ಕನ್ನಡವೇ ಸತ್ಯ ಕನ್ನಡವೇ ನಿತ್ಯ


ಹಿರಿಯೂರು.ನ.೧೦: ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ನಮ್ಮ ಚಾಲಕರ ಟ್ರೇಡ್ ಯೂನಿಯನ್ ಹಿರಿಯೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ತಿರುಪತಿ ದಾದಾಪೀರ್ ಹೇಳಿದರು. ಯೂನಿಯನ್ ಕಾರ್ಯಾಲಯದಲ್ಲಿ ನಡೆದ ನಟ ಶಂಕರ್ ನಾಗ್ ರವರ ಹುಟ್ಟುಹಬ್ಬ ಚಾಲಕರ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಟ ಶಂಕರ್‌ನಾಗ್ ನಟನೆ ಹಾಗೂ ಆದರ್ಶಗಳನ್ನು ನೆನಪಿಸಿದರು. ಲಾಕ್‌ಡೌನ್ ಸಂದರ್ಭದಿಂದಲೂ ಚಾಲಕರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ಚಾಲಕರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ನಗರಸಭೆ ಅಧ್ಯಕ್ಷರಾದ ಶಂಶುನ್ನೀಸಾ ರವರು ಮಾತನಾಡಿ ಚಾಲಕರ ಯಾವುದೇ ಕೆಲಸಕಾರ್ಯಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನಗರಸಭೆ ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್ ಮಾತನಾಡಿ ಚಾಲಕರು ಶ್ರಮಜೀವಿಗಳು ಅವರ ಸೇವೆ ಶ್ಲಾಘನೀಯವಾದದ್ದು ಎಂದು ಹೇಳಿದರು. ಚಿನ್ನದ ಪದಕ ಪುರಸ್ಕೃತರಾದ ಎಂ.ಆರ್.ಅಮೃತಲಕ್ಷ್ಮಿಯವರು ಮಾತನಾಡಿ ಚಾಲಕರು ನಂಬಿಕೆಗೆ ಅರ್ಹರಾಗಿದ್ದಾರೆ ಎಂದರು ಹಾಗೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಕಾರ್ಮಿಕ ಬಂಧು ಫಜ್ಲುಲ್ಲಾ ರೆಹಮಾನ್ ರವರು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಜಾಮಿಯಾ ಮಸೀದಿ ಸದಸ್ಯ ಸೈಯದ್ ಆಫಕ್, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಪಿ.ಎಸ್.ಸಾದತ್‌ವುಲ್ಲಾ, ಯೂನಿಯನ್ ಗೌರವ ಅಧ್ಯಕ್ಷರಾದ ಉಬೇದುಲ್ಲಾ, ಶಾಮು ಅಖಿಲ್, ಮೀಸೆ ನಾಗಣ್ಣ, ಸಂಘಟನಾ ಕಾರ್ಯದರ್ಶಿ ಮುರುಳಿ, ಖಜಾಂಚಿ ಅಶೋಕ್‌ರಾಜ್, ಸಹಕಾರ್ಯದರ್ಶಿ ತಿಮ್ಮೇಶ್, ಹಟ್ಟಿಗಿರೀಶ್, ಕಾರ್ಯಕಾರಿಣ ಸದಸ್ಯ ಮುರುಗನ್, ಸುರೇಶ್, ಶಫಾಯತ್, ಮಧುಸೂದನ್ ಹಾಗೂ ಯೂನಿಯನ್ ಪದಾಧಿಕಾರಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಚಾಲಕರಿಗೆ ಗುರುತಿನ ಪತ್ರ ವಿತರಣೆ ಹಾಗೂ ಕೊರೊನಾ ವಾರಿಯರ್ಸ್ ಗೆ ಸನ್ಮಾನ ನಡೆಯಿತು.
ಫೋಟೊ ೧೨