ಕನ್ನಡ ಅನ್ನದ ಭಾಷೆಯಾಗಲಿ

(ಸಂಜೆವಾಣಿ ವಾರ್ತೆ)
ವಿಜಯಪುರ:ಸೆ.12: ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಸುದೀರ್ಘ ಸಾಂಸ್ಕøತಿಕ ಇತಿಹಾಸ ಹೊಂದಿದೆ. ಇದೀಗ ಕನ್ನಡ ಭಾಷೆ ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯವಾಗಬೇಕು. ಕನ್ನಡ ಕನ್ನಡಿಗರ ಅನ್ನದ ಭಾಷೆಯಾಗಿ ಜೀವನ ಕಟ್ಟಿಕೊಡುವಲ್ಲಿ ಯಶಸ್ವಿಯಾಗಬೇಕು ಎಂದು ಸಾಹಿತಿ ಸಂಗಮೇಶ ಬದಾಮಿ ಅಭಿಪ್ರಾಯಪಟ್ಟರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ರಂಗಸೇವಾ ಕಲಾ ಸಂಘ ವಿಜಯಪುರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಶ್ರೀ ಮುರಾಜಿ ದೇಸಾಯಿ ವಸತಿ ಶಾಲೆ ತಿಕೋಟಾದಲ್ಲಿ ಜರುಗಿದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ‘ಕನ್ನಡ ನಾಡು ನುಡಿ’ ಕುರಿತು ಮಾತನಾಡಿದ ಅವರು ಇಂಥ ಸರಳ ಸುಂದರ ಕನ್ನಡ ಭಾಷೆಯನ್ನು ದೈವತ್ವಕ್ಕೆ ಕೊಂಡೊಯ್ದ ಕೀರ್ತಿ ಬಸವದಿ ಶರಣರಿಗೆ ಸಲ್ಲುತ್ತದೆ. ಇಂತ ಕನ್ನಡ ಕಟ್ಟುವ ಕೆಲಸ ಮಾಡಿದ ಶರಣರ ನೆಲೆಯೇ ವಿಜಯಪುರ ಜಿಲ್ಲೆಯಾಗಿದ್ದು ಕನ್ನಡ ಭಾಷಾ ಸಂಸ್ಕರಣೆಯಲ್ಲಿ ಜಿಲ್ಲೆಯ ಕೊಡುಗೆ ಅನುಪಮ ಎಂದರು.
ಕನ್ನಡ ಇದೊಂದು ಭಾಷೆಯಲ್ಲ ನಮ್ಮ ಭಾವನೆಗಳ ಸಂಯೋಜನೆ. ಶತಶತಮಾನಗಳಿಂದ ಸಂಸ್ಕøತ ಭಾಷೆ ಶ್ರೇಷ್ಠವೆನಿಸಿಕೊಳ್ಳುತ್ತ ಜನರಿಂದ ಜನರಿಗಾಗಿ ಮುಡಿ ಬಂದ ಜನಮಾನಸದ ಮಂತ್ರವೇ ಕನ್ನಡ ನುಡಿ. ಕನ್ನಡ ಆರುಕೋಟಿ ಜನರ ಜೀವನಾಡಿ ದ್ರಾವಿಡ ಭಾಷೆಯಲ್ಲಿಯೇ ಅಗ್ರಸ್ಥಾನ ಪಡೆದ ಹಿರಿಮೆ ಸವಿಗನ್ನಡದು, ಪ್ರಪಂಚದಲ್ಲಿ 6000 ಸಾವಿರ ಭಾಷೆಗಳಲ್ಲಿ ಸಮೃದ್ಧ 30 ಭಾಷೆಗಳಲ್ಲಿ ಕನ್ನಡವೂ ಸೇರಿದೆ ಎಂಬುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ಸಂಗತಿ. ಕನ್ನಡ ಕನ್ನಡಿಗರ ಉಸಿರು, ಅದು ಇರಬೇಕು. ಎಂದೆಂದೂ ಹಸಿರು ಎಂಬ ಆಶಾಭಾವನೆ ಹೊಂದಬೇಕಾಗಿದೆ. ಯುವಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಕರುನಾಡ ದೀಪವನ್ನು ಸಿರಿನುಡಿಯ ದೀಪವನ್ನಾಗಿಸಬೇಕಾಗಿದೆ ಎಂದು ಕರೆ ನೀಡಿದರು.
