ಕನ್ನಡ ಚಿತ್ರಸಾಹಿತಿ ತಂಗಾಳಿ ನಾಗರಾಜ್ ನಿಧನ

ಬೆಂಗಳೂರು, ಸೆ 12 – ಕನ್ನಡ ಸಿನಿಮಾದ ಖ್ಯಾತ ಚಿತ್ರಸಾಹಿತಿ, ಗೀತ ರಚನೆಕಾರ ತಂಗಾಳಿ ನಾಗರಾಜ್ ಅವರು ವಿಧಿವಶರಾಗಿದ್ದಾರೆ.

ಶನಿವಾರ ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

‘ತಂಗಾಳಿ ಎಲ್ಲಿಂದ ಬೀಸುವೆ’ ಹಾಡು ಬರೆದು ಖ್ಯಾತರಾದ ನಾಗರಾಜ್ ಆನಂತರ ತಂಗಾಳಿ ನಾಗರಾಜ್ ಎಂದೇ ಪರಿಚಿತರಾದರು. ಕಲಾಸಿಪಾಳ್ಯದ ‘ಧೂಳ್ ಮಗಾ ಧೂಳ್’ ಹಾಡು ಸೇರಿ ಹಲವು ಹಿಟ್‌ಗಳನ್ನು ತಂಗಾಳಿ ನಾಗರಾಜ್ ಬರೆದಿದ್ದಾರೆ.

ಕಳೆದ ಹದಿನೈದು ವರ್ಷಗಳಿಂದಲೂ ತಂಗಾಳಿ ನಾಗರಾಜ್ ಕನ್ನಡ ಸಿನಿಮಾಗಳಲ್ಲಿ ಗೀತರಚನೆಕಾರರಾಗಿ ಕೆಲಸ ಮಾಡುತ್ತಿದ್ದು, ನೂರಾರು ಹಿಟ್ ಹಾಡುಗಳನ್ನು ಬರೆದಿದ್ದಾರೆ.

ತಂಗಾಳಿ ನಾಗರಾಜ್ ಅವರ ನಿಧನಕ್ಕೆ ಗೀತರಚನೆಕಾರ ಕವಿರಾಜ್ ಸೇರಿದಂತೆ ಸ್ಯಾಂಡಲ್ ವುಡ್ ನ ಇತರ ಗೀತರಚನೆಕಾರರು, ಸಂಗೀತ ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ.