ಕನ್ನಡ ನಾಡಿನ ನೆಲ-ಜಲ-ಭಾಷೆ ರಕ್ಷಣೆ ನಮ್ಮೆಲ್ಲರ ಕರ್ತವ್ಯ- ಬಾಬು ಭಂಡಾರಿಗಲ್

ರಾಯಚೂರು.ನ.೦೩-ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ಇದರ ಹಿರಿಮೆ ನಮ್ಮೆಲ್ಲರಿಗೂ ಹೆಮ್ಮೆ, ಈ ನಾಡು ಅನೇಕ ಸಾಂಸ್ಕೃತಿಕ ವೈವಿಧ್ಯತೆಯಿಂದ ಏಕತೆ ಕಡೆ ನಡೆದ ನಾಡು.ಇಲ್ಲಿಯ ಸಾಹಿತ್ಯ ,ಸಾಂಸ್ಕೃತಿಕ ಪರಂಪರೆ ಶ್ರೀಮಂತಿಕೆಯಿಂದ ಕೂಡಿದೆ. ಅದಕ್ಕಾಗಿ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ, ಈ ನಾಡಿನ ಹಿರಿಮೆಯನ್ನು ಉಳಿಸಿ ಬೆಳೆಸಲು ನಾಡಿನ ನೆಲ ಜಲ ಭಾಷ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಹಿರಿಯ ಬಂಡಾಯ ಸಾಹಿತಿ ಬಾಬು ಭಂಡಾರಿಗಲ್ ರವರು ಇಂದು ನಗರದ ಗಾಜಗಾರ್ ಪೇಟೆ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರೌಢಶಾಲೆ ಗಾಜಗಾರ ಪೇಟೆ ಹಾಗೂ ಜನ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ರಾಜ್ಯೋತ್ಸವ ಅಂಗವಾಗಿ ಸನ್ಮಾನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಉಪನ್ಯಾಸ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ ಜೆ ಎಲ್ ಈರಣ್ಣ ಮಾತನಾಡಿ ಗಾಜಗಾರ್ ಪೇಟೆ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ತಾವೆಲ್ಲರೂ ತೆಲುಗು ಭಾಷೆ ಹಿನ್ನೆಲೆ ಇದ್ದವರು ತಾವು ಎಲ್ಲರೂ ಕನ್ನಡವನ್ನು ತಮ್ಮ ಮನೆಗಳಲ್ಲಿ ಮತ್ತು ಶಾಲೆಯಲ್ಲಿ ಕಡ್ಡಾಯವಾಗಿ ಮಾತನಾಡಬೇಕು ಎಂದರು.
ಜನಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಟಿ ಚಂದ್ರಶೇಖರ್ ಮಾತನಾಡಿ ನಗರದಲ್ಲಿ ನಡೆಯುವ ೫ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಬಾಬು ಬಂಡಾರಿಗಲ್ ರವರು ಅನೇಕ ಸಮಾಜಮುಖಿ ಕಾರ್ಯಗಳು, ಇವರನ್ನು ಸಮ್ಮೇಳನದ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ ಗೌರವಿಸುತ್ತಿದೆ. ಇದು ನಮ್ಮ ಹೆಮ್ಮೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆರ್.ಬಾಬು ಮುಖ್ಯೋಪಾಧ್ಯಾಯರು ಮಾತನಾಡುತ್ತಾ ಹಿರಿಯ ಬಂಡಾಯ ಸಾಹಿತಿಗಳಾದ ಬಾಬು ಭಂಡಾರಿಗಲ್ ರವರು ನಮ್ಮ ಶಾಲೆಯಲ್ಲಿ ಓದಿದ್ದಾರೆ ಎನ್ನುವುದು ಹೆಮ್ಮೆಯ ವಿಷಯ . ಇವರನ್ನು ನಮ್ಮ ವಿದ್ಯಾರ್ಥಿ ಗಳಿಗೆ ಪರಿಚಯಿಸುವ ದೊಂದಿಗೆ ಪ್ರೇರಣೆಯಾಗಲಿ ಎಂದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ತಿಮ್ಮಯ್ಯ ಅಧ್ಯಕ್ಷರು ಎಸ್‌ಡಿಎಂಸಿ, ಸಲಹೆಗಾರರಾದ ಎ ರಾಮುಲು, ಶಿಕ್ಷಕರಾದ ಮಲ್ಲಿಕಾರ್ಜುನ್, ಕಾರ್ಯದರ್ಶಿಗಳಾದ ಜೆಎಲ್ ಗೋಪಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಜೆ ಬೋಳಬಂಡಿ ,ಮುನಿಸ್ವಾಮಿ, ಜೆಟಿ ಮಂಜುನಾಥ್, ಜೆಟಿ ಮನೋಜ್ ಕುಮಾರ್, ಜೆ ಎಸ್ ರಾಜೇಶ್, ಜೆ ವೆಂಕಟೇಶ್, ಸಾಗರ್, ಜೆ ಗೋಪಾಲ್, ಜೆಜಿ ಪ್ರೇಮ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮೊದಲಿಗೆ ಪ್ರಾರ್ಥನೆಯನ್ನು ವಿದ್ಯಾರ್ಥಿ ಚಂದ್ರಮೌಳೇಶ್ವರ ನೆರವೇರಿಸಿದರೆ ಸ್ವಾಗತವನ್ನು ಜೆ ಎಸ್ ರಾಜೇಶ್ ನೆರವೇರಿಸಿದರು ಪ್ರಾಸ್ತಾವಿಕ ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಜೆಎಲ್ ಗೋಪಿ ನಿರ್ವಹಿಸಿದರೆ ಕನ್ನಡ ಪ್ರತಿಜ್ಞಾವಿಧಿಯನ್ನು ಎ ರಾಮುಲು ನೆರವೇರಿಸಿದರೆ ಶಿಕ್ಷಕಿ ಶ್ರೀಮತಿ ಅಂಬಿಕಾ ಕಾರ್ಯಕ್ರಮಕ್ಕೆ ವಂದಿಸಿದರು.