ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡ ಬಳಸಬೇಕುಃ ಬೇಕ್ರಿ ರಮೇಶ

ವಿಜಯಪುರ, ನ.11-ಕನ್ನಡ ನೆಲದಲ್ಲಿ ಹುಟ್ಟಿ ಕನ್ನಡ ಬಳಸದೆ ಇರುವ ಕನ್ನಡಿಗರು, ಬೆರಕೆ ಇಂಗ್ಲೀಷ ಮಾತನಾಡುವ ಕನ್ನಡಿಗರು, ಕನ್ನಡ ಬಳಸದೆ ಇರುವ ಪರಭಾಷಿಕರು ಕಡ್ಡಯವಾಗಿ ಕನ್ನಡ ಬಳಸಲೇಬೇಕು ನಿಮಗೆ ಕನ್ನಡ ನಾಡು ಬೇಡವೇ ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕನ್ನಡ ನೇಲದ ನಟ-ನಟಿಯರು ಕಿರುತೆಯ ನಟ ನಟಿಯರು ನಿರೂಪಕರು ಕನ್ನಡವನ್ನು ಕಡ್ಡಾಯವಾಗಿ ಮಾತನಾಡಲಬೇಕು. ನಿಮ್ಮ ಅಭಿಮಾನಿಗಳಿಗೂ ಕರೆ ನೀಡಬೇಕು. ನಟ ಸಾರ್ವಭೌಮ ಪದ್ಮಭೂಷಣ ಡಾ. ರಜಕುಮಾರ ರವೇ ನಮಗೆ ಸ್ಪೂರ್ತಿ ದೂರದರ್ಶಗಳು ಕೂಡ ಕನ್ನಡ ನೆಲದ ರಾಜಕಾರಣಿಗಳು ಕಡ್ಡಾಯವಾಗಿ ಕನ್ನಡ ಮಾತನಾಡಲೇಬೇಕು. ವ್ಯವಹರಿಸಬೇಕು. ಕರ್ನಾಟಕದ ಎಲ್ಲ ಸರ್ಕಾರಿ ನೌಕರರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂಬ ಕಾಯಿದೆ ಜಾರಿಗೆ ತರಬೇಕು. ಸಚಿವಾಲಯ ಅಧಿಕಾರಿಗಳಿಂದ ಕನ್ನಡಕ್ಕೆ ಭಾರಿ ಕುತ್ತು ಬರುತ್ತಿದೆ. ರಾಜ್ಯ ಸರಕಾರ ಜಾಗೃತಿ ವಹಿಸಬೇಕು ಎಂದರು.
ಕನ್ನಡ ನೆಲದ ಕೇಂದ್ರ ಸರಕಾರದ ಕಚೇರಿಗಳು, ಬ್ಯಾಂಕುಗಳು ಕನ್ನಡಿಗರಿಗೆ ಉದ್ಯೋಗ ನೀಡಬೇಕು. ರಾಷ್ಟ್ರೀಯ ಪಕ್ಷಗಳು ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಕದಂಬ ಸೈನ್ಯ ತೀವ್ರವಾಗಿ ವಿರೋಧಿಸುತ್ತದೆ. ಸಂವಿದಾನದಲ್ಲಿರುವ ಭಾಷಾ ವಿಧಿಗಳು ಕಲಂ 343-351 ರವರೆಗೆ ತಿದ್ದು ಪಡಿಯಾಗಲೇಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಕನ್ನಡಿಗರ ಅಭಿಮಾನವೇ ಅದರ ಅಸ್ಥಿತ್ವದ ದಾರಿದೀಪ. ಎರಡು ಶತಮಾಅನ ಬ್ರಿಟಿಷರ ಆಡಳಿತದಲ್ಲೂ ಕನ್ನಡ ಅಳಿಯಲಿಲ್ಲ. ಆದರೆ ಕನ್ನಡಿಗರ ಸರ್ಕಾರಗಳಲ್ಲೆ ಸಂಪೂರ್ಣವಾಗಿ ಕಡೆಗಣನೆ. ದುರಾದೃಷ್ಟಕರವೆಂದರೆ ಬಹುತೇಕ ಕನ್ನಡಿಗರಷ್ಟು ಪರಭಾಷೆ ವ್ಯಾಮೋಹಿಗಳು. ಕನ್ನಡವು ಅನ್ಯ ¨ಭಾಷೆಗಳಿಗೆ ಆಹಾರವಾಗದಂತೆ ನೋಡಿಕೊಳ್ಳಬೇಕಾದ್ದು ಕನ್ನಡಿಗರ ಕರ್ತವ್ಯ. ಕನ್ನಡಿಗರ ಉದ್ಯೋಗದಾತೆ ಡಾ. ಸರೋಜಿನಿ ಮಹಿಷಿ ಪರಿಷ್ಕøತ ವರದಿಯನ್ನು ಕಾಯಿದೆಯಾಗಿ ಜಾರಿಗೆ ತರಬೇಕೆಂದು ರಾಜ್ಯ ಸರಕಾರಕ್ಕೆ ಆಗ್ರಹಿಸದೇ ಮಹಿಷಿ ವರದಿ ಬಗ್ಗೆ ತಾತ್ಸರ ಮೊದಲು ಬಿಡಿ. ಕನ್ನಡ ನಾಡು, ನುಡಿ, ನೇಲ ಜಲ ಕನ್ನಡಿಗರ ಬಗ್ಗೆ ವಿರೋಧಿಸುವ ಧಿಕ್ಕಾರ ಕೂಗುವರ ವಿರುದ್ದ ಕಾನೂನಾತ್ಮಕ ಶಿಕ್ಷೆಗೆ ಒಳಪಡಿಸುವ ಕಾಯಿದೆ ಜಾರಿಗೆ ತರಬೇಕು ಎಂದರು.
ರಾಜ್ಯ ಸಹಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ, ವಿಜಯಪುರ ಜಿಲ್ಲಾಧ್ಯಕ್ಷ ಎನ್.ಸಿ. ಕಾಂಬಳೆ, ನಗರಾಧ್ಯಕ್ಷ ವಿನಯಕ ಸೊಂಡೂರ, ರಾಜ್ಯ ಸಮಿತಿ ಸದಸ್ಯ ಮೈಸೂರು ಜಿಲ್ಲಾಧ್ಯಕ್ಷ ಎ. ನಾಗೇಂದ್ರ ಸಂತೋಷ ಬಾಸ್ಕರ, ಈರಣ್ಣ ಬಂಡೆ, ರಾಹುಲ ಮಾನಕರ, ಶಂಕರ ಮೇಲಿನಮನಿ, ಆರ್.ಜಿ. ಬುರ್ಲಿ, ರಫೀಕ ಚಟ್ಟರಕಿ, ಸುನೀಲ ಹೊಸಳ್ಳಿ, ಪ್ರಭು ಧನ್ಯಾಳ ಉಪಸ್ಥಿತರಿದ್ದರು.