
ಕಲಬುರಗಿ: ಮೇ.6:ದೇಶಕ್ಕೆ ಸ್ವಾತಂತ್ರ್ಯ ಬರುವ ಪೂರ್ವದಿಂದಲೇ ಉದಯಿಸಿ ಕನ್ನಡ ನಾಡು, ನುಡಿ, ಕಲೆ.ಸಾಹಿತ್ಯ, ಜಾನಪದ ಸಂಸ್ಕ್ರತಿಗಳ ಸಂವರ್ಧನೆ ಹಾಗೂ ಸಂರಕ್ಷಣೆ ಮಾಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯವಾಗಿದೆ ಎಂದು ಕಮಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಮಾರುತಿ ಮರ್ಪಳ್ಳಿ ಹೇಳಿದರು.
ಮಹಾಗಾಂವ ಕ್ರಾಸ್ ನಲ್ಲಿರುವ ಮೌಂಟ್ ವೇವ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮಂಗಳವಾರ ಕಮಲಾಪುರ
ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ 109 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸತ್ಕಾರ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡದ ಅವರು ಮುಂಬರುವ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ಕನ್ನಡ ಉಳಿಸಿ ಬೆಳೆಸಲು ಕಸಾಪದೊಂದಿಗೆ ಕೈ ಜೊಡಿಸಬೇಕಿದೆ ಎಂದರು.
ಮಹಾಗಾಂವ ಕ್ರಾಸ್ ನಲ್ಲಿರುವ ಮೌಂಟ್ ವೇವ್ ಶಿಕ್ಷಣ ಸಂಸ್ಥೆ ಯ ಅಧ್ಯಕ್ಷ ಶಾಂತಕುಮಾರ ಪುರದಾಳ ಅಧ್ಯಕ್ಷತೆ ಮಾತನಾಡಿದರು.ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಸುರೇಶ ಲೇಂಗಟಿ ಆಶಯ ನುಡಿಗಳನ್ನು ಹೇಳಿದರು.
ಮಹಾಗಾಂವ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರು ಚಂದ್ರಕಾಂತ ಬಿರಾದರ ಮಾತನಾಡಿದರು.ಕಮಲಾಪುರ ಕಸಾಪ ನಿಕಟಪೂರ್ವ ಅಧ್ಯಕ್ಷ ದಾಸಿಮಯ್ಯ ವಡ್ಡನಕೇರಿ, ಮಹಾಗಾಂವ ಕ್ರಾಸ್ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಗುರು ವಿರೇಂದ್ರ ಕಲ್ಯಾಣ, ಕಮಲಾಪುರ ಕಸಾಪ ಮಹಿಳಾ ಪ್ರತಿನಿಧಿ ಕಸ್ತೂರಿಬಾಯಿ ರಾಜೇಶ್ವರ,
ಸಂಘಟನಾ ಕಾರ್ಯದರ್ಶಿ ಗಳಾದ ಆನಂದ ವಾರಿಕ, ಚೇತನ ಮಹಾಜನ, ಅಲ್ಪಸಂಖ್ಯಾತ ಪ್ರತಿನಿಧಿ ಫಯಾಜ ಕಮಲಾಪುರ, ಅನಂತಕುಮಾರ ಪಾಟೀಲ್, ಸಂತೋಷ ಜೊಗುರ, ಶರಣು, ಸುರೇಶ, ಇತರರು ಇದ್ದರು.ಮಹಾಗಾಂವ ಕಸಾಪ ವಲಯ ಅಧ್ಯಕ್ಷ ಅಂಬಾರಾಯ ಮಡ್ಡೆ ನಿರೂಪಿಸಿದರು, ಮಲ್ಲಿನಾಥ ಅಂಬಲಗಿ ಸ್ವಾಗತಿಸಿದರು, ಸಂಜಯಕುಮಾರ ನಾಟಿಕಾರ ವಂದಿಸಿದರು.
ವಿಶೇಷ ಸತ್ಕಾರ
ಕನ್ನಡ ಸಾಹಿತ್ಯ ಪರಿಷತ್ತಿನ ಸದ್ಸಯರಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿರುವವರಿಗೆ ಸತ್ಕರಿಸಿ ಪೆÇ್ರೀತ್ಸಾಹಿಸಲಾಯಿತು. ರೇವಣಸಿದ್ದಪ್ಪ ಮಂಗಳೂರಕರ
ಕುರಿಕೋಟಾ (ನಾಟಕ) ,
ನಾಗಣ್ಣ ಕೊಡ್ಲಿ ರಂಗಭೂಮಿ ಕಲಾವಿದ, ಸಿದ್ರಾಮ (ಕೃಷಿ)
ವಿವಿಧ ಕ್ಷೇತ್ರಗಳಲ್ಲಿ ಎಲೆಮರೆ ಕಾಯಿಯಂತೆ ನಿಶ್ವಾರ್ಥ ಸೇವೆ ಮಾಡುತ್ತಿರುವವರನ್ನು ಗುರುತಿಸಿ ಸತ್ಕಾರ ಮಾಡುವ ಮೂಲಕ ಹೆಚ್ಚಿನ ಸೇವೆ ಪ್ರೇರಣೆ ನೀಡುತ್ತಿರುವ ಕಮಲಾಪುರ ಕಸಾಪ ಕಾರ್ಯ ಶ್ಲಾಘನೀಯ,
ಶಾಂತಕುಮಾರ ಪುರದಾಳ ಅಧ್ಯಕ್ಷ , ಮೌಂಟ್ ವೇವ್ ಶಿಕ್ಷಣ ಸಂಸ್ಥೆ ಮಹಾಗಾಂವ ಕ್ರಾಸ್.