ಕನ್ನಡ ಅಂತಃಸತ್ವದ ಜೀವಾಳವೇ ಮಿಜಾರಿನ ಅಮ್ಮಿಯಣ್ಣ-ಕಲ್ಕೂರ

ಮಂಗಳೂರು, ನ.೬-ಕನ್ನಡ ಭಾಷೆ ಸಂಸ್ಕೃತಿಯಜಾಗೃತಿಯ ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಉದ್ಯಮ ನಡೆಸುವುದರೊಂದಿಗೆ ಪ್ರಶಂಸನೀಯ ಕಾಯಕ ನಡೆಸುತ್ತಿರುವಅಮ್ಮಿಯಣ್ಣನಲ್ಲಿಕನ್ನಡದ ಅಂತಃ ಸತ್ವದ ಜೀವಾಳವೇ ಅಡಗಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಎಸ್. ಪ್ರದೀಪಕುಮಾರ ಕಲ್ಕೂರ ನುಡಿದರು.
ಕನ್ನಡ ರಾಜ್ಯೋತ್ಸವ ಸಹಿತರಾಷ್ಟ್ರೀಯ ಹಬ್ಬಗಳ ಸಂದರ್ಭ ತನ್ನ ಗ್ರಾಹಕರಿಗೆ ಉಚಿತ ಊಟೋಪಚಾರ ಉಪಾಹಾರ ನೀಡುವ ಮೂಲಕ ನಾಡು ನುಡಿಯ ಸೇವೆಗೈಯ್ಯುತ್ತಿರುವ ಮಿಜಾರಿನ ಹೋಟೆಲ್ ಶ್ರೀ ಕೃಷ್ಣದ ಮಾಲಕ ಅಮ್ಮಿಯಣ್ಣ ಎಂದೇ ಖ್ಯಾತರಾದ ರಘುವೀರ್ ಅವರಿಗೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕನ್ನಡಜಾಗೃತಿ ಸೇವಾ ಪುರಸ್ಕಾರ’ ನೀಡಿ ಗೌರವಿಸಿ ಮಾತನಾಡುತ್ತಿದ್ದರು. ನಿಜಾರ್ಥದಲ್ಲಿ ಅಮ್ಮಿಯಣ್ಣನವರು ಯಕ್ಷಗಾನ, ಸಾಹಿತ್ಯ, ಕಲೆಯನ್ನು ಪೋಷಿಸುತ್ತಾ, ಗೌರವಿಸುತ್ತಾಇತರರಿಗೆ ಮಾದರಿಯೆನಿಸಿದ್ದಾರೆ ಎಂದರು.
ಹೋಟೆಲ್ ಶ್ರೀ ಕೃಷ್ಣದಲ್ಲೇಅಮ್ಮಿಯಣ್ಣನ್ನು ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಮಾತನಾಡಿ ಅಮ್ಮಿಯಣ್ಣನ ಕನ್ನಡ ಪ್ರೇಮ ವಿದ್ವತ್ ಸೇವೆಗಿಂತಲೂ ಕಡಿಮೆಯೇನಲ್ಲ ಎಂದು ಶ್ಲಾಘಿಸಿದರು. ಯಕ್ಷಗಾನ ಪ್ರಸಂಗಕರ್ತ, ಅರ್ಥಧಾರಿ ಪೊಳಲಿ ನಿತ್ಯಾನಂದಕಾರಂತ, ಯಕ್ಷದೇವ ಮಿತ್ರ ಕಲಾ ಮಂಡಳಿ, ಬೆಳುವಾಯಿ ಇದರ ಅಧ್ಯಕ್ಷ ದೇವಾನಂದ ಭಟ್, ಕಲ್ಕೂರ ಪ್ರತಿಷ್ಠಾನದ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.