ಕನ್ನಡ ತಂತ್ರಜ್ಞಾನ ಪುಸ್ತಕಗಳ ಉಚಿತ ವಿತರಣೆ

ಧಾರವಾಡ, ಆ12: ಕೆ. ಎಲ್. ಎಸ್. ವಿ. ಡಿ. ಐ. ಟಿ. ಮಹಾವಿದ್ಯಾಲಯವು ಕನ್ನಡ ಭಾಷೆಯಲ್ಲಿ ತಾಂತ್ರಿಕ ಶಿಕ್ಷಣದ ಅರಿವು ಮೂಡಿಸಲು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ತಾಂತ್ರಿಕ ವಿಷಯಗಳನ್ನೊಳಗೊಂಡ ಕನ್ನಡ ಪುಸ್ತಕವನ್ನು ಉಚಿತವಾಗಿ ವಿತರಿಸಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಪ್ರಸರಣ ವಿಭಾಗವು ಮುದ್ರಿಸಿರುವ 38 ತಾಂತ್ರಿಕ ವಿಷಯಗಳ ಕನ್ನಡ ಪುಸ್ತಕವನ್ನು ವಿಭಾಗ ಮುಖ್ಯಸ್ಥರು ಖರೀದಿಸಿ , ತಲಾ 76 ಪುಸ್ತಕಗಳನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಸರೊಳ್ಳಿ ಮತ್ತು ಹಾವಗಿ ವಿದ್ಯಾರ್ಥಿಗಳಿಗೆ ವಿತರಿಸಿದರು.
ಪ್ರಾಚಾರ್ಯ ಡಾ.ವಿ. ಎ. ಕುಲಕರ್ಣಿ ಮಾತನಾಡಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಕುರಿತು ಮಾಹಿತಿಯನ್ನು ಕನ್ನಡದಲ್ಲಿ ತಿಳಿದುಕೊಳ್ಳುವುದರಿಂದ ವಿಷಯದಲ್ಲಿ ಆಳವಾದ ಜ್ಞಾನವನ್ನು ಹೊಂದಬಹುದಾಗಿದೆ ಮತ್ತು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಮಹಾವಿದ್ಯಾಲಯವು ಈ ಉಪಕ್ರಮವನ್ನು ಕೈಗೊಂಡಿದೆ ಎಂದು ಹೇಳಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಸರೊಳ್ಳಿಯ ಮುಖ್ಯೋಪಾಧ್ಯಾಪಕರಾದ ಶ್ರೀಮತಿ. ಕೆ.ಎನ್. ಪಾಠಣಕರ್ ಹಾಗೂ ಹಾವಗಿ ಶಾಲೆಯ ಮುಖ್ಯೋಧ್ಯಾಪಕರಾದ ಬಂಡಿವಾಡ ಅವರು ಮಕ್ಕಳಲ್ಲಿ ತಾಂತ್ರಿಕ ಜ್ಞಾನಾಭಿವೃದ್ಧಿಗೆ ಮಹಾವಿದ್ಯಾಲಯವು ಉಚಿತವಾಗಿ ಪುಸ್ತಕಗಳನ್ನು ವಿತರಿಸಿರುವುದು ತಮ್ಮ ವಿದ್ಯಾರ್ಥಿಗಳಿಗೆ ಸಂತಸ ತಂದಿದೆ ಹಾಗೂ ವಿ. ಡಿ. ಐ. ಟಿ. ಮಹಾವಿದ್ಯಾಲಯಕ್ಕೆ ತಾವು ಆಭಾರಿಯಾಗಿದ್ದೇನೆಂದು ಹೇಳಿದರು. ಪ್ರತಿ ತಿಂಗಳು ಎರಡು ಸರ್ಕಾರಿ ಶಾಲೆಗಳಿಗೆ ವಿ ಡಿ ಐ ಟಿ ವತಿಯಿಂದ ತಲಾ 76 ತಾಂತ್ರಿಕ ಪುಸ್ತಕಗಳನ್ನು ಉಚಿತ ವಾಗಿ ನಿಡಲಾಗುತ್ತಿದೆ. ಮಹಾವಿದ್ಯಾಲಯದ ವಿವಿಧ ವಿಭಾಗದ ಡೀನ್ ಗಳು ಮತ್ತು ವಿಭಾಗ ಮುಖ್ಯಸ್ಥರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪೆÇ್ರ ರಾಕೇಶ್ ಪಾಟೀಲ್ ಕಾರ್ಯಕ್ರಮ ಸಂಯೋಜಿಸಿದ್ದರು.