ಕನ್ನಡಿಗರ ಹೃದಯ ಬಹಳ ಶ್ರೀಮಂತಿಕೆಯಿಂದ ಕೂಡಿದೆ: ಮಹಾರಾಷ್ಟ್ರ ಸಚಿವ ಅತುಲ್ ಸಾವೆ

ಕಲಬುರಗಿ:ಡಿ.02: ಕನ್ನಡಿಗರ ಹೃದಯ ಬಹಳ ಶ್ರೀಮಂತಿಕೆಯಿಂದ ಕೂಡಿದೆ ಎಂದು ಮಹಾರಾಷ್ಟ್ರ ರಾಜ್ಯದ ಗೃಹ ನಿರ್ಮಾಣ ಸಚಿವ ಅತುಲ್ ಸಾವೆ ಅವರು ಹೇಳಿದರು.
ಕರ್ನಾಟಕ ಸಂಘದ ವತಿಯಿಂದ ಮಹಾರಾಷ್ಟ್ರದ ಔರಂಗಾಬಾದ್‍ನ ಛತ್ರಪತಿ ಸಂಭಾಜಿ ನಗರದಲ್ಲಿನ ಸರಾಫ್ ಲಲಿತಕಲಾ ಅಕ್ಯಾಡೆಮಿ ನಾಟ್ಯಗೃಹದಲ್ಲಿ ಇತ್ತೀಚೆಗೆ ಜರುಗಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ನಮ್ಮವರು ಎಂಬ ಸಹೋದರತೆಯ ಸಾರ ಜಗತ್ತಿನ ತುಂಬಾ ಹರಡಿ ಉತ್ತಮವಾದ ಸಮಾಜ ನಿರ್ಮಿಸುತ್ತಿದ್ದಾರೆ ಎಂದರು.
ವೇದಿಕೆಯ ಮೇಲೆ ಸಂಘದ ಅಧ್ಯಕ್ಷ ಎಸ್.ಎಲ್. ರಾಮಲಿಂಗಪ್ಪ, ಉಪಾಧ್ಯಕ್ಷ ಸುಭಾಷ್ ಜಿ.ಅಮಾಣಿ, ಕಾರ್ಯದರ್ಶಿ ಕೆ.ಎಂ. ಸಿದ್ದವೀರಯ್ಯ, ಸಹ ಕಾರ್ಯದರ್ಶಿ ವಿಮಲಾ ಹಬ್ಬು, ಅರುಣ್ ಗುದಗೆ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ರಾಜೋರಿಯಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ವೀರ ಸೇನಾನಿ, ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕು. ಖುಷಿ ಸಂದೀಪ್, ಕು. ಪೂರ್ವಿ, ಶ್ರೀಮತಿ ಬನಶಂಕರಿ ಹಿರೇಮಠ್ ಅವರು ಭರತನಾಟ್ಯ ಮಾಡಿದರು. ಸಂಧ್ಯಾ ಅಡಸೂಲೆ, ಸುನೀತಾ ಬುಕ್ಕಾ, ಸಂಗೀತಾ ಪಾಟೀಲ್, ಅಮೃತಾ ಸ್ವಾಮಿ, ಸವಿತಾ ಸ್ವಾಮಿ ಅವರು ಸಮೂಹ ನೃತ್ಯ ಮತ್ತು ಗಾಯನ ಮಾಡಿದರು.
ಹಾಸ್ಯ ಕಲಾವಿದರಾದ ರವಿ ಭಜಂತ್ರಿ ಹಾಗೂ ಅಜಯ್ ಸಾರಾಪೂರ್ ಅವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮವು ಸಭಿಕರನ್ನು ರಂಜಿಸಿದರು. ಕಲಾವಿದರಿಗೆ ಕನ್ನಡ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಪ್ರಹ್ಲಾದ್ ಕುಲಕರ್ಣಿ, ಶಶಿಕಾಂತ್ ಮರ್ಪಲ್ಲಿಕರ್, ರತನಕರ್ ನಗರ್ಕರ್, ಶಿವಾ ಉಗಲತ್ ಅವರು ಕನ್ನಡ ಹಾಇನ ಮೂಲಕ ಗಮನಸೆಳೆದರು. ಬನಶಂಕರಿ ಹಿರೇಮಠ್, ಸೋಮಶೇಖರ್ ಪಾಟೀಲ್, ಸಂಗೀತಾ ಪಾಟೀಲ್, ಅಮೃತಾ ಸ್ವಾಮಿ, ಸಾಯಿರಾಂ ಮಂಗಲಗಿ, ಸುನೀತಾ ಬುಕ್ಕಾ, ಸವಿತಾಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತನುಜಾ ಅಡಗಾವಕರ್ ಅವರು ಕಾರ್ಯಕ್ರಮ ನಿರೂಪಿಸಿದರು.