
ಮೊಳಕಾಲ್ಮೂರು,ಮೇ.5: ನಮ್ಮ ಕನ್ನಡ ನಾಡು, ನುಡಿ ಅತ್ಯಮೂಲ್ಯವಾದುದ್ದು, ಈ ನಾಡು, ನುಡಿ ಉಳಿವಿಗಾಗಿ ಅನೇಕ ಮಹಾ ನಿಯರು ಪ್ರಾಣ ಬಲಿದಾನ ಮಾಡಿದರೆ ಎಂದು ತಹಶೀಲ್ದಾರ್ ಎಂ.ವಿ.ರೂಪ ತಿಳಿಸಿದರು.
ಅವರು ಇಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕನ್ನಡ ಉಳಿಸಿ ನಾಡು ಬೆಳಸಿ ಕನ್ನಡ ಭಾಷೆ ಶ್ರೇಷ್ಠ, ಕನ್ನಡವೇ ಎಲ್ಲಾರಿಗೂ ಇಷ್ಟ. ಎಲ್ಲಾರ ಮನ ಮನೆಯಲ್ಲಿ ಕನ್ನಡದ ಕಾಳೇ ಮೊಳ ಗಲಿ ಇಂತಹ ಕನ್ನಡ ಭಾಷೆಯ ಸಾಹಿತ್ಯವಾಗಿ ಹುಟ್ಟಿ ಬೆಳೆದ ದಿನವನ್ನು ಇಂದು ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಯಾಗಿ ಆಚರಿಸುವಂತಹದ್ದು ನಮ್ಮ ನಾಡಿಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸ ನೀಡಿದ ತಿಮ್ಮಣ್ಣ ಮರಿಕುಂಟೆ ಮಾತನಾಡುತ್ತಾ, ಭಾಷೆಗಳಲ್ಲೇ ಶ್ರೇಷ್ಠ ನಮ್ಮ ಕನ್ನಡ ಭಾಷೆ, ನಮ್ಮ ಕನ್ನಡ ಭಾಷೆ ಭಾಷೆಯಾಗಿ ಅಷ್ಟೇ ಉಳಿದಿಲ್ಲ ಮನುಜ ಕುಲಕ್ಕೆ ಬಾಂಧವ್ಯ ಬೆಸೆಯುವ ಬಹು ಭಾಷೆ ಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ ಸಾ ಪ ಅಧ್ಯಕ್ಷ ಜಿಂಕಾ ಶ್ರೀನಿವಾಸ್, ಪ್ರಿನ್ಸಿಪಾಲ್ ಕವಿತಾ, ಪ್ರ ಶಿ ಸ ಅ ಸುಜಾತ, ಉಪನ್ಯಾಸಕರಾದ ಸೂರಯ್ಯ, ತಿಮ್ಮಣ್ಣ, ಮತ್ತು ವಾಂಜ್ರೇ ರಮೇಶ್, ಚಂದ್ರಶೇಖರ್, ಕ ಸಾ ಪ ಕಾ ಬಡಯ್ಯ, ಮತ್ತು ಉಪನ್ಯಾಸಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
One attachment • Scanned by Gmail