ಕನ್ನಡ – ತೆಲುಗು ನಾಟಕಗಳು ಪ್ರದರ್ಶನ ಕೊಳ್ಳುತ್ತಿರುವ ಏಕೈಕ ಜಿಲ್ಲೆ ನಮ್ಮ ಬಳ್ಳಾರಿ


ಸಂಜೆವಾಣಿ ವಾರ್ತೆ
ಬಳ್ಳಾರಿ, ಅ.5- ಕನ್ನಡ – ತೆಲುಗು ನಾಟಕಗಳು ಪ್ರದರ್ಶನ ಕೊಳ್ಳುತ್ತಿರುವ ಏಕೈಕ ಜಿಲ್ಲೆ ನಮ್ಮ ಬಳ್ಳಾರಿ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ರಾಜೇಶ್ವರಿ ಸುಬ್ಬರಾಯುಡು ಅಭಿಪ್ರಾಯಪಟ್ಟರು.
ನಗರದ ರಾಘವ ಕಲಾಮಂದಿರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್(ರಿ) ಆಯೋಜಿಸಿದ್ದ ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರ 142ನೇ ಜಯಂತಿ, ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ನಾಟಕೋತ್ಸವ 2022 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಕನ್ನಡ ಮತ್ತು ತೆಲುಗು ನಾಟಕ ರಂಗದಲ್ಲಿ ಆಧುನಿಕತೆಯನ್ನು ತೆರೆದಿಟ್ಟ ಮೊಟ್ಟ ಮೊದಲ ನಟರು ಬಳ್ಳಾರಿ ರಾಘವರು ಬಾಲ ನಟರಾಗಿ ಮಿಂಚಿದರು ಇವರ ಜೀವನವನ್ನು ನಾಟಕ ರಂಗಕ್ಕೆ ಮುಡಿಪಾಗಿಟ್ಟರು ಎಂದು ತಿಳಿಸಿದರು.
ಅಮೃತ ಮಹೋತ್ಸವದಂದು ಪ್ರತಿ ತಿಂಗಳು ಒಂದೊಂದು ಕನ್ನಡ ಮತ್ತು ತೆಲುಗು ನಾಟಕಗಳನ್ನು ರಾಘವ ಕಲಾ ಮಂದಿರದಲ್ಲಿ ಪ್ರದರ್ಶಿಸಬೇಕು ಎನ್ನುವ ಚರ್ಚೆಯಲ್ಲಿ ಇದ್ದೇವೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷರಾದ ಕೆ.ಕೋಟೇಶ್ವರ ರಾವ್ ರವರು ಹೇಳಿದರು
ಪೌರಾಣಿಕ ನಾಟಕದಲ್ಲಿ ಬರುವಂತಹ ರಾಗ ಮತ್ತು ಹಾಡುಗಳು ವಿನೋದಕ್ಕಾಗಿ ಅಲ್ಲ ಜನರನ್ನ ಚೈತನ್ಯವಂತರಾಗಿ ಮಾಡಲು ಎಂದು ಹೇಳಿದರು ರಂಗಭೂಮಿಯನ್ನು ಹೇಗೆ ಅಭಿವೃದ್ಧಿ ಪಡಿಸಬೇಕು ಶಿಕ್ಷಣದಲ್ಲಿ ರಂಗಭೂಮಿಯನ್ನು ಪರಿಚಯಿಸಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದರು ಎಂದು ರಾಘವರನ್ನು ಕುರಿತು ಬಿಕ್ಕಿ ಕೃಷ್ಣ ಗಜಲ್ ರಚಯುತ, ಸೀನಿಯರ್ ಜನರಲಿಸ್ಟ್ ಹೈದರಾಬಾದ್ ಇವರು ಉಪನ್ಯಾಸವನ್ನು ನೀಡಿದರು
ನಾನು ಕರೆಯದೆ ಬಂದ ಅತ್ತಿ ಯಾಕೆಂದರೆ ನಾಟಕ ರಂಗದಲ್ಲಿ ಯಶಸ್ಸು ಕಂಡ ಅತಿಥಿಗಳನ್ನು ಸತ್ಕರಿಸುತ್ತಿರುವುದು ನಮ್ಮ ನಿಮ್ಮೆಲ್ಲರ ಸೌಭಾಗ್ಯವಾಗಿದೆ
ರಾಘವರು ಒಂದು ಭಾಷೆಗೆ ಸೀಮಿತರಾದವರಲ್ಲ ಪಂಚ ಭಾಷೆಯನ್ನು ಬಲ್ಲವರು ಇಡೀ ಪ್ರಪಂಚವೇ ಕೊಂಡಾಡಿದ ಮಹನೀಯರು ನಮ್ಮ ಬಳ್ಳಾರಿ ರಾಘವರು
ಎಂದು ಲಲಿತಾ ಕಲಾ ಪರಿಷತ್ , ಅನಂತಪುರ ಅಧ್ಯಕ್ಷರಾದ ಡಾ. ವೆಂಕಟಸುಬ್ಬಯ್ಯನವರು ಹೇಳಿದರು.
