ಕನ್ನಡ ನಾಡು ನುಡಿಯ ಬೆಳೆಸಿ: ಶಾಸಕ ಪಾಟೀಲ್

ಹುಮನಾಬಾದ್: ನ.2:ಕನ್ನಡ ನಾಡು ನುಡಿಯ ಏಳಿಗೆಗಾಗಿ ಶ್ರಮಿಸುವುದು ಕರ್ತವ್ಯವಾಗಿದೆ ಎಂದು ಶಾಸಕ ರಾಜಶೇಖರ ಪ್ರತಿಯೊಬ್ಬರ ಆದ್ಯ ಪಾಟೀಲ್ ಹೇಳಿದರು . ಪಟ್ಟಣದ ತಹಸಿಲ್ ಆವರಣದಲ್ಲಿ ಮಂಗಳವಾರ ನಡೆದ 67 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ಭಾರತ ದೇಶದ ಸಂಸ್ಕøತಿ ಪರಂಪರೆಯಲ್ಲಿ ಕನ್ನಡ ಸಂಸ್ಕೃತಿ ಪರಂಪರೆಗೆ ವಿಶೇಷ ಸ್ಥಾನಮಾನವಿದೆ . ಹೀಗಾಗಿ ಎಲ್ಲರೂ ಕನ್ನಡ ಸಂಸ್ಕೃತಿ ಪರಂಪರೆ ಉಳಿಸಿ ಬೆಳಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು .
ಪಟ್ಟಣದ ಸೇರಿದಂತೆ ಇಡೀ ವಿಧಾನ ಸಭಾ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಮಾಡಲಾಗಿದ್ದು , ಕೆಲವೇ ದಿನಗಳಲ್ಲಿ ಪಟ್ಟಣದ ಪ್ರವಾಸಿ ಮಂದಿರದ ರಸ್ತೆಯಿಂದ 1 ಕಿ.ಮೀ. ರಸ್ತೆಯನ್ನು 11 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು
ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ 67 ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ, ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ತಾಲೂಕ ಆಡಳಿತ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 5 ಜನ ಸಾಧಕರಾದ ಶಾಂತವೀರ ಕಸೂದಿ ( ಚಿತ್ರಕಲೆ) ವಿಜಯಕೂಮಾರ ಚಟ್ಟಿ ( ಸಾಹಿತ್ಯ) ಮಹೇಶ ಕೋಳಿ ( ದೇಶ ಸೇವೆ)
ಶ್ರೀಶೈಲ ಪರಡಿಮಠ (ಆರೋಗ್ಯ ಇಲಾಖೆ ) ಮಂಜುಳಾ ಅಷ್ಟೀಕರ (ಶಿಕ್ಷಣ ಇಲಾಖೆ) ವಿಭಿನ್ನ ವಲಯದಲ್ಲಿನ ಸಾಧಕರನ್ನು ಈ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು,
ಪರಿಷತ್ ಸದಸ್ಯ ವಿಧಾನ ಡಾ . ಚಂದ್ರಶೇಖರ ಪಾಟೀಲ್ , ವಿಧಾನ ಪರಿಷತ್ ಸದಸ್ಯ ಭೀಮಾರಾವ್ ಪಾಟೀಲ್ , ಪುರಸಭೆ ಅಧ್ಯಕ್ಷೆ ನೀತು ಶರ್ಮಾ , ಉಪಾಧ್ಯಕ್ಷೆ ಸತ್ಯವತಿ ಮಠಪತಿ , ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಮಲ್ಲಿಕಾರ್ಜುನ ಮಾಶೆಟ್ಟಿ ಪಾಟೀಲ್ ,
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತಹಸೀಲ್ದಾರ್ ಸಿದಲಿಂಗ ನಿರ್ಣಾ , ಡಾ.ಪ್ರದೀಪಕುಮಾರ್ ಹಿರೇಮಠ , ತಾಪಂ ಇಒ ಡಾ.ಗೋವಿಂದ್ , ಮುರುಗೇಪ್ಪ ವಸ್ತ್ರದ್ ,

ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರಾದ ಡಾ. ನಾಗನಾಥ್ ಹುಲಸೂರೆ, ತಾಲೂಕು ಕಸಪ್ಪ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗ ವಿ ನಿರ್ಣಾ ನಿಕಟಪೂರ್ವ ಅಧ್ಯಕ್ಷರಾದ ಸಚ್ಚಿದಾನಂದ ಮಠಪತಿ , ಕೋಶ್ಯಾಧ್ಯಕ್ಷರಾದ ಮಾಣಿಕಪ್ಪ ಬಕ್ಕಾನ್, ಗೌರವ ಕಾರ್ಯದರ್ಶಿಗಳಾದ ಡಾ ಭುವನೇಶ್ವರಿ, ಶ್ರೀಕಾಂತ ಸೂಗಿ ಹಾಗೂ ವಲಯ ಘಟಕ ಅಧ್ಯಕ್ಷರು
ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು .