ಕನ್ನಡಿಗ ಟೀಸರ್ ಹವಾ

ಜಟ್ಟ’ ,ಮೈತ್ರಿಯಂತಹ ಸಧಬಿರುಚಿ ಚಿತ್ರ ನೀಡಿದ ನಿರ್ದೇಶಕ ಬಿ.ಎಂ ಗಿರಿರಾಜ್ ಅವರು ಇದೀಗ ಮತ್ತೊಂದು ಹೊಸ ಚಿತ್ರ “ಕನ್ನಡಿಗ”ನ ಜೊತೆ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಒಂದು ಹಾಡು ಬಾಕಿ ಉಳಿಸಿಕೊಂಡು ಬಹುತೇಕ ಚಿತ್ರೀಕರಣ ಪೂರ್ಣಗೊಳಿದ್ದಾರೆ.
ಕನ್ನಡಿಗನ ಮೂಲಕ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಹೊಸ ರೀತಿಯಲ್ಲಿ ತೆರೆಯ ಮೇಲೆ ಕಟ್ಟಿಕೊಡುವ ಕೆಲಸವನ್ನು ಗಿರಿರಾಜ್ ಮತ್ತವರ ತಂಡ ಮಾಡಿದೆ.
ಕಾವೇರಿಯಿಂದ ಗೋದಾವರಿ ತನಕ ಕನ್ನಡ ನಾಡಿನ ಹಿರಿಮೆ ಗರಿಮೆಯನ್ನು ಬೆಳಗಿಸಿದ ಅನೇಕ ಕನ್ನಡಿಗರಿದ್ದಾರೆ.ಅಂತಹ ಒಬ್ಬ “ಕನ್ನಡಿಗ”ನ ವಂಶಸ್ಥರ ಕೆಲಸವನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಲಾಕ್ ಡೌನ್ ಜಾರಿಯಾಗದಿದ್ದರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹುಟ್ಟುಹಬ್ಬಕ್ಕೆ ಚಿತ್ರವನ್ನು ತೆರೆಯ ಮೇಲೆ ತರುವ ಎಲ್ಲಾ ಸಿದ್ದತೆ ನಡೆದಿತ್ತು. ಸದ್ಯಕ್ಕೆ ಮುಂದೆಕ್ಕೆ ಹೋಗಿದೆ.
ಈ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಗಿರಿರಾಜ್, ರವಿ ಸಾರ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡಲಾಗಿದೆ.ಚಿತ್ರವನ್ನು ಚಿಕ್ಕಮಗಳೂರು, ಸಾಗರ ಬೆಂಗಳೂರು ಸೇರಿದಂತೆ ಹಲವು ಚಿತ್ರೀಕರಣ ಮಾಡಲಾಗಿದೆ. ಇದೊಂದು ಪಿರಿಯಾಡಿಕ್ ಡ್ರಾಮ ಆಗಿರುವ ಹಿನ್ನೆಲೆ ಸೆಟ್ ಹಾಕಲಾಗಿದೆ. ಸರಿ ಸುಮಾರು ೫೦ ದಿನ ಚಿತ್ರೀಕರಣ ಮಾಡಲಾಗಿದೆ ಎಂದರು,
ಈ ಹಿಂದೆ ಕೃತಿಕಾರರು ಇದ್ದರು ಅವರು ಬರೆದ ಕೃತಿಗಳನ್ನು ಕಾಪಾಡುವ
ಕಾಯಕ ಮಾಡುತ್ತಿದ್ದವರೇ ಲಿಪಿಕಾರರು. ಅಂತಹ ಲಿಪಿಕಾರನ ಪಾತ್ರವನ್ನು ರವಿಚಂದ್ರನ್ ಅವರು ಮಾಡಿದ್ದಾರೆ. ಯಾವುದೇ ರಾಜಾಶ್ರಯ ಇಲ್ಲದಿದ್ದರೂ ತಾಳೆಗರಿ ಸೇರಿದಂತೆ ವಿವಿಧ ಮೂಲಗಳಲ್ಲಿನ ಮೂಲ ಕೃತಿಯನ್ನು ಸಂರಕ್ಷಣೆ ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ಇಂದು ಇತಿಹಾಸ ಉಳಿದಿದೆ,
ಮೂಲ ಕೃತಿಕಾರರ ಸಂಗ್ರಹವನ್ನು ಉಳಿಸಿಕೊಂಡ ಬಂದ ಅನೇಕ ವಂಶಗಳು ಇವೆ. ಅಂತವರ ಕಥೆ ಇದು. ಜಾನಪದ ದಾಖಲೆ ಸೇರಿದಂತೆ ಹಲವು ಮಾಹಿತಿ ಸಂಗ್ರಹಿಸಿ ಚಿತ್ರ ಮಾಡಲಾಗಿದೆ ಎನ್ನುವ ವಿವರ ನೀಡಿದರು.
ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ನಾಯಕಿಯರಾಗಿ ಪಾವನಾ ಮತ್ತು ಜೀವಿಕಾ ಕಾಣಿಸಿಕೊಂಡಿದ್ದಾರೆ.ಉಳಿದಂತೆಬಾಲಾಜಿ ಮನೋಹರ್, ಅಚ್ಯುತ್ ಕುಮಾರ್, ಜೆಮಿ ಆರ್ಟರ್ ಸೇರಿದಂತೆ ರಂಗಭೂಮಿ ಯ ಅನೇಕ ಕಲಾವಿದರು ಇದ್ದಾರೆ.
ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿದ ನಂತರ ಬಾಕಿ ಇರುವ ಹಾಡಿನ ಚಿತ್ರೀಕರಣ ಮಾಡಿ ಆನಂತರ ಚಿತ್ರವನ್ನು ಯಾವಾಗ ತೆರೆಯ ಮೇಲೆ ತರಬೇಕು ಎನ್ನುವುದನ್ನು ನಿರ್ಧಾರ ಮಾಡುತ್ತೇವೆ ಎಂದರು. ಎನ್ ಎಸ್ ರಾಜ್ ಕುಮಾರ್ ಅವರು ಚಿತ್ರಕ್ಕೆ ಬಂಡವಾಳ ಹಾಕಿದ್ದು ಜಿಎಸ್ವಿ ಸೀತಾರಾಮ್ ಕ್ಯಾಮರಾ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ.

ವಿಭಿನ್ನ ಪಾತ್ರ
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕನ್ನಡಿಗ ಚಿತ್ರದ ಟೀಸರ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿದೆ. ಲಿಪಿಕಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆ.