ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ಉದ್ಘಾಟನೆ

ದೇವದುರ್ಗ.ಜ.೧೦- ರಾಯಚೂರು ಜಿಲ್ಲೆ ಕನ್ನಡ ಜಾನಪದದ ತವರೂರಾಗಿದ್ದು, ಮುಂದಿನ ಮಾರ್ಚ ೨೫ರಂದು ರಾಯಚೂರಿನಲ್ಲಿ ಜಾನಪದ ಪರಿಷತ್ತಿನಿಂದ ಮಹಿಳಾ ಸಮ್ಮೇಳನ ನಡೆಸಲಾಗುತ್ತದೆ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಎಸ್.ಬಾಲಾಜಿ ಹೇಳಿದರು.
ಅವರು ಪಟ್ಟಣದ ಸರಕಾರಿ ಬಾಲಕೀಯರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದೇವದುರ್ಗ ತಾಲೂಕ ಕನ್ನಡ ಜಾನಪದ ಮಹಿಳಾ ಘಟಕದ ಉದ್ಘಾಟನೆ ಮತ್ತು ಪದಗ್ರಹಣ ಕಾರ್ಯಕ್ರಮವನ್ನು ಭತ್ತ ಕುಟ್ಟುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈ ನಾಡಿನ ಕೃಷಿಕರು, ದುಡಿಯುವ ವರ್ಗ ಜಾನಪದದ ವಾರಸುದಾರರು, ಜಾನಪದ ಹುಟ್ಟಿಗೆ ಯಾವುದೇ ಇತಿಹಾಸವಿಲ್ಲ, ಜನರಲ್ಲಿ ಬಾಯಿಂದ ಬಾಯಿಗೆ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸೊಗಡಾಗಿದೆ, ಇಂತಹ ಸೊಗಡು ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿದ್ದು, ಇದನ್ನು ಉಳಿಸುವ ಜನವ್ದಾರಿ ನಮ್ಮ ಮೇಲಿದೆ ಎಂದರು.ಆಧುನಿಕ ತಂತ್ರಜ್ಞಾನದಲ್ಲಿ ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ನಾವು ಮರೆಯುತ್ತಿದ್ದೇವೆ, ಜಾನಪದ ವಿಶ್ವ ವಿದ್ಯಾಲಯಗಳು ಹುಟ್ಟಿದರು ಸಹ ಅವುಗಳಲ್ಲಿ ನೇಮಕಾತಿಯನ್ನು ಜಾನಪದ ಅನುಭವವಿರುವ ಪ್ರಾದ್ಯಾಪಕರಿಲ್ಲ, ಅನುಭವ ಪಡೆದವರನ್ನು ನೇಮಕಾತಿ ಮಾಡಿದರೆ ಉತ್ತಮ ಎಂದು ಸಲಹೆ ನೀಡಿದರು. ಆದರೆ ಈ ವಿಶ್ವ ವಿದ್ಯಾಲಯಗಳಲ್ಲಿ ಜಾನಪದ ಸಾಹಿತ್ಯವನ್ನು ಮರೆತು ಹೋಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಮುಂದಿನ ೨೦೨೨ರ ವೇಳೆಗೆ ರಾಜ್ಯದ ಸುಮಾರು ೩೨ ಸಾವಿರ ಹಳ್ಳಿಗಳಲ್ಲಿ ಗ್ರಾಮ ಘಟಕಗಳುನ್ನು ರಚನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಜಾನಪದ ಪರಂಪರೆಯನ್ನು ಉಳಿಸುತ್ತೇವೆ, ಇದಕ್ಕೆ ಗ್ರಾಮೀಣ ಭಾಗದಲ್ಲಿ ಮನೆ ಮಾತಾಗಿರುವ ಜಾನಪದವನ್ನು ಅವರ ಮನೆಯ ಅಂಗಳದಲ್ಲಿ ಆಚರಿಸಿ ಜಾಗೃತಿ ಮೂಡಿಸುತ್ತೇವೆ. ಈ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕಗಳಲ್ಲಿ ಜಾನಪದ ಪರಿಷತ್ತಿನ ಘಟಕ ಹಾಗೂ ಮಹಿಳಾ ಘಟಕವನ್ನು ರಚನೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿಕದ್ದ ಜಾನಪದ ಕಲ್ಯಾಣ ಕರ್ನಾಟಕ ತವರೂರಾಗಿದ್ದು, ರಾಯಚೂರಿನಲ್ಲಿ ಮುಂದಿನ ೨೫ನೇ ಮಾರ್ಚ ೨೦೨೧ರಂದು ಕನ್ನಡ ಜಾನಪದ ಸಮ್ಮೇಳನ ಅದ್ದೂರಿಯಾಗಿ ನಡೆಯಲಿದೆ ಎಂದು ದೇವದುರ್ಗ ಕನ್ನಡ ಜಾನಪದ ಪರಿಷತ್‌ನ ರಾಜ್ಯಧ್ಯಕ್ಷರಾದ ಡಾ.ಎಸ್.ಬಾಲಾಜಿ ಹೇಳಿದರು.