ಬಳ್ಳಾರಿ ರಾಘವ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಗೋಕವಲಸ ಕೃಷ್ಣಮೂರ್ತಿ ಕಾಕುಳಂ ರವರಿಗೆ ನೀಡಿ ಗೌರವಿಸಲಾಯಿತು ರಾಘವರ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಕೆ.ಕಾಳಿದಾಸ ಬಳ್ಳಾರಿ ಹಾಗೂ ಕೆ.ಮಾರುತಿ ಮೋಹನ ಕೌತಾಳಂ ಕರ್ನೂಲು ಜಿಲ್ಲೆ ಇವರಿಗೆ ನೀಡಿ ಗೌರವಿಸಲಾಯಿತು. ಆಂಧ್ರಪ್ರದೇಶದ ಲಲಿತಾ ಕಲಾ ಪರಿಷತ್, ಅನಂತಪುರ ಇವರ ವತಿಯಿಂದ ಸಂಸ್ಥೆಯ ಗೌರವಧ್ಯಕ್ಷರಾದ ಕೆ ಚನ್ನಪ್ಪ ರವರಿಗೆ ಬಳ್ಳಾರಿ ರಾಘವ ರಾಜ್ಯ ಮಟ್ಟದ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ವೇದಿಕೆ ಮೇಲೆ ಸಂಸ್ಥೆಯ ಉಪಾಧ್ಯಕ್ಷ ರಾದ ಕೆ ರಾಮಾಂಜನೇಯ ಲು, ಎನ್ ಬಸವರಾಜ್, ಗೌರವ ಕಾರ್ಯದರ್ಶಿ ರಮೇಶ್ ಗೌಡ ಪಾಟೀಲ್, ಖಜಾಂಚಿ ಪಿ ಧನಂಜಯ, ಜಂಟಿ ಕಾರ್ಯದರ್ಶಿ ಕೆ ಪೊಂಪನಗೌಡ ಉಪಸ್ಥಿತರಿದ್ದರು.
ನಂತರ ದಿವಂಗತ ಶಿಷ್ಟ್ಲಾ ಚಂದ್ರಶೇಖರ ರವರ ರಚನೆಯ ಕೆ.ವಿ.ಪ್ರಸಾದ್ ನಿರ್ದೇಶನದಲ್ಲಿ “ಬಹುರೂಪಿ” ಎನ್ನುವ ತೆಲುಗು ಸಾಮಾಜಿಕ ನಾಟಕವನ್ನು ಸದ್ಗುರು ಕಳಾ ನಿಲಯಂ ಗುಂಟೂರು ರವರು ಪ್ರಸ್ತುತಪಡಿಸಿದರು. ಆರಂಭದಲ್ಲಿ ಪ್ರಾರ್ಥನೆ ಕುಮಾರಿ ಎನ್ ಶ್ರಾವ್ಯರೆಡ್ಡಿ, ಪ್ರಾಸ್ತಾವಿಕ ನುಡಿ ಸಂಸ್ಥೆಯ ಗೌರವಧ್ಯಕ್ಷರಾದ ಕೆ ಚನ್ನಪ್ಪ, ಸ್ವಾಗತ ರಮೇಶ್ ಗೌಡ ಪಾಟೀಲ್ ನೇರವೇರಿಸಿದರು. ಕೊನೆಯಲ್ಲಿ ಜಂಟಿ ಕಾರ್ಯದರ್ಶಿ ಕೆ ಪೊಂಪನಗೌಡ ವಂದನಾರ್ಪಣೆ ಮಾಡಿದರು, ಕಾರ್ಯಕ್ರಮ ನಿರೂಪಣೆ ಎನ್ ಶ್ರೀನಿವಾಸ ರೆಡ್ಡಿ ನಿರ್ವಹಿಸಿದರು.ಕೆ.ಕೃಷ್ಣ,ವಿ. ರಾಮಚಂದ್ರ, ಶೇಷ ರೆಡ್ಡಿ, ಶ್ಯಾಮಸುಂದರ್, ಮೋಹನ್ ರೆಡ್ಡಿ,ಗಾದಿಲಿಂಗನಗೌಡ,ಸಿ ಎ ಚೌದರಿ, ರಮಣಪ್ಪ ಭಜಂತ್ರಿ ಕಲಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.