ಕನ್ನಡ ನಾಡು ಕಟ್ಟುವಲ್ಲಿ ಆಲೂರು ವೆಂಕಟರಾವ್ಅವರ ಕೊಡುಗೆ ಅಪಾರ


ಧಾರವಾಡ, ಜು.13:: ಕನ್ನಡ ಕುಲಪುರೋಹಿತ ಆಲೂರು ವೆಂಕಟರಾವ್ ಅವರು ಕನ್ನಡ ಭಾμÉಯನ್ನು ಸಂಪೂರ್ಣವಾಗಿ ಅರಿತಿದ್ದರು ಮತ್ತು ಕರ್ನಾಟಕ ರಾಜ್ಯದ ಕಲ್ಪನೆ ನೀಡಿದ ಮೊದಲ ನಾಯಕರಾಗಿದ್ದಾರೆ. ಕನ್ನಡ ನಾಡು ಕಟ್ಟುವಲ್ಲಿ ಆಲೂರರ ಪಾತ್ರ ಅಪಾರವಿದೆ ಎಂದು ನಿವೃತ್ತ ಪ್ರಾಧ್ಯಾಪಕ ದುಶಾಂತ ನಾಡಗೌಡ ಅವರು ಹೇಳಿದರು.

ಅವರು ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕøತಿಕ ಭವನದಲ್ಲಿ ಆಲೂರು ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಆಲೂರು ವೆಂಕಟರಾವ ಅವರ 143ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಕರ್ನಾಟಕ ಮತ್ತು ಕನ್ನಡದ ಬಗ್ಗೆ ತಿಳಿಯಬೇಕಾದರೆ ಆಲೂರು ವೆಂಕಟರಾವ್ ಅವರು ಬರೆದ ಕರ್ನಾಟಕ ಗತವೈಭವವನ್ನು ಎಲ್ಲರೂ ಓದಬೇಕು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಆಲೂರು ವೆಂಕಟರಾವ್ ಅವರು ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೂ ನೀಡಿದ ಕೊಡುಗೆ ಅಪಾರವಾಗಿದೆ. ಭಾμÉಯಿಲ್ಲದೇ ಬದುಕಿಲ್ಲ ಕನ್ನಡ ಸಂಸ್ಕøತಿಯಲ್ಲಿ ನಮ್ಮ ಬದುಕನ್ನು ಕಟ್ಟಿಕೊಳ್ಳುವ ಸಂಸ್ಕಾರವಿದೆ. ಕನ್ನಡಕ್ಕೆ ಹೊಸ ರೀತಿಯ ಆಲೋಚನೆಯನ್ನು ನೀಡಿದವರು ಆಲೂರು ವೆಂಕಟರಾವರು. ಸ್ವಾಭಿಮಾನಿ ಕನ್ನಡ ನಾಡನ್ನು ರೂಪಿಸುವಲ್ಲಿ ಆಲೂರು ವೆಂಕಟರಾವ್ ಅವರ ಕೊಡುಗೆ ಬಹು ಮುಖ್ಯವಾಗಿದೆ ಎಂದು ಹೇಳಿದರು.

ಶಿಕ್ಷಣ ತಜ್ಞ ಡಾ. ಮಂಜುನಾಥ ಹಿರೇಮಠ ಅವರು ಕರ್ನಾಟಕ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಅವರ ಜೀವನ ಸಾಧನೆಗಳ ಕುರಿತು ಉಪನ್ಯಾಸ ನೀಡಿದರು. ಟ್ರಸ್ಟ್ ಅಧ್ಯಕ್ಷ ಡಾ.ಪ್ರಮೋದ ಗಾಯಿ ಅವರು ಅಧ್ಯಕ್ಷತೆ ವಹಿಸಿದ್ದರು.

ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಟ್ರಸ್ಟ್ ಸದಸ್ಯ ದೀಪಕ ಆಲೂರು ಉಪಸ್ಥಿತರಿದ್ದರು, ಟ್ರಸ್ಟ್‍ನ ಸಂಚಾಲಕ ವೆಂಕಟೇಶ ದೇಸಾಯಿ ಅವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಆಲೂರು ವೆಂಕಟರಾವ್‍ರ ಅಭಿಮಾನಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.