ಅವರು ಗುರುವಾರ ಸಂಜೆ ದೇವದುರ್ಗ ಪಟ್ಟಣದ ಸರಕಾರಿ ಬಾಲಕೀಯರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವದುರ್ಗ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ಉದ್ಘಾಟನೆ ಮತ್ತು ಪದಗ್ರಹಣ ಕಾರ್ಯಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಭಾಗೀಯ ಸಂಚಾಲಕರಾದ ಶರಣಪ್ಪ ಗೋನಾಳ ಅವರು ಮಾತನಾಡಿ ತಾಯಿಯೊಬ್ಬರು ಜಾನಪದ ಹಾಡಿದರೆ, ಜಾನಪದ ಉಳಿಸಿದಂತೆ, ಮನೆಯಿಂದ ಮಹಿಳೆಯಿಂದಲೇ ಜಾನಪದ ಉಳಿಸುವ ಕಾರ್ಯವಾಗಬೇಕೆಂದು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಪರಿಷತ್‌ನಾಡಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ದಾನಮ್ಮ ಅವರು ಮಾತನಾಡಿ ನಮ್ಮ ಸಂಸ್ಕೃತಿ ಜೊತೆ ಜಾನಪದ ಬೆಳೆದಿದೆ, ಜನನಯಿಂದ ಭಾಷೆ ಹುಟ್ಟುವ ಮೊದಲು ಜಾನಪದ ಹುಟ್ಟಿದೆ, ಇದಕ್ಕೆ ಇತಿಹಾಸವಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಗಂಗಮ್ಮ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿದ್ದ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಸನಗೌಡ ದೇಸಾಯಿ, ರಾಮನಗರ ಜಾನಪದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ಕಾಂತಪ್ಪ, ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಮಲ್ಲಯ್ಯ, ಕಸಾಪ ಮಾಜಿ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಮೈನುದ್ದಿನ್ ಕಾಟಮಳ್ಳಿ, Pದೇವದುರ್ಗ ತಾಲೂಕ ಕನ್ನಡ ಜಾನಪದ ಪರಿಷತ್Pನ ತಾಲೂಕಾಧ್ಯಕ್ಷ ಬಸವರಾಜ ಮಡಿವಾಳ, ದೇವದುರ್ಗ ತಾಲೂಕ ಮಹಿಳಾ ಘಟಕದ ಅಧ್ಯಕ್ಷಳಾದ ಹಂಪಮ್ಮ, ಜಿಲ್ಲಾ ಪದಾಧಿಕಾರಿಗಳಾದ ರಾಜೇಶ್ವರಿ, ಲಲಿತಾ ಮುಂತಾದವರು ಭಾಗವಹಿಸಿದ್ದರು. ಶಿಕ್ಷಕಿ ಸವಿತಾ ನಿರೂಪಿಸಿ, ಜ್ಯೋತಿ ಸ್ವಾಗತಿಸಿ, ರಾಜೇಶ್ವರಿ ವಂದಿಸಿದರು.
ಮಹಿಳಾ ಘಟಕ ರಚನೆ : ಅಧ್ಯಕ್ಷ-ಹಂಪಮ್ಮ, ಕಾರ್ಯಾಧ್ಯಕ್ಷ- ಸವಿತಾ, ಪ್ರಧಾನ ಕಾರ್ಯದರ್ಶಿ-ಶೋಭಾ ಶೇಟ್ಟಿ, ಕೋಶಾಧ್ಯಕ್ಷ-ಪಾರ್ವತಿ ಅಶೋಕ, ಸಂಘಟನಾ ಕಾರ್ಯದರ್ಶಿ-ಕವಿತಾ ಧನರಾಜ್, ಪತ್ರಿಕಾ ಕಾರ್ಯದರ್ಶಿ-ಜ್ಯೊತಿ ಗೌಡರ್, ಜಂಟಿ ಕಾರ್ಯದರ್ಶಿ-ರಾಜೇಶ್ವರಿ, ಸಂಚಾಲಕರು-ಅಂಜುಳಾ, ಬಸ್ಸಮ್ಮ ಹಾಗೂ ಕಾರ್ಯಕಾರಿ ಸಮಿತಿ ರಚನೆ ಮಾಡಿ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರ ನೀಡಲಾಯಿತು.

ಪೋಟೋ೧೦ಡಿವಿಡಿ,೧

Spread the love