ಕನ್ನಡಮ್ಮನ ತೇರಿಗೆ ಸಂಭ್ರಮದ ಸ್ವಾಗತ


ಸಂಜೆವಾಣಿ ವಾರ್ತೆ
ಸಂಡೂರು :ಜು:24 ಆಜಾದಿಕ ಅಮೃತ ಮಹೋತ್ಸವ ಭಾರತದ 75ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಸ್ವಾಮಿ ವಿವೇಕಾನಂದರ 150ನೇ, ಗುರು ತೇಗ ಬಹದ್ದೂರವರ 400ನೇ ತ್ಯಾತ್ಯಾ ಟೋಪಿಯ ಬಾಲ ಗಂಗಾಧರ ತಿಲಕರ ಸ್ವರಾಜ್ಯವೇ ನಮ್ಮ ಜನ್ಮ ಸಿದ್ದ ಹಕ್ಕು ಘೋಷಣೆಯ 150ನೇ ವರ್ಷ ಸುಭಾಷ್ ಚಂದ್ರ ಬೋಸರ 125ನೇ ಜಯಂತಿ ಹೀಗೆ ಹತ್ತು ಹಲವಾರು ಸ್ಮರಣೆಗಳ ವಿಚಾರವಾಗಿ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮ ಕಿರೀಟ ಪ್ರಾಯವಾಗಿದೆ. ಈ ಎಲ್ಲಾ ಸ್ವಾತಂತ್ರ್ಯದ ಹ್ಬಬದ ಕನ್ನಡಮ್ಮನ ತೇರು ತೋರಣಗಲ್ಲು ಮುಖಾಂತರ ಸಂಡೂರು ತಾಲ್ಲೂಕಿನ ಕೃಷ್ಣನಗರ ಗ್ರಾಮದಲ್ಲಿ ಆದರ್ಶ ವಿದ್ಯಾಲಯ, ಸ.ಹಿ.ಪ್ರಾ.ಶಾಲೆಯ ಕೃಷ್ಣಾನಗರ ಬಂದಾಗ ಮಧ್ಯಾಹ್ನ 2.30ನಿ. ಕನ್ನಡಮ್ಮನ ತೇರು ಆಗಮಿಸುತ್ತಿದ್ದಂತೆಯೇ ಸಂಡೂರಿನ ವಿರಕ್ತಮಠಾಧೀಶ್ವರರಾದ ಪರಮಪಜ್ಯಶ್ರೀ ಪ್ರಭುಮಹಾಸ್ವಾಮಿಗಳು ರಥೋತ್ಸವಕ್ಕೆ ಪುಷ್ಪ ಗುಚ್ಚ ಹಾಕವುದುರ ಮೂಲಕ ಕನ್ನಡಮ್ಮನ ತೇರನ್ನು ಬರಮಾಡಿಕೊಂಡರು ಈ ಸಂದರ್ಭದಲ್ಲಿ ಸಮಾಜಿಕ ಜಾಲತಾಣದ ಜಿಲ್ಲಾ ವಿಭಾಗದ ಬಸವರಾಜ ಸಾಲಿಗ ಜಿಲ್ಲಾ ಸಂಚಾಲಕ ನರಿ ನಾಗರಾಜ ವಿಭಾಗದ ಸಂಚಾಲಕ ಗುರು ಪ್ರಸಾದ್ ಮಠದ ಗುಡೇಕೋಟೆ ನಾಗರಾಜ ಪ್ರಶಾಂತ ಅಲ್ಲದೇ ಯುವ ಬ್ರೀಗೇಡನ ಹಲವಾರು ಗಣ್ಯ ಮಾನ್ಯರು ರಥೋತ್ಸವವನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಆದರ್ಶ ಮಹಾವಿದ್ಯಾಲಯ, ಸ.ಹಿ.ಪ್ರ. ಕೃಷ್ಣಾನಗರ ಬಿ.ಕೆ.ಜಿ. ಗ್ಲೋಬಲ್ ಶಾಲೆ ಕೃಪಾನಿಲಯ ಶ್ರೀ ಶೈಲೇಶ್ವರ ವಿದ್ಯಾಕೇಂದ್ರ ವಿವೇಕಾನಂದ ಶಾಲೆ, ಶ್ರೀ ಛತ್ರಪತಿ ಶಿವಾಜಿ ವಿದ್ಯಾಮಂದಿರ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆ ತೋರಣಗಲ್ಲು ಕುರೆಕುಪ್ಪ ಶಾಲೆ ಅಲ್ಲದೇ ಹಲವಾರು ಶಾಲೆಗಳಲ್ಲಿ ಮಕ್ಕಳಿಗೆ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

Attachments area