ಕನ್ನಡ ನಮ್ಮ ಮನೆ  ತಿದ್ದುತ್ತಾರೆ ತೆಲುಗು ನೆಂಟರ‌ ಮನೆ ಎಚ್ಚರವಾಗಿರಬೇಕು- ಚೆಲುವರಾಜ್

ಕನ್ನಡದ ಪ್ರತಿಭೆಗಳು ಈಗ ಪರಭಾಷೆಯಲ್ಲಿಯೂ ಒಂದರ ಹಿಂದೆ ಒಂದು ಚಿತ್ರಗಳಲ್ಲಿ ಅವಕಾಶ ಪಡೆಯುವ ಮೂಲಕ  ಮಿಂಚುತ್ತಿದ್ದಾರೆ. ಅದರ ಸಾಲಿಗೆ ಮತ್ತೊಂದು ‌ಪ್ರತಿಭೆ ಸೇರ್ಪಡೆಯಾಗಿದೆ ಅದುವೇ ಚಲುವರಾಜ್.

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಎ ಹರ್ಷ ಕಾಂಬಿನೆಷನ್ ನಲ್ಲಿ ಮೂಡಿ ಬಂದ  ಭಜರಂಗಿ-2,  ವೇದ ಚಿತ್ರಗಳಲ್ಲಿ ಖಳ ನಟನಾಗಿ ನಟಿಸಿರುವ ಚಲುವರಾಜ್, ತೆಲುಗು ಚಿತ್ರದಲ್ಲಿಯೂ ಬ್ಯುಸಿಯಾಗಿದ್ದಾರೆ. ಹೈದರಾಬಾದ್‍ನಲ್ಲಿ ಅಚಾನಕ್ ಆಗಿ ಸಿಕ್ಕ ಚಲುವರಾಜ್ ತಮ್ಮ ಸಿನಿಮಾ ಯಾನದ ಜೊತೆ ಮುಕ್ತವಾಗಿ ಮಾತು ಹಂಚಿಕೊಂಡಿದ್ದಾರೆ.

ತೆಲುಗಿನ “ಭೀಮ” ಚಿತ್ರದಲ್ಲಿ ನಟಿಸುತ್ತಿದ್ದೇನೆ “ಬಸವ ಮನ್ನಯ್ಯ” ಎನ್ನುವ ಹೋರಾಟಗಾರನ ಎನ್ನುವ ಹೋರಾಟಗಾರನ ಪಾತ್ರ.  ತೆಲುಗು ಚಿತ್ರರಂಗದಲ್ಲಿ ಇದು  ನನ್ನ ಮೂರನೇ ಚಿತ್ರ.  ಚಿತ್ರತಂಡದ ಪ್ರೀತಿ ಅಭಿಮಾನದಿಂದ ಕಾಣ್ತಾರೆ ಚಿತ್ರತಂಡ ತೋರುವ ಪ್ರೀತಿಗೆ ಅಬಾರಿ ಮತ್ತು ಋಣಿ ಎಂದಿದ್ದಾರೆ.

ಕನ್ನಡ ಮತ್ತು ತೆಲುಗು ಭಾಷೆಯ ನಡುವೆ ಹೊಂದಾಣಿಕೆ ಮಾಡುವುದೇ ಕಷ್ಟ. ಎರಡೂ ಉದ್ಯಮದಲ್ಲಿ ಕೆಲಸ ಮಾಡುವ ಅನುಭವವೇ ಬೇರೆ ಬೇರೆ. ಕನ್ನಡದಲ್ಲಾದರೆ ಎಲ್ಲರೂ ನಮ್ಮವರೇ ತಪ್ಪು ಮಾಡಿದರೆ ತಿದ್ದುತ್ತಾರೆ. ಎಚ್ಚರಿಸುತ್ತಾರೆ. ಇದು ನಮ್ಮ ಮನೆ, ತೆಲುಗು ಉದ್ಯಮ ನೆಂಟರ ಮನೆ ಇದ್ದಂತೆ  ಎಂದಿದ್ದಾರೆ. ಹೀಗಾಗಿ ಎಚ್ಚರಿಕೆಯಿಂದ ಕೆಲಸ‌ ಮಾಡಬೇಕು ಆ ಕೆಲಸ ತಾವು ಮಾಡುತ್ತಿದ್ದೇನೆ ಎಂದಿದ್ದಾರೆ

ಆದರ್ಶ ಫಿಲ್ಮ್ ಇನ್ಸಿಟಿಟೂಟ್‍ನಲ್ಲಿ ತರಬೇತಿ ಪಡೆದ   ನಂತರ “ಮಹಾಭಾರತ” ಧಾರಾವಾಹಿಯಲ್ಲಿ ನಟಿಸಿದ್ದೆ.ದುರ್ಯೋಧನ ಪಾತ್ರ. ಒಂದು ಸಾವಿರಕ್ಕೂ ಹೆಚ್ಚು ಎಪಿಸೋಡ್ ಪ್ರಸಾರವಾಯಿತು. ಜೊತೆಗೆ ಚಿತ್ರರಂಗದಲ್ಲಿಯೂ  ಅವಕಾಶ ಸಿಕ್ಕಿತು.

ಜೊತೆಗೆ ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡಿದ್ದೆ ರಮೇಶ್ ಪಂಡಿತ್, ಜಯಣ್ಣ ಸೇರಿದಂತೆ ಅನೇಕ ಕಲಾವಿದರು ನನ್ನನ್ನು ಗುರುತಿಸಿ ಪ್ರೋತ್ಸಾ ನೀಡಿದರು ಅವರ ಪ್ರೋತ್ಸಾಹವೂ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಕಾರಣ ಎಂದರೆ ತಪ್ಪಲ್ಲ ಎಂದು ಕೃತಜ್ಞತಾ ಭಾವ ವ್ಯಕ್ತಪಡಿಸಿದರು.

ಸ್ನೇಹಿತರು ಸೇರಿಕೊಂಡು ಗರುಡ ಪುರಾಣ ಚಿತ್ರ ಮಾಡುತ್ತಿದ್ದೇವೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಮರ್ಡರ್ ಮಿಸ್ಟ್ತ್ರಿಯೂ ಚಿತ್ರದಲ್ಲಿ  ಚಿತ್ರದ ಅಂತಿಮ ಕೆಲಸ ನಡೆಯುತ್ತಿದೆ. ವಿಭಿನ್ನವಾದ ಕಥೆಯನ್ನು ಚಿತ್ರದ ಮೂಲಕ ಹೇಳಹೊರಟಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು.

ಚಿತ್ರರಂಗದಲ್ಲಿ ಕಲಾವಿದನಾಗಿ ಚಿತ್ರರಂಗಕ್ಕೆ ಬಂದಿದ್ದೇನೆ, ಕಲಾವಿದನಾಗಿ ಸೇವೆ ಸಲ್ಲಿಸಬೇಕು ಮತ್ತು ಕಲಾವಿದನಾಗಿ ಸಾಯಬೇಕು ಎನ್ನುವುದು ನನ್ನ ಮಹಾದಾಸೆ. ಈಗ ಸತ್ತರೂ ಬೇಜಾರಿಲ್ಲ ಎಂದು ತಮ್ಮ ಗುರಿ ಮತ್ತು ಕನಸನ್ನು ಚಲುವ ರಾಜು ಹಂಚಿಕೊಂಡಿದ್ದಾರೆ.

ಶಿವಣ್ಣ ನನ್ನ ಪಾಲಿನ ದೇವರು

ಹಿರಿಯ ನಟ ಶಿವಣ್ಣ  ನನ್ನ ಪಾಲಿನ ಮಂಜುನಾಥ ಸ್ವಾಮಿ ,ಜೊತೆಗೆ ನಿರ್ದೇಶಕ ಎ. ಹರ್ಷ ಕೂಡ.ಅವರು ಗುರುತಿಸಿ ಅವಕಾಶ ನೀಡಿದ್ದರಿಂದ ಈ ಮಟ್ಟಕ್ಕೆ ಬರಲು ಸಹಕಾರಿಯಾಗಿದೆ. ಅವರು ನನ್ನ ಪಾಲಿನ ದೇವರು ಶಿವಣ್ಣ ಜೊತೆ ನಟಿಸಿದ್ದೇನೆ. ಅವರು ತೋರುವ ಪ್ರೀತಿಗೆ ಪದಗಳೇ ಬರುತ್ತಿಲ್ಲ. – ಚಲುವ ರಾಜ್, ಖಳ ನಟ

ತ್ರಿಮುರ್ತಿಗಳೊಂದಿಗೆ ನಟಿಸುವಾಸೆ

ಕನ್ನಡ ಚಿತ್ರರಂಗದಲ್ಲಿ ಎಲ್ಲರ ಜೊತೆ ನಟಿಸುವ ಆಸೆ ಇದೆ .ಶಿವಣ್ಣ ಅವರ ಜೊತೆ ಎಷ್ಟೇ ಚಿತ್ರಗಳು ಬಂದರೂ ನಟಿಸುತ್ತೇನೆ. ಶಿವಣ್ಣ ಅವರಲ್ಲದೆ ಸುದೀಪ್, ದರ್ಶನ್ , ಯಶ್ ಅವರ ಸಿನಿಮಾ ಗಳಲ್ಲಿ ನಟಿಸುವ ಉದ್ದೇಶವಿದೆ ಎಂದು ತಮ್ಮ ಮನದ ಆಸೆ ಹಂಚಿಕೊಂಡಿದ್ದಾರೆ ಚಲುವರಾಜ್