿ ವಿವಿಧ ಸಂಘಟನೆಗಳ ಹೋರಾಟಗಾರರು,ವಿರೋದ ಪಕ್ಷದ ನಾಯಕರು, ಈ ಆದೇಶವನ್ನು ಹಿಂಪಡೆಯಬೇಕು ಎಂದು ರಾಜ್ಯದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ರಾತ್ರೋರಾತ್ರಿ ಹಿಂಪಡೆದ ಆದೇಶದಲ್ಲಿ ಕೆಲವು ಕನ್ನಡ ಪದಗಳು ತಪ್ಪು ತಪ್ಪಾಗಿ ಗಣಕೀಕರಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನರಸಿಂಹಲು ಕಮಲಾಪುರ,ತಿಮ್ಮಪ್ಪ ಕಡಗೋಳ,ಆನಂದ ಏಗನೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.