ಕನ್ನಡ ನಾಡಿಗೆ ಒಡೆಯರ್ ಕೊಡುಗೆ ಅಪಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.04: ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರು  ಕನ್ನಡ ನಾಡಿಗೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆಂದು  ಡಾ. ತಿಪ್ಪೇರುದ್ರ ಹೇಳಿದರು.
ಅವರು ಇಂದು ಕಸಾಪ ಬಳ್ಳಾರಿ ಜಿಲ್ಲಾ ಘಟಕದಿಂದ ನಗರದ ಕನ್ನಡ ಭವನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಒಡೆಯರ್ ಅವರ ದೂರದರ್ಶಿತ್ವ ಮತ್ತು ಸಮಗ್ರ ಕನ್ನಡ ನಾಡಿನ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಕೃಷಿ ಕೈಗಾರಿಕೆ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಸಾಹಿತ್ಯ ಚಟುವಟಿಕೆಗಳಿಗೆ  ವಿಶಿಷ್ಟ ಕೊಡುಗೆಯನ್ನು ನೀಡುವ ಮೂಲಕ ಚಿರಸ್ಮರಣೀಯರಾಗಿದ್ದಾರೆಂದು ಡಾ. ತಿಪ್ಪೇರುದ್ರ ತಿಳಿಸಿದರು.
ಪ್ರೊ. ದಸ್ತಗಿರಿ ಸಾಬ್ ದಿನ್ನಿ ಒಡೆಯರ್ ಅವರ ಅನುಪಮ ಸೇವೆಯನ್ನು ಸ್ಮರಿಸಿದರು.
ಕಸಾಪ ಜಿಲ್ಲಾ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ವೇದಿಕೆಯಲ್ಲಿ ಕೋಶಾಧ್ಯಕ್ಷ ಡಾ. ಬಸವರಾಜ ಗದಗಿನ, ತಾಲೂಕು ಅಧ್ಯಕ್ಷ ಕೆ.ವಿ. ನಾಗರೆಡ್ಡಿ, ಗ್ರಾಮೀಣ ಘಟಕದ ಅಧ್ಯಕ್ಷ ಎ. ಎರ್ರಿಸ್ವಾಮಿ, ಹಳ್ಳಿ ಲಕ್ಷ್ಮಣ, ಜಾಧವ್, ಹೊಸಪೇಟೆ ಶಿವರಾಂ, ವೀರೇಂದ್ರ ರಾವಿಹಾಳ್, ಜೆ. ಹುಸೇನ್ ಬಾಷಾ, ವರಬಸಪ್ಪ, ಮಹಮ್ಮದ್ ಅಲಿ, ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ  ಡಾ. ಕೆ ಶಿವಲಿಂಗಪ್ಪ ಹಂದಿಹಾಳು ಕಾರ್ಯಕ್ರಮ ನಿರೂಪಿಸಿದರು.