ಕನ್ನಡಿಗರು ಹೃದಯ ವೈಶಾಲ್ಯ ಉಳ್ಳವರು-ಡಾ.ಕ್ರಾಂತ್ರಿ

ಆನೇಕಲ್, ನ.೩:ಕನ್ನಡಿಗರು ಹೃದಯ ವೈಶಾಲ್ಯತೆ ಉಳ್ಳವರಾಗಿದ್ದು, ಅನ್ಯ ಭಾಷಿಗರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಸ್ವಭಾವದವರಾಗಿದ್ದಾರೆ ಎಂದು ಗಡಿನಾಡು ಜೈ ಬೀಮ್ ವೇದಿಕೆಯ ಅಧ್ಯಕ್ಷ ಡಾ.ಕ್ರಾಂತಿ ಮುನಿರಾಜು ರವರು ತಿಳಿಸಿದರು.
ಅವರು ತಾಲ್ಲೂಕಿನ ನೆರಳೂರು ಗ್ರಾಮದಲ್ಲಿ ಗಡಿನಾಡು ಜೈಬೀಮ್ ವೇದಿಕೆ ವತಿಯಿಂದ ೬೫ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಜೀ ಟೀವಿ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಜೀವನ ಆದರಿತ ಮಹಾನಾಯಕ ದಾರಾವಾಹಿಯ ತಂಡಕ್ಕೆ ಅಬಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಬೇರೆಲ್ಲಾ ಭಾಷೆಗಳ ಮೇಲೆ ಹಿಡಿತ ಸಾಧಿಸುವಂತಹ ಗುಣ ಕನ್ನಡ ಭಾಷೆಗಿದೆ, ಸತ್ವಯುತವಾಗಿ ಕನ್ನಡ ಭಾಷೆ ಬೆಳೆದು ಇತರೆ ಅನ್ಯ ಭಾಷಿಕರೂ ಕನ್ನಡವನ್ನು ಕಲಿಯಬೇಕೆಂಬ ಆಸಕ್ತಿ ಮೂಡುವಂತಹುದು ಕನ್ನಡ ಭಾಷೆ, ಆದಿವಾಸಿಗಳು ಬೇರೆ ರಾಜ್ಯಗಳಿಂದ ಬಂದಿದ್ದರೂ ಸಹ ಈ ನಾಡಿನ ಕನ್ನಡ ಭಾಷೆಯನ್ನು ಕಲಿತು ನಾಡು-ನುಡಿಗೆ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಹೇಳಿದರು.
ಮಹಾನಾಯಕ ದಾರಾವಾಗಿ ರಾಜ್ಯದಲ್ಲಿ ಹೊಸ ಸಂಚಲನ ವುಂಟು ಮಾಡಿದೆ, ಅಂಬೇಡ್ಕರ್ ರವರ ಸಮ-ಸಮಾಜ ಕನಸಿನ ಭಾರತ ನಿರ್ಮಾಣಕ್ಕಾಗಿ ಮಾಡಿದ ಕಾರ್ಯಗಳ ಬಗ್ಗೆ ಜೀ ಟೀವಿ ವಾಹಿನಿಯಲ್ಲಿ ಪ್ರಸಾರ ಮಾಡುತ್ತಿದ್ದು ಎಲ್ಲಾ ವರ್ಗದ ಜನರು ಮಹಾನಾಯಕನ ದಾರಾವಾಹಿಯನ್ನು ನೋಡುವ ಮುಖೇ, ಸಮ-ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕಿದೆ ಎಂದು ಹೇಳಿದರು.
ಜಿ.ಪ ಸದಸ್ಯ ಗುಡ್ಡಹಟ್ಟಿ ನಾಗೇಶ್ ರೆಡ್ಡಿ, ಮುಖಂಡರಾದ ಶಶಿಕುಮಾರ್ ರೆಡ್ಡಿ, ತಿಮ್ಮಾರೆಡ್ಡಿ, ವೆಂಕಟೇಶ್, ನಾಗರಾಜ್, ರವಿಕುಮಾರ್, ಜಿ.ಮುನಿಯಲ್ಲಪ್ಪ,. ಉದಯ ಕುಮಾರ್, ರಾಕೇಶ್, ಯೋಗೇಶ್, ಹರೀಶ್, ಸಾಗರ್, ಮಂಜು ಮತ್ತಿತರು ಇದ್ದರು.