ಕನ್ನಡ ನಾಮಫಲಕ ಅಳವಡಿಕೆಗೆ ಕಸಾಪ ಆಗ್ರಹ

ಸಂಜೆವಾಣಿ ವಾರ್ತೆ
ಹುಮನಾಬಾದ: ಮಾ.1:ರಾಜ್ಯ ಸರಕಾರ ರಾಜ್ಯದಲ್ಲಿರುವ ಅಂಗಡಿ ಮುಗಟ್ಟುಗಳ ಮೇಲಿರುವ ನಮಫಲಕಳಲ್ಲಿ ಶೇ 60 ಭಾಗ ನಾಮಫಲಕ ಕನ್ನಡದಲ್ಲಿ ಹಾಗೂ ಶೇ 40 ಭಾಗ ಇತರೆ ಭಾಷೆಯಲ್ಲಿ ನಾಮಫಲಕ ಬರೆಸಲು ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಹುಮನಾಬಾದ ಪಟ್ಡಣ ಹಾಗೂ ತಾಲ್ಲೂಕಿನ ಆದ್ಯಂತ ಇರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ತಕ್ಷಣ ಕ್ರಮ ಜರುಗಿಸುವಂತೆ ಆಗ್ರಿಸಲಾಗುತ್ತದೆ ನಮ್ಮ ನಾಡಿನಲ್ಲಿ ನಮ್ಮ ಭಾಷೆ ಕನ್ನಡಕ್ಕೆ ಅಗ್ರಸ್ಥಾನ ನೀಡುವುದು ನಮ್ಮೆಲ್ಲ ಕನ್ನಡಿಗರ ಜವಾಬ್ದಾರಿ ಹಾಗೂ ಹೊಣೆಗಾರಿಕೆಯಾಗಿದೆ, ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕøತಿ ಧಕ್ಕೆಯಾಗದಂತೆ ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ ನಮ್ಮ ಭಾಷೆಯನ್ನು ಗೌರವಿಸಿ ಪ್ರತಿಯೊಬ್ಬರು ಕನ್ನಡದಲ್ಲಿ ನಾಮಫಲಕ ಹಾಕುವಂತೆ ವಿನಂತಿಸಿಕೊಳ್ಳಲಾಗುತ್ತದೆ.
ಈಗಾಗಲೇ ಸರಕಾರ ಆದೇಶಿಸಿದಂತೆ ಪ್ರತಿಯೊಬ್ಬರು ಅಂಗಡಿ ಮಾಲೀಕರು ಸರ್ಕಾರ ಆದೇಶದ ಪ್ರಕಾರ ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಯ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆಯನ್ನು ನೀಡಿ ಬರೆಸುವ ಮೂಲಕ ಕನ್ನಡ ಅಭಿಮಾನ ಮೆರೆಯಬೇಕು, ಸರ್ಕಾರ ಆದೇಶ ಹೊರತಾಗಿಯೂ ಪಟ್ಟಣದಲ್ಲಿ ಯಾರು ಸರ್ಕಾರ ಆದೇಶ ವಿರುದ್ಧ ಕನ್ನಡೆತರ ನಾಮಫಲಕಗಳನ್ನು ಹೊಂದಿದ್ದರೆ ಅಂತವರ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತು ಹೋರಾಟ ನಡೆಸಲಾಗುತ್ತದೆ,ಇದರ ಜೊತೆಗೆ ಸರ್ಕಾರಿ, ಅರೆಸರಕಾರಿ, ಸರಕಾರಿ ಅನುದಾನ ಪಡೆಯುವ ಕಛೇರಿಗಳು, ಹಾಗೂ ಶಾಲಾ, ಕಾಲೇಜುಗಳು, ಕೈಗಾರಿಕೆಗಳು ತಮ್ಮ ನಾಮಫಲಕದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಿ ಬರಿಸಬೇಕೆಂದು ಕೇಳಿಕೊಳ್ಳಲಾಗುವುದು,
ಎಂದು ಕಸಾಪ ಅಧ್ಯಕ್ಷ ಸಿದ್ದಲಿಂಗ ವಿ ನಿರ್ಣಾ ಆಗ್ರಹಿಸಿದ್ದಾರೆ.