ಕನ್ನಡ ಜಗತ್ತು ನಿರಂತರ ಚಲನಶೀಲವಾಗಿದೆ: ಭೀಮಾಶಂಕರ ಬಿರಾದಾರ

ಬಸವಕಲ್ಯಾಣ: ನ.11:ಕನ್ನಡ ಸಾಂಸ್ಕøತಿಕ ಜಗತ್ತು ನಿರಂತರ ಚಲನಶೀಲವಾಗಿದೆ. ಅದು ಎಲ್ಲಿಯೂ ಜಡಗೊಂಡಿಲ್ಲ. ಮುಕ್ಕಾಗಿಲ್ಲ ಎಂದು ನಗರದ ಅಕ್ಕಮಹಾದೇವಿ ಕಾಲೇಜು ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ ಹೇಳಿದರು.

ನಗರದ ಶರಣ ನಾಡು ಪದವಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ಒಂದು ಅವಲೋಕನ ಕುರಿತ ವಿಶೇ?À ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಲ ಕಾಲಕ್ಕೆ ಹೊಸ ಚಿಂತನೆಗಳು, ಹೊಸ ಸಿದ್ಧಾಂತಗಳು ರೂಪಿಸುತ್ತ ಬಂದ ಕನ್ನಡ ಲೋಕ ನಿತ್ಯ ಚಲನಶೀಲವಾಗಿದೆ ಎಂದರು.

ಕವಿರಾಜಮಾರ್ಗಕಾರ, ಪಂಪ, ಬಸವಣ್ಣ, ಅಲ್ಲಮ, ಸೇರಿದಂತೆ ಕುವೆಂಪು, ಕೆವಿಎನ್ ರಂತಹ ಆಧುನಿಕ ವಿದ್ವಾಂಸರು ಕನ್ನಡದಲ್ಲಿ ಗುರುಪರಂಪರೆಯೊಂದನ್ನು ಸೃಷ್ಟಿಸಿದ್ದಾರೆ. ಕನ್ನಡದ ಹಲವು ಬರಹಗಾರರು ತಮ್ಮ ಬರಹಗಳಿಂದ ಅನೇಕ ಸಾಹಿತ್ಯಕ, ಸಾಮಾಜಿಕ ಸಿದ್ಧಾಂತ ಕಟ್ಟಿ ಕೊಟ್ಟಿದ್ದಾರೆ.

ಆಧುನಿಕ ಕಾಲದಲ್ಲಿ ಖಾಸಗಿ ವಲಯದಲ್ಲಿ, ಮಾರುಕಟ್ಟೆ ನೆಲೆಗಳಲ್ಲಿ ಕನ್ನಡಿಗರಿಗೆ ದುಡಿಯುವ ಅವಕಾಶ ಸಾಧ್ಯವಾಗಬೇಕು. ತಂತ್ರಜ್ಞಾನದ ಜಗತ್ತಿನಲ್ಲಿ ಕನ್ನಡದ ಬಳಕೆ ಮತ್ತು ಅಸ್ತಿತ್ವವು ಶುದ್ಧ, ಖಚಿತ ಮತ್ತು ಸ್ಪ?À್ಟವಾಗಿ ರೂಪುಗೊಳ್ಳಬೇಕು. ಕನ್ನಡವು ಬೌದ್ಧಿಕ, ವೈಚಾರಿಕ, ಸಾಂಸ್ಕೃತಿಕವಾಗಿ ವಿಕಾಸವಾಗುವುದು ಒಂದು ಆಯಾಮವಾದರೆ, ಆಡಳಿತಾತ್ಮಕ ಆಡುನುಡಿಯಾಗುವದು, ತಂತ್ರಜ್ಞಾನದಲ್ಲಿ ಸಹಜ ಬಳಕೆಯಾಗುವದು ಇನ್ನೊಂದಾಗಿದೆ. ಇವೆರಡೂ ಬೆಳವಣಿಗೆ ಕನ್ನಡದ ಸಂವರ್ಧನೆಯಾಗಿದೆ ಎಂದರು.

