ಕನ್ನಡ ನಾಡು ದಾಸ ಪರಂಪೆರಯ ತಪೋ ಭೂಮಿ

ಅರಕೇರಾ.ಡಿ.೦೧- ದಾಸ ಶ್ರೇಷ್ಠ ಕನಕದಾಸರ ತತ್ವ ಹಾಗೂ ಆದರ್ಶಗಳನ್ನು ಪಾಲಿಸುವುದು ಅಗತ್ಯವಾಗಿದೆ. ಅವರ ಆದರ್ಶ ಮೌಲ್ಯಗಳನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಲಿ ಎಂದು ಉಪ ತಹಶೀಲ್ದಾರ ಮನೋಹರ ನಾಯಕ ತಿಳಿಸಿದರು.
ಪಟ್ಟಣದ ತಾಲೂಕು ತಹಶೀಲ್ದಾರ ಕಚೇರಯಲ್ಲಿ ಗುರುವಾರ ಕನಕದಾಸರ ಜಯಂತಿಯನ್ನು ಆಚರಿಸಿ ಮಾತನಾಡಿದರು, ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮದು. ಅದರಲ್ಲೂ ಕರ್ನಾಟಕ ಪುಣ್ಯ ಭೂಮಿಯೂ ದಾಸ ಪರಂಪರೆಯನ್ನು ಕಂಡಿರುವ ತಪೋ ಭೂಮಿಯಾಗಿದೆ ಎಂದು ಬಣ್ಣಿಸಿದರು.
ಈ ವೇಳೆ ಕಂದಾಯ ನಿರೀಕ್ಷಕ ಉಮಾಶಂಕರ, ಎಫ್‌ಡಿಸಿ ಶರಣಯ್ಯ ಸ್ವಾಮಿ, ಬಸವರಾಜ ಹುನೂರು, ಕನಕಪ್ಪ, ಕೆಂಚಬಸ್ಸಪ್ಪ, ಸತೀಶ್, ಮಮತಾ, ಅರುಣಾ, ವೆಂಕಟೇಶ, ಕರಿಯಪ್ಪ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.