ಕನ್ನಡ ಅದೊಂದು ಭಾಷೆಯಲ್ಲ ಅನ್ನದ ಭಾಷೆ :ಸಂಗಮೇಶ ಬದಾಮಿ

ವಿಜಯಪುರ :ಫೆ.28:ಕನ್ನಡ ಸಾವಿರಾರು ವರ್ಷಗಳ ಸುದೀರ್ಘ ಸಂಸ್ಕøತಿಕ ಇತಿಹಾಸ ಹೊಂದಿದೆ. ಇದೀಗ ಕನ್ನಡ ಭಾಷೆ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಬೇಕು. ಕನ್ನಡ ಕನ್ನಡಿಗರ ಶ್ರೇಷ್ಠ ಭಾಷೆಯಾಗಿ ಜೀವನ ಕಟ್ಟಿಕೊಡುವಲ್ಲಿ ಅನ್ನದ ಭಾಷೆಯಾಗಿ ಯಶಸ್ವಿಯಾಗಬೇಕು ಎಂದು ಸಾಹಿತಿ ಮತ್ತು ರಂಗಕರ್ಮಿ ಸಂಗಮೇಶ್ ಬದಾಮಿ ಅಭಿಪ್ರಾಯಪಟ್ಟರು.
ಕನ್ನಡಾಂಬೆ ರಕ್ಷಣಾ ವೇದಿಕೆ ಸಿಂಹ ಘರ್ಜನೆ ನಗರದ ಲಿಂಗಾಯತ ಸಮುದಾಯ ಭವನದಲ್ಲಿ ಏರ್ಪಡಿಸಿದ ವಿಜಯಪುರ ಜಿಲ್ಲಾ ಘಟಕ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ, ಸರಳ ಸುಂದರ ಕನ್ನಡ ಭಾಷೆಯನ್ನು ದೈವತ್ವಕ್ಕೆ ಕೊಂಡೊಯ್ದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಇಂತಹ ಕನ್ನಡ ಕಟ್ಟುವ ಕೆಲಸ ಮಾಡಿದ ಶರಣರ ನೆಲೆಯೇ ವಿಜಯಪುರ ಜಿಲ್ಲೆಯಾಗಿತ್ತು. ಕನ್ನಡ ಭಾಷಾ ಸಂಸ್ಕರಣೆಯಲ್ಲಿ ಜಿಲ್ಲೆ ಕೊಡುಗೆ ಅನುಪಮ ಎಂದರು.
ಕನ್ನಡ ಇದೊಂದು ಭಾಷೆಯಲ್ಲ ನಮ್ಮ ಭಾವನೆಗಳ ಸಂಯೋಜನೆ ಕನ್ನಡ 6 ಕೋಟಿ ಜನರ ಜೀವನಾಡಿ ದ್ರಾವಿಡ ಭಾಷೆಯಲ್ಲಿ ಅಗ್ರಸ್ಥಾನ ಪಡೆದ ಹಿರಿಮೆ ಸವಿಗನ್ನಡದ್ದು. ಪ್ರಪಂಚದಲ್ಲಿ 6000 ಭಾಷೆಗಳಲ್ಲಿ ಸಮೃದ್ಧ 30 ಭಾಷೆಗಳಲ್ಲಿ ಕನ್ನಡವು ಸೇರಿದೆ ಎಂಬುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ಸಂಗತಿ. ಕನ್ನಡ ಕನ್ನಡಿಗರ ಉಸಿರು ಅದು ಎಂದಿಗೂ ಹಸಿರು ಆಶಾಭಾವನೆ ಹೊಂದಬೇಕಾಗಿದೆ ಯುವಕರು ವಿದ್ಯಾರ್ಥಿನಿಯರು ಈ ಕರುನಾಡ ಕನ್ನಡಾಂಬೆಯ ದೀಪವನ್ನು ಸಿರಿನಾಡಿನ ದೀಪವನ್ನಾಗಿಸಬೇಕಾಗಿದೆ ಎಂದರು.
ಮುಖ್ಯ ಅಥಿತಿಯಾಗಿ ಸಾಹಿತಿ ಇಂದುಮತಿ ಲಮಾಣಿ ಮಾತನಾಡಿ, ಕನ್ನಡ ನಾಡು ವರ್ಣಮಯ ಇತಿಹಾಸ ಹೊಂದಿದ್ದು ಬಹುಭಾಷ ಬಹು ಸಂಸ್ಕೃತಿ ಮತ್ತು ಬಹು ಧರ್ಮಗಳ ನೆಲೆಬೀಡು ಇದಾಗಿದೆ. ಕರ್ನಾಟಕವೇ ಕರ್ಮಭೂಮಿ ಕನ್ನಡ ನಾಡು ನುಡಿಯ ಸಂರಕ್ಷಣೆ ಮಾಡುವುದು ಕನ್ನಡಾಂಬೆಯ ನಮ್ಮೆಲ್ಲರ ಕರ್ತವ್ಯ ಎಂದರು.
ಕನ್ನಡಾಂಬೆಯ ರಕ್ಷಣಾ ವೇದಿಕೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಕೀರ್ತನ ಮಂಜುನಾಥ್ ಮಾತನಾಡುತ್ತಾ ಕನ್ನಡ ಭಾಷೆ ನಮ್ಮ ಹೆಮ್ಮೆಯಾಗಬೇಕು. ಯಾವುದೇ ಬಿಗೂಮಾನಗಳಿಲ್ಲದೆ ಅಭಿಮಾನದಿಂದ ಕನ್ನಡ ಭಾಷೆ ಬಳಸಬೇಕು ವಿದೇಶಿ ಭಾಷೆಗಳ ಮೇಲೆ ಅನ್ಯತಾ ಅತಿಯಾದ ವ್ಯಾಮೋಹ ಬೇಡ ವಾಸ್ತವಂಶ ಅರಿತು ಸಂಘಟನಾತ್ಮಕ ಹೋರಾಟದಿಂದ ನಮ್ಮ ಕನ್ನಡಾಂಬೆಯ ಕೈ ಬಲಪಡಿಸಬೇಕು. ಕನ್ನಡ ಜಾಗತಿಕ ಮಟ್ಟದಲ್ಲಿ ಮೌನಕ್ರಾಂತಿಯ ಮೂಲಕ ಬೆಳೆಸಬೇಕು ಕನ್ನಡಿಗರ ಶೋಷಣೆ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ನಾವೆಲ್ಲ ಒಂದಾಗಿ ಕೆಲಸ ಮಾಡೋಣ ಎಂದರು.
ಸಂಸ್ಥಾಪಕ ರಾಜ್ಯ ಅಧ್ಯಕ್ಷ ಮಂಜುನಾಥ್ ಮಾತನಾಡುತ್ತಾ ಕನ್ನಡ ಸಾಹಿತ್ಯ ಸಂಸ್ಕೃತಿ ನೆಲ ಜಲ ಭಾಷೆ ಉಳಿಸುವ ಜೊತೆಗೆ ದೇಶಪ್ರೇಮವನ್ನು ಮೂಡಿಸಬೇಕು. ಕನ್ನಡ ಭಾಷೆ ಬೆಳೆಸಬೇಕು. ಅದಕ್ಕಾಗಿ ಈಗಾಗಲೇ ಕನ್ನಡಾಂಬೆ ರಕ್ಷಣಾ ವೇದಿಕೆಯು ಎಲ್ಲ ಜಿಲ್ಲೆಗಳಲ್ಲೂ ಘಟಕಗಳನ್ನು ಆರಂಭಿಸಿ ಕಾರ್ಯಪ್ರವೃತ್ತವಾಗಿ ವಿನೂತನವಾಗಿ ಮನೆ ಮನೆಗೆ ಕನ್ನಡ ಎಂಬ ಘೋಷಣೆ ಆರಂಭಿಸಿದ್ದೇವೆ ಎಂದರು.
ಕಾರ್ಯಕ್ರಮದ ಸಂಚಾಲಕ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಂತೋಷಕುಮಾರ ನಿಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಮರಕಲ್ ಜಿಲ್ಲಾಧ್ಯಕ್ಷ ಬಿಂಕೋಬಾ ದಾಸರ, ಮಹಿಳಾ ಜಿಲ್ಲಾಧ್ಯಕ್ಷೆ ಜಯಶ್ರೀ ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಕವಿಗೋಷ್ಠಿಯಲ್ಲಿ ಪಾಲ್ಗೊಂಡ ಕವಿಗಳು ಯಮನಪ್ಪ ಅರಬಿ, ಶಿವಾಜಿ ಮೊರೆ, ಬಲಭೀಮ ಟಿ ಎಮ್. ವಾಣಿಶ್ರೀ ವೈದ್ಯ, ಸುಧೀದ್ರ ವೈಧ್ಯ, ಮುಂತಾದಕವಿಗಳ ಪಾಲ್ಗೊಂಡಿದ್ದರು.