ಕನ್ನಡವನದಲ್ಲಿ ಕನ್ನಡದ ಧ್ವಂಜಸ್ತಂಭ ಧ್ವಂಸ; ಕನ್ನಡಾಭಿಮಾನಿಗಳ ಅಸಮಾಧಾನ

ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೯; ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಕನ್ನಡವನದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಧ್ವಜ ಸ್ತಂಭವನ್ನು ಧ್ವಂಸಗೊಳಿಸಲಾಗಿದೆ ಈ ಬಗ್ಗೆ ಕೇಳಿದರೆ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರು ಹೇಳಿದ್ದಾರೆ ಎನ್ನಲಾಗಿದೆ ವೈಯಕ್ತಿಕ ದ್ವೇಷದಿಂದ ಈ ರೀತಿ ಮಾಡಲಾಗಿದೆ ಎಂದು ಕರುನಾಡ ಕನ್ನಡ ಸೇನೆ ಮತ್ತು ಕನ್ನಡ ಪರ ಸಂಘಟನೆಯ ಅಧ್ಯಕ್ಷರಾದ ಕೆ.ಟಿ ಗೋಪಾಲಗೌಡ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕನ್ನಡದ ಅಭಿಮಾನ ಹಾಗೂ ಪರಿಸರದ ಅಭಿಮಾನದಿಂದ ಕರುನಾಡ ಕನ್ನಡ ಸೇನೆ ವತಿಯಿಂದ ದಶಕಗಳಿಂದ  ಕಸದ ರಾಶಿಯಿಂದ ತುಂಬಿದ್ದ ಸ್ಥಳವನ್ನು ಸ್ವಚ್ಛಗೊಳಿಸಿ ನೂರಾರು ಮರಗಳನ್ನು ಬೆಳೆಸಿ ಕನ್ನಡದ ಹೋರಾಟಗಾರರು, ಕವಿಗಳು, ಸಾಹಿತಿಗಳ ಚಿತ್ರಗಳನ್ನು ಗೋಡೆ ಬರಹಗಳನ್ನು ಬರೆಯಿಸಿ ಕನ್ನಡ ಧ್ವಜವನ್ನು ನಿರ್ಮಿಸಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ.ಆದರೆ ಇದೀಗ ಕನ್ನಡವನದ ಧ್ವಜಸ್ತಂಭವನ್ನು  ಧ್ವಂಸ ಮಾಡಲಾಗಿದೆ ಇದನ್ನು ಕೇಳಿದರೆ ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರು ಹೇಳಿದ್ದಾರೆಂದು ತಿಳಿಸಿದ್ದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ. ಕನ್ನಡ ವನದಲ್ಲಿ ದಿ ಪುನೀತ್ ರಾಜಕುಮಾರ್  ಪ್ರತಿಮೆ ಮುಂದಿರುವ ಕನ್ನಡ  ಧ್ವಜವಿದ್ದ ಧ್ವಜ ಸ್ತಂಭವನ್ನು ಧ್ವಂಸಗೊಳಿಸಿರುವುದು‌ ಕನ್ನಡಿಗರಿಗೆ ಹಾಗೂ ದಿ.ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ‌ ಮಾಡಿದ ಅವಮಾನ.ಈ ಹಿಂದೆ ಅದೇ ಶ್ರೀನಿವಾಸ ಶ್ರೇಷ್ಠಿ ಉದ್ಯಾನವನಕ್ಕೆ ನ್ಯಾಯಾಲಯದಿಂದ ಪರ್ಮನೆಂಟ್ ಇನ್ಜಕ್ಷನ್ ಮತ್ತು ಡಿಕ್ರಿಯಾಗಿರುತ್ತದೆ.ಇಂತಹ ಆದೇಶವಿದ್ದರೂ ಧ್ವಂಸಗೊಳಿಸಿರುವುದು ಖಂಡನೀಯ ಎಂದರು.ಪರಿಸರ ಪ್ರೇಮಿಗಳಾದ ಗಿರೀಶ್ ದೇವರಮನೆ ಹಾಗೂ ಎಂ.ಜಿ ಶ್ರೀಕಾಂತ್ ಮಾತನಾಡಿ ಕನ್ನಡವನದಲ್ಲಿ ನಾಡಧ್ವಜಕ್ಕೆ ಅಪಮಾನ ಮಾಡಲಾಗಿದೆ. ಈ ಕೂಡಲೇ ಇದನ್ನು ಸರಿಪಡಿಸಬೇಕು‌ ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ರಾಜೇಂದ್ರ ಬಂಗೇರ,ಕೆ.ಎನ್ ವೆಂಕಟೇಶ್, ಮಾರುತಿ,ಶಿವರಾಜ್,ಶಿವಕುಮಾರ್ ಉಪಸ್ಥಿತರಿದ್ದರು.