ಕನ್ನಡ ಅನ್ನದ ಭಾಷೆಯಗಬೇಕೆಂಬುದು ನನ್ನ ಆಶಯ: ಶೇಖರಗೌಡ ಮಾಲಿಪಾಟೀಲ್

ಬಳ್ಳಾರಿ, ಏ.19: ಕನ್ನಡ ಅನ್ನದ ಭಾಷೆಯನ್ನಾಗಿ ಮಾಡಬೇಕೆಂಬುದು ನನ್ನ ಆಶಯ ಎಂದು ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯದ್ಯಕ್ಷ ಸ್ಥಾನದ ಸ್ಪರ್ಧಿ ಶೇಖರಗೌಡ ಮಾಲಿ ಪಾಟೀಲ್ ಹೇಳಿದ್ದಾರೆ.
ಅವರು ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಟಿ ಮಾಡಿ. 25 ವರ್ಷಗಳ ಕಾಲ‌ಕನ್ನಡ ಸಾಹಿತ್ಯ ಸಂಸ್ಕೃತಿಯ ಸೇವೆ ಮಾಡಿರುವೆ ಎಂದರು
ಯುವ ಬರಹಗಾರರಿಗೆ ಶಿಬಿರಗಳು, ತಾಲೂಕು ಮಟ್ಟದಲ್ಲಿ ಕನ್ಬಡ ಭವನಗಳ ನಿರ್ಮಾಣ, ಕನ್ನಡ ಶಾಲೆಗಳ ಸ್ಥಾಪನೆ. ತಲಾ ಸದಸ್ಯರಿಂದ 100 ರೂ ಸಂಗ್ರಹಿಸಿ ಪರಿಷತ್ ಆರ್ಥಿಕವಾಗಿ ಸ್ವಾವಲಂಬಿಯಾಗಿ ಮಾಡುವುದು. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ದಾಸ, ವಚನ, ಮಕ್ಕಳ, ಮಹಿಳಾ, ದಲಿತ, ಮೊದಲಾದ ಪ್ರಕಾರಗಳಲ್ಲಿ ಸಮಾವೇಶ ಮಾಡುವುದು, ಒರಿಷತ್ ನಿಂದ ಮನೆ, ಮನೆಗೆ ಪುಸ್ತಕಗಳನ್ಬು ಹಂಚುವ ಯೋಜನೆ‌ ನನ್ನ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಷತ್ತಿನ ಸದಸ್ಯರುಗಳಾದ ರಾಜಶೇಖರ ಅಂಗಡಿ, ಶಿವಕುಮಾರ್, ಹೆಚ್.ಹಂಪನಗೌಡ, ಸಂಗನಕಲ್ಲು ಪ್ರಕಾಶ್ ಮೊದಲಾದವರು ಇದ್ದರು.