ಕನ್ನಡವೇ ನಮ್ಮ ಉಸಿರಾಗಲಿ-ಡಾಎಂಚಂದ್ರಶೇಖರ್

ಕೋಲಾರ,ನ.೩:ಕನ್ನಡದ ಅಸ್ಮಿತೆಗಾಗಿ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡ ಬೇಕಾಗಿದೆ. ನವೆಂಬರ್‌ನಲ್ಲಿ ಎಲ್ಲರಿಗೂ ಕನ್ನಡದ ನೆನಪಾಗುತ್ತಿದೆ. ನಾವು ಕೇವಲ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡಿಗರಾದರೆ ಸಾಲದು, ಪ್ರತಿನಿತ್ಯ ನಾವು ಕನ್ನಡಿಗರಾಗಬೇಕು. ಕನ್ನಡವೇ ನಮ್ಮ ಉಸಿರಾಗಿರಾಗಲಿ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ.ಎಂ.ಚಂದ್ರಶೇಖರ್ ತಿಳಿದರು.
ಬಂಗಾರಪೇಟೆ ತಾಲೂಕಿನ ಹಂಚಾಳ ಗೇಟ್‌ನಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿರು.
ನಾವು ಕನ್ನಡ ನಾಡಿನ ಕರುಣಾಳುಗಳು, ಜಾತಿ, ಭಾಷೆ, ಮತ, ಕುಲ ಮೀರಿದ ಕನ್ನಡಾಂಬೆ ತಾಯಿ ಭುವನೇಶ್ವರಿಯ ಸಂತತಿ ನಮ್ಮದು, ನಮ್ಮ ಊರು ಕರ್ನಾಟಕ ನಮ್ಮ ಉಸಿರು ಕನ್ನಡ ನಮ್ಮ ನೆಲ ಜಲ ಸಂಸ್ಕೃತಿ, ನಡೆ ಕನ್ನಡ ನುಡಿ ತನು ಕನ್ನಡ ಮನ ಕನ್ನಡವಾಗಿದೆ. ಇಲ್ಲಿ ಕನ್ನಡವೇ ಸಾರ್ವಭೌಮ ನಮ್ಮಗಳ ಫಲವೇ ಕನ್ನಡವಾಗಿದೆ. ೮ ಜನ ಜ್ಞಾನಪೀಠ ಪ್ರಶಸ್ತಿ ಪುತ್ರರನ್ನು, ಇಬ್ಬರು ರಾಷ್ಟ್ರ ಕವಿಗಳನ್ನು ಕಂಡ ನಾಡು ಚಿನ್ನದ ಬೀಡು ಕವಿ ನಿಸ್ಸಾರ್ ಅಹ್ಮದ್ ವಾಣಿಯಂತೆ ಕನ್ನಡ ನಿತ್ಯೋತ್ಸವವಾಗಿದೆ ಎಂದರು.
ಆದಿ ಕವಿ ಪಂಪ ಆದಿಯಾಗಿ ಇಂದು ಜಯಭಾರತ ಜನನಿಯ ತನುಜಾತೆ ಬಾರಿಸು ಕನ್ನಡ ಡಿಂಡಿಮವ, ಹಚ್ಚೆವು ಕನ್ನಡದ ದೀಪ, ಜೋಗದ ಸಿರಿ ಬೆಳಕಿನಲ್ಲಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಮೂಗುರು ಮಲ್ಲಪ್ಪನವರ ಜೋಗದ ಸಿರಿ ಮುಂತಾದ ಕವಿವರ್ಯರು ಜೀವಿಸಿದ್ದ ನಮ್ಮ ನಾಡು ನುಡಿ ಜೀವಂತವಾಗಿದೆ ಎಂದು ಹೇಳಿದರು.
ಹೊರರಾಜ್ಯ, ರಾಷ್ಟ್ರಗಳಲ್ಲಿ ನಮ್ಮ ಕನ್ನಡಿಗರು ಕನ್ನಡಿಗರ ಭಾಷೆ ಬೆಳೆಯಲು ಅವಿರತ ಶ್ರಮಿಸುತ್ತಿದ್ದಾರೆ. ಕನ್ನಡ, ಕನ್ನಡಿಗರಿಗೆ ಅಲ್ಲದೆ ಅನ್ಯ ಭಾಷಿಕರಿಗೂ ಅಮೃತ ಆಶ್ರಯ ಕೋರಿ ಬಂದವರಿಗೆ ನೆರಳಾಗಿ ಬದುಕು ಬಯಸಿದವರಿಗೆ ದಾರಿ ದೀಪವಾಗಿದೆ ಆದಕಾರಣ ನಾವು ಕನ್ನಡ ಭಾಷೆಯನ್ನು ಅಪ್ಪಿಕೊಳ್ಳಬೇಕು ಆರಾಧಿಸಿ ಪೂಜಿಸಬೇಕು ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕವಾಗಲಿ ಆ ತೋಟದಲ್ಲಿ ಕನ್ನಡ ಭಾಷೆ, ಕಂಪು, ಇಂಪು ನಾಡಿನಾದ್ಯಂತ ಪಸರಿಸಲಿ ಅರಳುವ ಪುಷಗಳು ತಾವಾಗಲಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ತಿಳಿಸಿದರು.
ವಿಜಯನಗರ ಅರಸರ ಅವಧಿ ಟಿಪ್ಪು ಸುಲ್ತಾನರ ಕಾಲ ಕನ್ನಡ ನುಡಿ ಶ್ರೀಮಂತವಾಗಿದ್ದು ಗಡಿ ಆಚೆಗೂ ಪ್ರಚಾರದಲ್ಲಿತ್ತು. ಆದುದರಿಂದ ಸರ್ಕಾರ ಕೋಟಿ ಕಂಠಗಾಯನದ ಮೂಲಕ ಕನ್ನಡವನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ಉತ್ತಮ ಕಾರ್ಯವನ್ನು ಕೈಗೊಂಡಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ದಿ ಸಮಿತಿಯ ಸಿಬ್ಬಂದಿ ವರ್ಗ, ಶಿಕ್ಷಕರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಸಿ.ವಿ. ಶ್ರೀರಾಮ್ ಪ್ರಾರ್ಥಿಸಿ, ಎಂ.ವೆಂಕಟೇಶಪ್ಪ ಸ್ವಾಗತಿಸಿ, ಎಂ. ಪಾಪಣ್ಣ ನಿರೂಪಿಸಿ, ವಂದಿಸಿದರು.