ಕನ್ನಡಿಗರ ಬಡಾವಣೆಯಲ್ಲಿ ಮತಯಾಚನೆ

ಮೈಸೂರು:ಏ:02: ತಮಿಳುನಾಡಿನ ಊಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭೋಜರಾಜನ್ ರವರ ಪರವಾಗಿ ಅತಿ ಹೆಚ್ಚು ಕನ್ನಡಿಗರಿರುವ ‘ಕನ್ನಡಿಗರ ಬಡಾವಣೆ’ ಯಲ್ಲಿ ಮತ್ತು ಪ್ರಮುಖ ರಸ್ತೆಗಳಲ್ಲಿ ಮತಯಾಚನೆ ಮಾಡಲಾಯಿತು.
ಇದೇ ಸಂಧರ್ಭದಲ್ಲಿ ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ ಡಿ.ಲೋಹಿತ್ ರವರು ಮಾತನಾಡಿ ಊಟಿಯಲ್ಲಿ ಅತಿ ಹೆಚ್ಚು ಕನ್ನಡಿಗರಿರುವ ಪ್ರದೇಶದಲ್ಲಿ ಮತಯಾಚನೆ ಮಾಡುವ ವೇಳೆ ಪ್ರತಿಯೊಬ್ಬ ಮತದಾರರು ಬಿಜೆಪಿ ಗೆ ಮತ ಹಾಕುವುದಾಗಿ ಮತ್ತು ಬಿಜೆಪಿಗೆ ನಮ್ಮ ಬೆಂಬಲ ಎಂದು ವಿಶ್ವಾಸ ವ್ಯಕ್ತಪಡಿಸಿದರು ಹಾಗೂ ಕೇಂದ್ರಲ್ಲಿ ಬಿಜೆಪಿ ಸರ್ಕಾರ ಇದ್ದು ತಮಿಳುನಾಡು ರಾಜ್ಯ ಮತ್ತು ಊಟಿಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಬಂದರೆ ಇನ್ನಷ್ಟು ಅಭಿವೃದ್ಧಿ ಸಾಧ್ಯ ಆದ್ದರಿಂದ ಬಿಜೆಪಿಗೆ ಮತ ನೀಡಿ ಭೂಜರಾಜ್ ರವರನ್ನು ಜಯಶೀಲರನ್ನಾಗಿ ಮಾಡಿ ಎಂದು ಮತಯಾಚನೆ ಮಾಡಲಾಯಿತು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನವೀನ್ ಕುಮಾರ್, ಲಕ್ಷ್ಮಿ ದೇವಿ, ಸಮಾಜ ಸೇವಕರಾದ ವಿಕ್ರಂ ಐಯಾಂಗಾರ್, ನವೀನ್ ಮೈಸೂರು ನಗರ ಎಸ್.ಟಿ.ಮೋರ್ಚಾ ಅಧ್ಯಕ್ಷರಾದ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ನಾಯಕ್, ಕಾರ್ಯದರ್ಶಿ ಕಾರ್ತಿಕ್ ನಾಯಕ್, ಕೃಷ್ಣ ಕುಮಾರ್, ರಂಗರಾಜು, ಚಾಮರಾಜ ಕ್ಷೇತ್ರದ ನಾರಾಯಣ್ ಸ್ವಾಮಿ, ಸುಬ್ರಹ್ಮಣ್ಯ, ಮುಖಂಡರಾದ ವಾಸು ಉಪಸ್ಥಿತರಿದ್ದರು.