ಕನ್ನಡ ಉಳಿಸಲು ಕೈಜೋಡಿಸಿ : ಕುಲಕರ್ಣಿ

ಔರಾದ : ಆ.6:ಕಂಪ್ಯೂಟರ್ ಯುಗವಾಗಿ ಪರಿಣಮಿಸುತ್ತಿರುವ ಈ ಆಧುನಿಕ ಯುಗದಲ್ಲಿ ನಾಡಿನ ಜನರು ತಮ್ಮ ಭಾಷಾ ಸ್ವಾಭಿಮಾನವನ್ನು ತೊರೆದು ಅನ್ಯ ಭಾಷೆಗಳತ್ತ ವಾಲುತ್ತಿದ್ದಾರೆ. ಈ ಕಾರಣಕ್ಕೆ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಮೂಲಕ ಕನ್ನಡ ಉಳಿವಿಗೆ ಕೈ ಜೋಡಿಸಬೇಕು ಎಂದು ಸಾಹಿತಿ ಬಲಭೀಮ್ ಕುಲಕರ್ಣಿ ಅವರು ಅಭಿಪ್ರಾಯ ಪಟ್ಟರು.

ತಾಲೂಕಿನ ಗಡಿ ಭಾಗದ ವನಮಾರಪಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಸಾಪ ಆಯೋಜಿಸಿದ್ದ ಸಾಹಿತ್ಯ ಸೊಬಗು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನ್ನಡ ಭೂಮಿಯಲ್ಲಿ ಹುಟ್ಟಿರುವ ನಾವೆಲ್ಲರೂ ತಾಯಿ ಭುವನೇಶ್ವರಿ ಸೇವೆ ಮಾಡಲು ಕಂಕಣಭದ್ಧರಾಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಡಾ. ಶಾಲಿವಾನ ಉದಗಿರೆ, ಯುವ ಮುಖಂಡ ನಾಗನಾಥ ಮೋರ್ಗೆ, ಮಹಮ್ಮದ್ ನೈಮೋದಿನ, ಗೋವಿಂದ ಪಾಟೀಲ, ಪ್ರವೀಣಕುಮಾರ, ವೆಂಕಟ ಕೋಳಿ, ರಮೇಶ ಡೋನೆ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಂಜು, ಗ್ರಾಮದ ಹಿರಿಯರಾದ ಬಾಬುರಾವ ಬಿರಾದಾರ, ಮುಖ್ಯೋಪಾಧ್ಯಾಯರಾದ ಮಹಾದೇವ ಬಾಲೇಕರ ,ದಿಗಂಬರ ಪಾಂಚಾಳ, ವೆಂಕಟರಾವ ಭಾಲ್ಕೆ, ಮಹೇಶ ಪೂಜಾರಿ,ಶಾಲಾ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಮಕ್ಕಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.