ಕನ್ನಡ ತೇರಿಗೆ ಭವ್ಯ ಸ್ವಾಗತ

  ಹಿರಿಯೂರು: ಜುಲೈ 20 ಹಿರಿಯೂರಿಗೆ ಆಗಮಿಸಿದ ಕನ್ನಡ ತೇರಿಗೆ ಭವ್ಯವಾಗಿ ಸ್ವಾಗತಿಸಲಾಯಿತು. ಇಲ್ಲಿನ ವಾಗ್ದೇವಿ ಶಾಲೆ, ವಾಣಿ ಪ್ರಥಮ ದರ್ಜೆ ಕಾಲೇಜು, ವೇದಾವತಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಸ್ವಾಗತಿಸಿ ಇತಿಹಾಸದ ಬಗ್ಗೆ ಮತ್ತು ಸ್ವಾತಂತ್ರ್ಯ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಲಾಯಿತು. ವಾಗ್ದೇವಿ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಕೆ ವಿ ಅಮರೇಶ್, ಕೆ ಜಿ ಶ್ರೀಧರ್, ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ಆರ್ ಪ್ರಕಾಶ್ ಕುಮಾರ್, ಯುವಜನ ಸಂಘದ ಅಧ್ಯಕ್ಷರಾದ ವಿ ಜಗದೀಶ್, ರಾಜೇಶ್ ಮತ್ತು ಶಿಕ್ಷಕ ವೃಂದದವರು ಹಾಗೂ ಯುವ ಬ್ರಿಗೇಡ್ ಪದಾಧಿಕಾರಿಗಳು ಉಪಸ್ಥಿತರಿದ್ದರು.