ಕನ್ನಡ ನಮ್ಮ ಸಂಸ್ಕøತಿ: ಅದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ

??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಭಾಲ್ಕಿ: ಫೆ.26:ಕನ್ನಡ ಒಂದು ಭಾಷೆಯಲ್ಲ, ಅದು ನಮ್ಮ ಸಂಸ್ಕøತಿ ಅದನ್ನು ರಕ್ಷಿಸಿ, ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.

ತಾಲೂಕಿನ ಹಲಗರ್ಬಾ ಗ್ರಾಮದ ಶ್ರೀ ರಾಚೋಟೇಶ್ವರ ವಿರಕ್ತ ಮಠದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಶಯ ನುಡಿ ನುಡಿಯುತ್ತಾ ಮಾತನಾಡಿದ ಅವರು, ಒಂದು ರಾಷ್ಟ್ರ ಮತ್ತು ಅಲ್ಲಿಯ ಸಂಸ್ಕøತಿ ನಾಶಮಾಡಲು, ಅಲ್ಲಿಯ ಭಾಷೆ ನಾಷಮಾಡಬೇಕು ಎನ್ನುವ ನಾನ್ನುಡಿಇದೆ. ಹೀಗಾಗಿ ನಾವೆಲ್ಲರೂ ನಮ್ಮ ಭಾಷೆಗೆ ಹೆಚ್ಚಿನ ಮಹತ್ವ ಕೊಡಬೇಕು. ಕೇಂದ್ರದ ಹಿಂದಿ ಹೇರಿಕೆ, ರಾಜ್ಯ ಸರ್ಕಾರದ ಇಂಗ್ಲೀಷ ಪ್ರೇಮದಲ್ಲಿ ನಮ್ಮ ಕನ್ನಡ ಕಣ್ಮರೆಯಾಗುತ್ತಿದೆ. ರಾಜ್ಯ ಸರ್ಕಾರ ಕನ್ನಡ ಶಾಲೆಗಳಲ್ಲಿ ಇಂಗ್ಲೀಷ ಅಳವಡಿಸಿ ಅವುಗಳಿಗೆ ಪಬ್ಲಿಕ್ ಶಾಲೆಯಂದು ನಾಮಕರಣ ಮಾಡಿ ಕನ್ನಡವನ್ನು ಅಳಿಸಲು ಹೊರಟಿದೆ ಇದಕ್ಕೆ ಸಾಕಷ್ಟು ಹೋರಾಟದ ಅವಶ್ಯಕತೆ ಇದೆ. ಕನ್ನಡ ಉಳಿವಿಗೆ ಕನ್ನಡ ಭಾಷೆಯ ಬಳಕೆ ಹೆಚ್ಚಾಗಬೇಕು. ರಾಜಕೀಯಕ್ಕಾಗಿ ಗಡಿ ವಿವಾದ ಹುಟ್ಟುಹಾಕಬಾರದು. ಭಾರತೀಯರಾದ ನಾವೆಲ್ಲರೂ ಭಾರತೀಯ ಎಲ್ಲಾ ಭಾಷೆಗಳನ್ನು ಪ್ರೀತಿಸೋಣ ನಮ್ಮ ಮಾತೃಭಾಷೆಯನ್ನು ಗೌರವಿಸೋಣ. ದೇಶದ ಗಡಿಗಾಗಿ ಹೋರಾಡೋಣ ಎಂದು ಹೇಳಿದರು.

ಹಿರಿಯ ಸಾಹಿತಿ ಡಾ| ಸೋಮನಾಥ ನುಚ್ಚಾ ಪರಿಷತ್ತಿನ ಧ್ವಜ ಹಸ್ತಾಂತರಿಸಿ ಮಾತನಾಡಿದರು. ತಹಸೀಲ್ದಾರ ಪಿ.ಜಿ.ಪವಾರ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಕೇಂದ್ರದ ನಿರ್ದೇಶಕ ಪ್ರೊ: ಬಿ.ಬಿ.ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಚೋಟೇಶ್ವರ ವಿರಕ್ತ ಮಠದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿದರು. ಶ್ರೀ ಗುರುಬಸವ ಪಟ್ಟದ್ದೇವರು ಸಾನಿಧ್ಯವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ರಜನಿಕಾ ಮಹೇಶ ಪಾಟೀಲ, ಮಡಿವಾಳಪ್ಪ ಮಂಗಲಗಿ, ಮಲ್ಲಿಕಾರ್ಜುನ ಹಲಮಂಡಗೆ, ಅನೀಲ ಸುಂಟೆ, ಅಶೋಕ ಗಾಯಕವಾಡ, ಶಾಂತಕುಮಾರ ಪ್ರಭಾ, ಶಿವರಾಜ ಹಾಸನಕರ, ರಾಜಪ್ಪ ಪಾಟೀಲ, ಸೂರ್ಯಕಾಂತ ಸುಂಟೆ, ದತ್ತಾತ್ರಿ ಕಾಟಕರ, ಗುಂಡೇರಾವ ಪಾಟೀಲ, ಮಲ್ಲಿಕಾರ್ಜುನ ಚಲ್ವಾ, ಹಣಮಂತರಾವ ಶ್ರೀಮಾಳೆ, ಬಾಬುರಾವ ದಾನಿ, ಸಂಗಮೆಶ ಜಾಂತೆ, ಭದ್ರು ಪ್ರಭಾ, ಜಯರಾಜ ದಾಬಶೆಟ್ಟಿ, ವಿಜಯಕುಮಾರ ಪರ್ಮಾ ಉಪಸ್ಥಿತರಿದ್ದರು.

ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಸ್ವಾಗತಿಸಿದರು. ರಮೇಶ ಚಿದ್ರಿ ಮತ್ತು ದೀಪಕ ಥಮಕೆ ನಿರೂಪಿಸಿದರು. ಹಣಮಂತ ಕಾರಾಮುಂಗೆ ವಂದಿಸಿದರು.