ಕನ್ನಡಾಂಬೆಗೆ ಪುಷ್ಪ ನಮನ

ಕನಕಪುರ.ನ೫:ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಚನ್ನಬಸಪ್ಪ ವೃತ್ತ ಅಶೋಕ ಸ್ತಂಭದ ಬಳಿ ಕನ್ನಡಾಂಬೆಗೆ ಪುಷ್ಪನಮನ ಅರ್ಪಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಭಾನುವಾರ ಆಚರಣೆ ಮಾಡಲಾಯಿತು.
ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎಸ್.ಭಾಸ್ಕರ್ ಕನ್ನಡ ಬಾವುಟದ ಬಣ್ಣದಲ್ಲಿಯೇ ತಮ್ಮ ಉಡುಪುಗಳನ್ನು ತೊಟ್ಟು ಎಲ್ಲರ ಗಮನ ಸೆಳೆದರು.
ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್, ರೈತ ಸಂಘದ ಚೀಲೂರು ಮುನಿರಾಜು, ರಾಜ್ಯ ಒಕ್ಕಲಿಗರ ಒಕ್ಕೂಟದ ಗಬ್ಬಾಡಿ ಕಾಡೇಗೌಡ, ಸ್ವಕರವೇ ಪದಾಧಿಕಾರಿಗಳಾದ ಅಂಗಡಿ ರಮೇಶ್, ಅಸ್ಗರ್‌ಖಾನ್, ಅಪ್ಪಾಜಿ ಮತ್ತಿತರರು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.