ಸರಕಾರಿ ಪಿಯು ಕಾಲೇಜು ಉಪನ್ಯಾಸಕ ರೇವಣಸಿದ್ದಪ್ಪ ದೊರೆ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಬಹುತ್ವ ಬಹಳ ದಟ್ಟವಾಗಿದೆ. ಯಾವುದೇ ಭೇದವಿಲ್ಲದೆ ಎಲ್ಲ ಉದಾತ್ತ ಸಂಗತಿಗಳು ಕನ್ನಡ ಸಂಸ್ಕೃತಿ ಒಳಗೊಂಡಿದೆ. ಕನ್ನಡ ಎಲ್ಲಾ ಕಾಲದಲ್ಲಿಯೂ ಅನ್ನದ ಭಾ?Éಯೇ ಆಗಿದೆ. ಕನ್ನಡ ಭಾ?É ರಾಜಕೀಯ ಸಂಗತಿಯಾಗುವುದಕ್ಕಿಂತ ಸಂಸ್ಕೃತಿಯ ಸಂಗತಿಯಾಗಬೇಕು. ಎಲ್ಲರ ಕನ್ನಡವಾಗಬೇಕು. ಓದಲು, ಬರೆಯಲು, ಮಾತನಾಡಲು ಕನ್ನಡ ಕಲಿತರೆ ಅನ್ಯ ಭಾ?Éಗಳು ಸಹಜವಾಗಿ ಸಿದ್ದಿಸುತ್ತವೆ. ಕಲಿಕೆಯಲ್ಲಿ ಕನ್ನಡ ಮೊದಲ ಭಾ?Éಯಾಗಬೇಕು ಎಂದರು.

ಅಲ್ಲಮಪ್ರಭು ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ಅಕ್ಕಣ್ಣ ಮಾತನಾಡಿ, ಕನ್ನಡ ಅತ್ಯಂತ ಪ್ರಾಚೀನ ಭಾ?É. ಶಾಸ್ತ್ರೀಯ ಮಾನ್ಯತೆ ಪಡೆದ ಅಭಿಜಾತ ಭಾ?É. ಕನ್ನಡದಲ್ಲಿ ಹೆಚ್ಚು ಮಾತನಾಡುವುದು, ವ್ಯವಹಾರದಲ್ಲಿ, ಆಡಳಿತದಲ್ಲಿ ಕನ್ನಡ ಬಳಸುವುದರಿಂದ ಕನ್ನಡದ ಬೆಳವಣಿಗೆ ಸಾಧ್ಯ. ಕನ್ನಡದ ಅನೇಕ ಲೇಖಕರು ಇಂಗ್ಲಿ?ï ಓದಿದರೂ, ಅಸ್ತಿತ್ವ ರೂಪಿಸಿಕೊಂಡಿದ್ದು ಕನ್ನಡ ಸಾಹಿತ್ಯದಲ್ಲಿ, ಕನ್ನಡ ಶಿಕ್ಷಣದ ಮಾಧ್ಯಮವಾದರೆ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಆಧುನಿಕತೆ, ಜಾಗತೀಕರಣ, ಉದಾರೀಕರಣಗಳು ದೇಶಿ ಭಾ?Éಗೆ ಮಾರಕ . ಅದನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಆಲೋಚಿಸಬೇಕಾಗಿದೆ ಎಂದು ತಿಳಿಸಿದರು. ಕಾಲೇಜು ಅಧ್ಯಕ್ಷ ಅನಿಲಕುಮಾರ ರಂಜೇರೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಪಂ ಮಾಜಿ ಸದಸ್ಯ ಗುಂಡುರೆಡ್ಡಿ ಅವರನ್ನು ಕಾಲೇಜಿನಿಂದ ಸನ್ಮಾನಿಸಲಾಯಿತು. ಗೋದಾವರಿ ಸ್ವಾಗತಿಸಿದರು. ಎಂ.ಡಿ. ಜಿಯಾವುದ್ದಿನ್ ನಿರೂಪಿಸಿದರು. ಕಾಲೇಜು ಪ್ರಾಚಾರ್ಯ ಶ್ರೀನಿವಾಸ ಶಿಂಧೆ ವಂದಿಸಿದರು.