ಕನ್ನಡಿಗರಿಂದಲೇ ಕನ್ನಡದ ಉಳಿವು : ಶ್ರೀಶೈಲ್ ಬೇನೂರ

ಹುಮನಾಬಾದ:ನ.1:ಕನ್ನಡ ಕೇವಲ ಭಾಷೆಯಲ್ಲಾಗಬಾರದು ಅದು ನಮ್ಮ ರಕ್ತದ ಕಣಕಣದಲ್ಲಿ ಹರಿದಾಡುವಂತಾಗಬೇಕು ಅಂದಾಗ ಮಾತ್ರ ಕನ್ನಡದವರಿಂದಲೇ ಕನ್ನಡದ ಉಳಿವು ಆಗುತ್ತದೆ ಎಂದು ಶ್ರೀಶೈಲ್ ಬೇನೂರ ಪಟ್ಟಣದ ವಿಶ್ವ ಹಿಂದೂ ಪರಿಷದ್ ಕರ್ನಾಟಕ ಟ್ರಸ್ಟ್ ಸಂಚಾಲಿತ ಶ್ರೀ ಲಕ್ಷ್ಮಿ ವೆಂಕಟೇಶ್ವರ ಬಾಲಭಾರತಿ ವಿದ್ಯಾಮಂದಿರ ದಲ್ಲಿ ನಡೆದ 65ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡುತ್ತಾ 1890 ರಲ್ಲಿ ಕನ್ನಡ ವಿದ್ಯಾವರ್ಧಕ ಸಂಘ ಸ್ಥಾಪಿಸಿ ಶಾಲೆಗಳ ಮುಖಾಂತರ ಕನ್ನಡ ಬೆಸಿದರು ಎಂದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನದ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಶಿವಶಂಕರ ತರನಳ್ಳಿ ಕನ್ನಡವನ್ನು ಆತ್ಮೀಯವಾಗಿ ಯಾರು ಒಪ್ಪಿಕೊಳ್ಳುತ್ತಾರೆಯೋ ಅವರು ಭಾವನಾತ್ಮಕವಾಗಿ ಮತ್ತು ಬುದ್ದಿವಂತರಾಗಿ ಬೆಳೆಯುತ್ತಾರೆ. ಅನೇಕ ಶರಣರು ಬೇರೆ ಬೇರೆ ಭಾಗದಿಂದ ಈ ನೆಲಕ್ಕೆ ಬಂದು ಇಲ್ಲಿನ ಕನ್ನಡ ಭಾಷೆಯ ಮುಖಾಂತರವೇ ವಚನಗಳನ್ನು ರಚಿಸಿದರು. ಮತ್ತು ದೇಶದ ಅನೇಕ ರಾಜ್ಯಗಳಲ್ಲಿ ಕನ್ನಡದ ಹೆಸರಿನಿಂದ ಕರೆಯುವ ಊರುಗಳನ್ನು ನಾವು ನೋಡುತ್ತೇವೆ ಹೀಗಾಗಿ ಕನ್ನಡ ಸರಳ ಸುಲಿದ ಬಾಳೆಹಣ್ಣಿನಂತೆ ಇದೆ ಎಂದರು. ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಈ ಇಂಗ್ಲೀಷ ವ್ಯಾಮೋಹಕ್ಕೆ ಬಲಿಯಾಗದೆ ಕನ್ನಡದಲ್ಲಿಯೇ ಶಿಕ್ಷಣ ಕೊಡಿಸಬೇಕು ಕರೆ ನೀಡಿದರು.

ಶರಣಪ್ಪ ಹುಲಸೂರೆ ನಿರೂಪಿಸಿ ವಂದಿಸಿದರು. ನಿಜಲಿಂಗಪ್ಪ ಜಕ್ಕಾ, ವೀರಶೆಟಿ ಜೀರಗಿ, ಸದಾನಂದ ಖಮೀತ್ಕರ್, ಗೋವಿಂದಸಿಂಗ ತಿವಾರಿ, ರಾಮರಾವ ಕುಲ್ಕರ್ಣಿ, ಸರಸ್ವತಿ ಪಟವಾದಿ, ಉದಯಕುಮಾರ ಮಲಶೆಟ್ಟಿ, ದಿಲೀಪ ಗಾಯಕವಾಡ, ಅನಂತರೆಡ್ಡಿ ಶಿವರಾಯ, ಸತಿದೇವಿ ಮರಗೋಳ, ಪಾರ್ವತಿ ಮೈಲಾರಿ, ಶಿವಲೀಲಾ ಭತ್ಮುರ್ಗಿ, ಜನಾಬಾಯಿ, ಇಂದುಮತಿ ಡೋಣಗಾವೆ ಭಾಗವಹಿಸಿದರು.