
ಹುಮನಾಬಾದ್: ಮಾ.2:ಕನ್ನಡ ಸಂಸ್ಕøತಿ ಪರಂಪರೆ ಉಳಿಸಿ ಬೆಳಸುವ ಕಾರ್ಯ ಎಲ್ಲರ ಜವಾಬ್ದಾರಿಯಾಗಿದೆ ಎಂದು ಪುಟ್ಟಗೌರಿ ಧಾರವಾಹಿಯ ಖ್ಯಾತ ನಟಿ ರಂಜಿನಿ ರಾಘವನ್ ಹೇಳಿದರು.
ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಸರಸ್ವತಿ ಶಾಲೆಯಲ್ಲಿ ಬುಧವಾರ ರಾತ್ರಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೈಜ್ಞಾನಿಕವಾಗಿ ಮುಂದು ವರೆಯುತ್ತಿರುವ ಜಗತ್ತಿನಲ್ಲಿ ನಾವು ಇಂಗ್ಲೀಷ್ ವ್ಯಾಮೋಹದಲ್ಲಿ ಮುಳಗದೇ ಕನ್ನಡ ಶಾಲೆಗೆ ಕಳುಹಿಸಿ ಕನ್ನಡ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಹಳ್ಳಿಖೇಡ (ಬಿ) ಎನ್ನುವ ಈ ಒಂದು ಸಣ್ಣ ಪಟ್ಟಣದಲ್ಲಿ ಇರುವ ಒಟ್ಟು 56 ಶಾಲೆಗಳಲ್ಲಿ 53 ಕನ್ನಡ ಶಾಲೆಗಳು ಇರುವುದು ಮನಸ್ಸಿಗೆ ಬಹಳ ಖುಷಿ ತಂದಿದೆ ಹರ್ಷ ವ್ಯಕ್ತಪಡಿಸಿದರು.
ಬಸವಕಲ್ಯಾಣದ ಅನುಭವ ಮಂಟಪ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೆವರು ಮಾತನಾಡಿ, ಮಹಾನ್ ಕವಿಗಳು, ವಿದ್ವಾಂಸರು ಸೇರಿದಂತೆ ಇಂದು ಉನ್ನತ ಹುದ್ದೆಯಲ್ಲಿ ಇರುವ ಅನೇಕರು ಕನ್ನಡ ಭಾಷೆಯಲ್ಲಿ ಕಲಿತು ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ. ಈ ಸತ್ಯ ಇಂದಿನ ಮಕ್ಕಳು ಅರಿತುಕೊಂಡು ಕನ್ನಡ ಶಾಲೆಗಳಲ್ಲಿ ಪ್ರವೇಶ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೇ ಪುರಸಭೆ ಅಧ್ಯಕ್ಷ ನಾಗರಾಜ ಹಿಬಾರೆ, ಸರಸ್ವತಿ ಶಾಲೆ ಅಧ್ಯಕ್ಷ ಧನರಾಜ ದೊಡ್ಡಮನಿ , ಕನ್ನಡ ಸಾಹಿತ್ಯ ಪರಿಷತ್ಯ ಜಿಲ್ಲಾಧ್ಯಕ್ಷ ಸುರೇಶ ಚನ್ನಶಟ್ಟಿ ಸೇರಿದಂತೆ ಸರಸ್ವತಿ ಶಾಲೆಯ ಮುಖ್ಯಶಿಕ್ಷಕ ಹಾಗೂ ಸಿಬ್ಬಂದಿಗಳು ಇದ್ದರು.