ಕನ್ನಡ ಚಟುವಟಿಕೆ ನಿರಂತರ ನಡೆಯಲಿ

ಬೀದರ್:ಜು.18: ಗಡಿ ಜಿಲ್ಲೆಯಲ್ಲಿ ಕನ್ನಡ ಪರ ಚಟುವಟಿಕೆಗಳು ನಿರಂತರ ನಡೆಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಆಶಯ ವ್ಯಕ್ತಪಡಿಸಿದರು.

ಶ್ರೀ ಕನಕ ಕನ್ನಡ ಸಾಂಸ್ಕøತಿಕ ಸಂಘದ ವತಿಯಿಂದ ನಗರದ ಕುಂಬಾರವಾಡ ರಸ್ತೆಯಲ್ಲಿ ಇರುವ ಕರುನಾಡು ಸಾಂಸ್ಕøತಿಕ ಭವನದಲ್ಲಿ ಆಯೋಜಿಸಿದ್ದ ಕವಿಗೋಷ್ಠಿ ಹಾಗೂ ಸಾಂಸ್ಕøತಿಕ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘ ಸಂಸ್ಥೆಗಳು ಕನ್ನಡ ಭಾಷೆ ಹಾಗೂ ಸಂಸ್ಕøತಿ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.

ಕವಿಗಳು ಜನ ಪರ ಕಾಳಜಿಯ ಸಾಹಿತ್ಯ ರಚನೆಗೆ ಮುಂದಾಗಬೇಕು ಎಂದು ಸಾಹಿತಿ ಸಂಜೀವಕುಮಾರ ಅತಿವಾಳೆ ತಿಳಿಸಿದರು.

ಅಳಿವಿನ ಅಂಚಿನಲ್ಲಿ ಇರುವ ಜಾನಪದ ಕಲೆ ಉಳಿವಿಗೆ ಎಲ್ಲರೂ ಸಂಘಟಿತ ಪ್ರಯತ್ನ ನಡೆಸಬೇಕಿದೆ ಎಂದು ಪ್ರಭಾರ ಜಿಲ್ಲಾ ವಿಮಾ ಅಧಿಕಾರಿ ಅನಿಲಕುಮಾರ ಹಾಲಹಳ್ಳಿ ಹೇಳಿದರು.

ಕಲೆ, ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಹಾಗೂ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಸಂಘ ಸ್ಥಾಪಿಸಲಾಗಿದೆ. ಸಂಘದಿಂದ ಬರುವ ದಿನಗಳಲ್ಲಿ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಶ್ರೀ ಕನಕ ಕನ್ನಡ ಸಾಂಸ್ಕøತಿಕ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ತಿಳಿಸಿದರು.

ಗೊಂಡ ಸಾಹಿತ್ಯ, ಸಾಂಸ್ಕøತಿಕ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶರಣಪ್ಪ ಮಲಗೊಂಡ, ಪಿಡಿಒ ಸಂಘದ ಜಿಲ್ಲಾ ಘಟಕದ ಖಜಾಂಚಿ ದೇವಪ್ಪ ಚಾಂಬೋಳೆ, ಸಾಹಿತಿ ವೀರೇಶ್ವರಿ ಮೂಲಗೆ ಮಾತನಾಡಿದರು.

ಕವಿಗಳಾದ ನಿರಹಂಕಾರ ಬಂಡಿ, ಚನ್ನಪ್ಪ ಸಂಗೋಳಗಿ, ಮಹಮ್ಮದ್ ತಾಜೊದ್ದಿನ್, ಮಂಗಲಾ ಪೋಳ, ಲಕ್ಷ್ಮಣ ಮೇತ್ರೆ, ಅವಿನಾಶ ಸೋನೆ, ಅಜೀತ್ ಎನ್. ರವಿದಾಸ ಕಾಂಬಳೆ ಮತ್ತು ಸಾವಿತ್ರಿ ಎಂ. ಕೌ. ಕವನ ವಾಚಿಸಿದರು.

ಕಲಾವಿದರಾದ ಅಂಬವ್ವ ಮಲ್ಕಾಪುರ, ಮನೋಹರ ಹುಪಳಾ, ಕಾಂಚನಾ, ಮೀನಾಕ್ಷಿ, ಭಾಗ್ಯಶ್ರೀ, ಶೈಯಾ ದುರ್ಗೆ, ಭವಾನಿ ವಗ್ಗೆ, ಕನಕರಾಜ ಜೋಳದಾಪಕೆ ಹಾಗೂ ಸಂಗಡಿಗರು ವಚನ ಗಾಯನ, ದಾಸರ ಪದ, ಜಾನಪದ ಗೀತೆ, ಭರತನಾಟ್ಯ, ಸಾಮೂಹಿಕ ನೃತ್ಯ ಪ್ರದರ್ಶಿಸಿ ಸಭಿಕರ ಮನ ರಂಜಿಸಿದರು.

ಸುನೀಲ್ ಚಿಲ್ಲರ್ಗಿ, ಭೀಮಶಾ ನಿರ್ಣಾಕರ್ ಇದ್ದರು. ಮುರಲಿನಾಥ ಮೇತ್ರೆ ನಿರೂಪಿಸಿದರು. ಲಕ್ಷ್ಮಣ ಮೇತ್ರೆ ಸ್ವಾಗತಿಸಿದರು. ಶ್ರೀಪತಿ ಮೇತ್ರೆ ವಂದಿಸಿದರು.