ಕನ್ನಡ ಅತ್ಯಂತ ಪ್ರಾಚೀನ ಭಾಷೆ: ಹೂಗಾರ

ವಾಡಿ:ನ.2: ಡ್ರಾವಿಡ ಮೂಲದ ಕನ್ನಡ ಭಾಷೆಯು ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ಪ್ರತಿಯೊಬ್ಬರು ದಿನನಿತ್ಯದ ಜೀವನದಲ್ಲಿ ಬಳಸುವುದರ ಮೂಲಕ ನಾಡು-ನುಡಿಗೆ ರಕ್ಷಣೆಗೆ ಕಂಕಣ ಬದ್ದವಾಗಿರಬೇಕು ಎಂದು ರಾವೂರ ಶಾಖಾಧಿಕಾರಿ ಅಂಬ್ರೇಶ ಹೂಗಾರ ಹೇಳಿದರು.

ಪಟ್ಟಣ ಸಮೀಪದ ರಾವೂರ ಗ್ರಾಮದ ಶಾಖಾಧಿಕಾರಿಗಳ ಕಾರ್ಯಲಯದಲ್ಲಿ 67ನೇ ಕನ್ನಡ ರಾಜೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಕವಿರಾಜಮಾರ್ಗ, ಕಾಳಿದಾಸ, ಬಸವಣ್ಣನವರ ಕಾಲದಿಂದಲ್ಲೂ ಕನ್ನಡ ಬೆಳೆಯುತ್ತಾ ಬಂದಿದೆ. ಕನ್ನಡ ಭಾಷೆಯು ತನ್ನದೇಯಾದ ಪ್ರೌಢಿಮೆಯನ್ನು ಹೊಂದಿದ್ದು, ಅದನ್ನು ಉಳಿಸಿ ಬೆಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಈಶ್ವರಾಧ್ಯ, ಮಾರ್ಗದಾಳು ಕಿಶೋರ, ಪ್ರವೀಣಕುಮಾರ, ಗ್ರಾಮ ವಿದ್ಯುತ ಪ್ರತಿನಿಧಿ ನಾಗರಾಜ ಪರಮದೊಡ್ಡಿ, ರಾಘವೇಂದ್ರ ಹೂಗಾರ, ವೆಂಕಟೇಶ ಕೈನೂರ್, ಗೋಲಾಳಪ್ಪ ಪೂಜಾರಿ, ಅಂಬ್ರೇಶ ಸಾಂಗ್ಲಿಯಾನ, ಅಶೋಕ ವಗ್ಗರ, ಚಂದ್ರಶೇಖರ ಕೊಳ್ಳಿ, ನಾಗೇಂದ್ರ ಜಡಿ, ಮುಕುಂದ ಜಡಿ, ಸೇರಿದಂತೆ ಅನೇಕರು ಇದ್ದರು.