ಕನ್ನಡ ಅಳಿವು ಉಳಿವು ಕನ್ನಡಿಗರಾದ ನಮ್ಮೆಲ್ಲರ ಕೈಯ್ಯಲ್ಲೇ ಇದೆ: ಕುಮಾರಸ್ವಾಮಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ನ.11:- ಕನ್ನಡ ಭಾμÉಯ ಅಳಿವು ಉಳಿವು ಕನ್ನಡಿಗರಾದ ನಮ್ಮೆಲ್ಲರ ಕೈಯ್ಯಲ್ಲೇ ಇದೆ ಎಂದು ಶಿಕ್ಷಕ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಚಾಮರಾಜನಗರ ತಾಲೂಕಿನ ಚಂದಕವಾಡಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದು ಜೆಎಸ್ ಬಿ ಪ್ರತಿμÁ್ಠನ ಆಯೋಜಿಸಿದ್ದ `ಕನ್ನಡ ಮಾಸಾಚರಣೆ 2023′ ಕಾರ್ಯಕ್ರಮವನ್ನು ಕನ್ನಡ ತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ನಮ್ಮ ಉಸಿರು, ಹೃದಯದ ಬಡಿತ, ನಮ್ಮ ನರನಾಡಿಗಳು ಕನ್ನಡಕನ್ನಡ ಎನ್ನಬೇಕು. ಅಂತಹದ್ದೊಂದು ಭಾವನೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಮೂಡಿದರೆ ಎμÉ್ಟೂಂದುಚಂದ ಅಲ್ವಾ.? ಅನ್ಯಭಾμÉಯ ಪ್ರಾವೀಣ್ಯತೆ ನಮಗಿರಲಿ ಸಂತೋಷ, ಆದರೆ ನಮ್ಮ ಭಾμÉಯನ್ನು ಬೇರೆಯವರ ಬಳಿಯೂ ಬಿಟ್ಟುಕೊಡುವವರು ನಾವಾಗಬಾರದು. ಬೇರೆ ರಾಜ್ಯಗಳಿಗೆ ಅಥವಾದೇಶಕ್ಕೆ ಹೋದರೆ ನಮ್ಮ ಮುಂದಿರುವವರಿಗೆ ಕನ್ನಡ ತಿಳಿದಿದ್ದರೂ ಸಹ ನಾವು ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತೇವೆ. ಏಕೆಂದರೆ ನಮಗೆ ಕನ್ನಡ ಮಾತನಾಡಲು ಮುಜುಗರ. ಎಲ್ಲಿ ನಮ್ಮನ್ನು ನೋಡಿ ನಗುತ್ತಾರೋ ಎಂಬ ಸಂಕೋಚ. ಆಗ ನಾವು ಕನ್ನಡಅμÉ್ಟೂಂದು ಕೀಳು ಭಾμÉಯೇ? ನಾವು ಈ ರೀತಿ ಮಾಡುವುದುಎಷ್ಟರ ಮಟ್ಟಿಗೆ ಸರಿ? ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕು. ಬೇರೆ ಭಾμÉಯಜನರಿಗಾಗಿ ನಾವು ನಮ್ಮ ಭಾμÉ ಬಿಟ್ಟುಅವರ ಭಾμÉಯಲ್ಲಿ ಮಾತನಾಡುವಾಗ ಅವರೇ ಕೆಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತಾರೆ. ಕಾರಣಇμÉ್ಟೀಅವರಿಗೆಅವರ ಭಾμÉಯ ಮೇಲಿರುವ ಪ್ರೀತಿ, ಅವರ ನುಡಿಯ ಮೇಲಿನ ಅಭಿಮಾನ. ನಮ್ಮಕನ್ನಡ ಭಾμÉಯ ಮೇಲೆ ಕನ್ನಡಿಗರಾದ ನಾವು ಈ ರೀತಿಯಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಕನ್ನಡಿಗರಾದ ನಾವು ಕನ್ನಡಾಂಬೆಯ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡಬೇಕುಎಂದು ತಿಳಿಸಿದರು.
ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಮಾತನಾಡಿ, ಭಾರತ ಮಾತೆಯ ಹೆಮ್ಮೆಯಕನ್ನಡ ನಾಡಲ್ಲಿಇಲ್ಲದಿರುವುದು ಏನೂ ಇಲ್ಲ. ಕನ್ನಡನಾಡು ಹಚ್ಚ ಹಸುರಿನದಟ್ಟವಾದ ವನಗಳಿರುವ ಗಂಧದ ಬೀಡು. ಮೈದುಂಬಿ ಹರಿಯುತ್ತಿರುವಕೃμÉ್ಣ, ಶರಾವತಿ, ತುಂಗೆ, ಕಾವೇರಿಯರಉಗಮದ ನಾಡು. ಶಂಕರ, ರಮಾನುಜ, ವಿದ್ಯಾರಣ್ಯ, ಬಸವೇಶ್ವರರು ನೆಲೆಸಿದ ಪುಣ್ಯದ ನೆಲೆಯಿದು. ರನ್ನ, ಷಡಕ್ಷರಿ, ಪೆÇನ್ನ, ಪಂಪ, ಲಕ್ಷ್ಮೀಶ ಮತ್ತುಜನ್ನರು ಹುಟ್ಟಿದ ಪುಣ್ಯಭೂಮಿಯಿದು. ನಮ್ಮ ನಾಡುಕರ್ನಾಟಕ ನಮ್ಮ ಭಾμÉಕನ್ನಡದಎಂದುಎದೆತಟ್ಟಿಗರ್ವದಿಂದ ಹೇಳಲು ಇಷ್ಟು ವಿಚಾರಗಳು ಸಾಕಲ್ಲವೇಎಂದರು.
ಜೆಎಸ್‍ಬಿ ಪ್ರತಿμÁ್ಠನದಎಸ್. ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯಎಲ್ಲಾ ಮಕ್ಕಳಿಗೆ ಕನ್ನಡಕಿರುಪುಸ್ತಕ ನೀಡಿ, ಕನ್ನಡಓದನ್ನು ಪೆÇ್ರೀತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ಬಸವರಾಜು, ಮಹೇಶ, ಲೋಹಿತ, ಮಹದೇವಸ್ವಾಮಿ, ನಾಗರಾಜು, ಸಿದ್ದರಾಜು, ಶಿವಣ್ಣ, ನಾಗರತ್ನಮ್ಮ, ಕೋಮಲ, ಶೈಲಜಾ, ಚಂದ್ರಿಕ, ರೇಖಾ, ಸಿಬ್ಬಂದಿಗಳು, ಪೆÇೀಷಕರು ಮತ್ತು ವಿದ್ಯಾರ್ಥಿಗಳಿದ್ದರು.