ಕನ್ನಡವನ್ನು ನಾವು ರಕ್ಷಿಸಿದರೆ, ಕನ್ನಡ ನಮ್ಮನ್ನು ರಕ್ಷಿಸುತ್ತದೆ: ಶಿಕ್ಷಕಿ ರೇಣುಕಮ್ಮ

ಚಾಮರಾಜನಗರ, ನ.13:- ನಮ್ಮ ಮಾತೃಭಾμÉಯ ಬಗೆಗೆ ನಮಗೆ ಅಭಿಮಾನವಿರಬೇಕು, ಕನ್ನಡವನ್ನು ನಾವು ರಕ್ಷಿಸಿದರೆ, ಕನ್ನಡ ನಮ್ಮನ್ನು ರಕ್ಷಿಸುತ್ತದೆ ಎಂದು ಹಿರಿಯ ಶಿಕ್ಷಕಿ ರೇಣುಕಮ್ಮ ಅಭಿಪ್ರಾಯಪಟ್ಟರು.
ಅವರು ಜೆಎಸ್‍ಬಿ ಪ್ರತಿμÁ್ಠನದ ವತಿಯಿಂದ ಗುಂಡ್ಲುಪೇಟೆ ತಾಲೂಕಿನ ಹೊರೆಯಾಲ ಜೆಎಸ್‍ಎಸ್ ಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ಮಾಸಾಚರಣೆ 2022 ಕಾರ್ಯಕ್ರಮವನ್ನು ಕನ್ನಡಾಂಬೆ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿ ಮಾತನಾಡದ ಅವರು, ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸುವಂತಿರಬೇಕು. ಜಗತ್ತು ಎಷ್ಟು ವೈಜ್ಞಾನಿಕವಾಗಿ ಮುನ್ನಡೆ ಸಾಧಿಸಿದ್ದರೂ ಕನ್ನಡವನ್ನು ನಾವು ಮರೆಯಬಾರದು. ಕನ್ನಡದ ಉಳಿವಿನ ಬಗ್ಗೆ ಹೆಚ್ಚೆಚ್ಚು ಹೋರಾಟಗಳು ನಡೆಯುತ್ತಿದ್ದರೂ ಕನ್ನಡ ಅಳಿವಿನ ಹಾದಿಯಲ್ಲಿದೆ. ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾμÉಯಾಗಬೇಕು. ಪ್ರಾಥಮಿಕ ಹಂತದಲ್ಲಿ ಇಂಗ್ಲೀμï ಮಾಧ್ಯಮದ ಬದಲಿಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ನಮ್ಮ ಕವಿವರ್ಯರುಗಳು ಕನ್ನಡ ಮಾಧ್ಯಮದಲ್ಲಿ ಕಲಿತು, ಇಂಗ್ಲೀμï ಪಂಡಿತರಾಗಿದ್ದರು. ಹಲವಾರು ಇಂಗ್ಲೀμï ಗ್ರಂಥಗಳನ್ನು ರಚಿಸಿದ್ದಾರೆ. ಮಾಧ್ಯಮ ಇಂಗ್ಲೀμï ಆಯ್ಕೆ ಮಾಡಿಕೊಂಡಿದ್ದರೂ, ಇಂಗ್ಲೀμï ಭಾμÁ ವಿಷಯವನ್ನು ಬಿಟ್ಟು ಕನ್ನಡದಲ್ಲೇ ಉಳಿದ ವಿಷಯಗಳನ್ನು ಕಲಿಯಬೇಕು ಎಂದರು.
ನಮ್ಮ ನಾಡಿನ ಬಸವಾದಿ ಶರಣರ ಸಾಹಿತ್ಯ, ಸಂತರ ಸಂದೇಶಗಳನ್ನು ಇಂದಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಓದಬೇಕು. ಕನ್ನಡದ ಮೇಲೆ ಹಿಂದಿ, ಇಂಗ್ಲೀμï, ಸಂಸ್ಕøತದ ಹೇರಿಕೆ ಕಂಡು ಬರುತ್ತಿದೆ. ಕನ್ನಡ ಸುಲಭವಾದ ವೈಜ್ಞಾನಿಕ ಭಾμÉಯಾಗಿದೆ. ಕನ್ನಡ ನಾಡು, ನುಡಿ ಉಳಿಯಲು ಕನ್ನಡಿಗರಲ್ಲಿ ಒಗ್ಗಟ್ಟು ಇರಬೇಕು. ಕನ್ನಡಿಗರಲ್ಲಿ ಸಂಕುಚಿತತೆಗೆ ಬದಲು ಹೃದಯ ವೈಶಾಲ್ಯತೆ ಇದ್ದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯವಾಗುತ್ತದೆ ಪ್ರಾಚೀನ ಭಾμÉಗಳಲ್ಲಿ ಕನ್ನಡ ಕೂಡ ಒಂದಾಗಿದ್ದು, ಎಳೆಯ ಮಕ್ಕಳಲ್ಲಿ ಇಂಗ್ಲೀμï ಮಾಧ್ಯಮ ಕಲಿಕೆಯಿಂದ ಆಧ್ಯಾತ್ಮಿಕ-ಸಾಮಾಜಿಕತೆ ನಾಶವಾಗುತ್ತದೆ. ವೈಚಾರಿಕತೆ ಬೆಳೆವುದು ಮಾತೃ ಭಾμÉಯಿಂದ ಮಾತ್ರ. ಕನ್ನಡ ವೈಜ್ಞಾನಿಕ ಭಾμÉಯಾಗಿದ್ದು, ಭಾμÁಂಧತೆ ಬಿಟ್ಟು ಒಳ್ಳೆಯ ವಿಚಾರಗಳನ್ನು ಬೇರೆ ಭಾμÉಗಳಿಂದ ಕಲಿಯೋಣ, ಕನ್ನಡ ಬಳಸಿ, ಬೆಳೆಸೋಣ ಎಂದರು.
ಚಿಂತಕ ರವಿರಾಜ್ ರಾಜ್ಯೋತ್ಸವ ಎಂಬುದು ನಿತ್ಯೋತ್ಸವವಾಗಬೇಕು, ಕನ್ನಡದ ಬಳಕೆಗೆ ನಾವು ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ಜೆಎಸ್‍ಬಿ ಪ್ರತಿμÁ್ಠನದ ಶಶಿಕುಮಾರ್ ಕಾರ್ಯಕ್ರಮದ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ಸ್ಪರ್ಧೆ ನಡೆಸಿ, ವಿಜೇತ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ ನೀಡುವ ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ಕನ್ನಡ ಪುಸ್ತಕ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ರೇಣುಕಾ, ಲೋಕೇಶ, ಮೋಹನ, ಶಿವಪ್ರಸಾದ, ಶಿವಶಂಕರ, ಶಿವಕುಮಾರಸ್ವಾಮಿ, ಉಮಾ, ರೇವಣ್ಣ, ರವಿಕುಮಾರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.