ಕನ್ನಡ ಅಂಕವೀರರಿಗೆ ಸನ್ಮಾನ 18ಕ್ಕೆ

ಕಲಬುರಗಿ:ಮೇ.13: ಕಲಬುರಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2023-24ನೇ ಸಾಲಿನ ಹತ್ತನೇ ಪರೀಕ್ಷೆಯ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಾಲೂಕಿನ ವಿದ್ಯಾರ್ಥಿಗಳಿಗೆ ಕನ್ನಡದ ಅಂಕ ವೀರ ಪ್ರಶಸ್ತಿಯನ್ನು ಮೇ 18ರಂದು ಬೆಳಗ್ಗೆ 10:30 ಕ್ಕೆ ಶಕುಂತಲಾ ಪಾಟೀಲ ಪದವಿ ಪೂರ್ವ ಕಾಲೇಜು ಹುಮ್ನಾಬಾದ್ ರಸ್ತೆ ಬೇಲೂರು ಕ್ರಾಸ್ ಹತ್ತಿರ ಕಲಬುರಗಿಯಲ್ಲಿ ಆಯೋಜಿಸಲಾಗಿದೆ ಎಂದು ಕ ಸಾ ಪ ಕಲಬುರಗಿ ತಾಲೂಕ ಅಧ್ಯಕ್ಷ ಗುರುಬಸಪ್ಪ ಎಸ್. ಸಜ್ಜನಶೆಟ್ಟಿ ಅವರು ತಿಳಿಸಿದ್ದಾರೆ.
23-24ಸಾಲಿನ 10ನೇ ತರಗತಿಯ ಕನ್ನಡ ವಿಷಯದಲ್ಲಿ ಶೇಕಡ 90ರಷ್ಟು ಅಂಕ ಪಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಮಕ್ಕಳು ಹಾಗೂ ಇನ್ನುಳಿದ ಕಲಬುರಗಿ ತಾಲೂಕ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ125ರ ಪೈಕಿ 120ಕ್ಕು ಹೆಚ್ಚು. ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಕನ್ನಡದಲ್ಲಿ 100ಕ್ಕೆ 95ಕ್ಕಿಂತ ಹೆಚ್ಚು ಅಂಕ ಪಡೆದ ಆಸಕ್ತ ವಿದ್ಯಾರ್ಥಿಗಳು ತಾಲೂಕ ಕಸಾಪದ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ವಿಶಾಲಾಕ್ಷಿ ಮಾಯಣ್ಣವರ 9964808888 ಹಾಗೂ ಎಕ್ಸಲೆಂಟ್ ಟ್ಯುಟೋರಿಯಲ್ ಅಧ್ಯಕ್ಷರು ಡಾ. ಮನೋಜಕುಮಾರ್ ಬುರುಬುರೆ 8073800056 ಅವರನ್ನು ಸಂಪರ್ಕಿಸಿ ತಮ್ಮ ಹೆಸರನ್ನು ಮೇ 15ರ ಒಳಗಾಗಿ ನೊಂದಾಯಿಸಲು ಕೋರಲಾಗಿದೆ