ಕನ್ನಡ ನಾಡು ವರ್ಣಮಯ ಇತಿಹಾಸ ಹೊಂದಿದ್ದು, ಬಹುಭಾಷೆ ಬಹು ಸಂಸ್ಕøತಿ ಮತ್ತು ಬಹು ಧರ್ಮಗಳ ನೆಲೆ ಬೀಡು ಇದಾಗಿದೆ. ಕರ್ನಾಟಕವೇ ಕರ್ಮಭೂಮಿ, ಕನ್ನಡ-ನಾಡು ನುಡಿಯ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ. ನಾಗರಾಜ ಹೇಳಿದರು.
ಕನ್ನಡ ನಾಡಿನ ಜೋಗಪಾಲ್ಸ, ಗೋಕಾಕ ಫಾಲ್ಸ, ಆಲಮಟ್ಟಿ ಜಲಾಶಯ ಯಾವ ಕೈಲಾಸ ಪರ್ವತಕ್ಕಿಂತ ಕಡಿಮೆ ಇಲ್ಲ. ಮೈಸೂರು ಅರಮನೆ ವಿಧಾನಸೌಧ, ಗೋಳಗುಮ್ಮಟ ಯಾವ ತಾಜಮಹಲಗಿಂತ ಕಡಿಮೆಯಿಲ್ಲ. ಹೀಗೆ ವಿಶ್ವಭಾರತಿಯ ಕೀರ್ತಿಯನ್ನು ವಿಶ್ವದೆತ್ತರಕ್ಕೆ ತಲುಪಿಸಿದ ಕನ್ನಡ ರಾಜರಾಜಶ್ವರಿ ಹರಿದು ಹಂಚಿಹೋಗಿದ್ದ ಕನ್ನಡ ಭಾಷಾವಾರು ಪ್ರಾಂತಗಳ ಆಧಾರದ ಮೇಲೆ 1956 ನವ್ಹಂಬರ 1 ರಂದು ಮೈಸೂರು ರಾಜ್ಯ ಎಂದು ನಾಮಕರಣಗೊಂಡಿತು. 1973 ರಲ್ಲಿ ದಿ|| ದೇವರಾಜ ಅರಸು ಅವರಿಂದ ಕರ್ನಾಟಕ ರಾಜ್ಯ ವೆಂದು ಮರುನಾಮಕರಣಗೊಂಡಿತು. ಈಗ ಕರ್ನಾಟಕ ರಾಜಕ್ಕೆ 50ರ ಸುವರ್ಣ ಮಹೋತ್ಸವ ಸಂಭ್ರಮ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಭ್ರಮದಿಂದ ಆಚರಿಸೋಣ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಕರೆ ನೀಡಿದರು.
ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ. ಶೇಖಮಾಸ್ತರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಂಗ ಸಂಗೀತ, ಜಾನಪದಗೀತೆ ‘ಧರ್ಮದೇವತೆ’ ನಾಟಕ, ರಂಗ ವೈಭವ ಸಂಸ್ಥೆಯವರು ಅಭಿನಯಿಸಿದರು. ಸಿದ್ದಣ್ಣ ಮೇಲಿನಮನಿ, ರಾಜಮ್ಮ ಹೆಗಡೆ, ದುಂಡಪ್ಪ ಮೋಟೆ, ಸುರೇಖಾ ಪಾಟೀಲ, ಎಂ.ಆರ್. ನದಾಫ, ಸಮೀರ, ಸೌಮ್ಯ, ತಸ್ಮಿಯಾ, ಸೋಮಶೇಖರ ಜತ್ತಿ, ರಾಜಾಸಾಹೇಬ ಶಿವನಗುತ್ತಿ ಉಪಸ್ಥಿತರಿದ್ದರು. ನಾಟಕಕಾರ ಶ್ರೀಧರ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.