ಕನ್ನಡಮ್ಮನ ಕೃಪೆಯಿಂದ ವಿಪತ್ತು ತೊಲಗಲಿ

ಮಂಗಳೂರು, ನ.೨- ದೆಹಲಿ ಕರ್ನಾಟಕ ಸಂಘದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಕನ್ನಡ ಭುವನೇಶ್ವರಿಗೆ
ಪೂಜೆ ಸಲ್ಲಿಸಿ ಧ್ವಜಾರೋಹಣ ನಡೆಸಿದ ನಂತರ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ. ವೆಂಕಟಾಚಲ ಹೆಗಡೆ
ಮಾತನಾಡಿ ಶುಭ ಹಾರೈಸಿದರು.
ನಮ್ಮ ನಾಡು ಅನೇಕ ಅಡೆತಡೆಗಳನ್ನು ಎದುರಿಸಿದರೂ ಎಂದಿನಂತೆ ಅಭಿವೃದ್ಧಿ ಪಥದಲ್ಲಿ ಸಾಗಲಿ. ಕನ್ನಡಿಗರು ಸುಖ, ಸಂತೋಷ ನೆಮ್ಮದಿಯಿಂದ ಬಾಳುವಂತಾಗಲಿ. ಕನ್ನಡಮ್ಮನ ಕೃಪೆಯಿಂದ ಈಗ ಎದುರಾಗಿರುವ ಕೋವಿಡ್-೧೯ ನಂತಹ ವಿಪತ್ತು ತೊಲಗಲಿ ಎಂದವರು ಆಶಿಸಿದರು.
ಉಪಾಧ್ಯಕ್ಷ ಡಾ. ಅವನೀಂದ್ರನಾಥ್ ರಾವ್ ಮಾತನಾಡಿ ತಾಯ್ನೆಲದ ಋಣ ತೀರಿಸಲಾಗದು. ದೈನಂದಿನ ಕೆಲಸಗಳ ನಡುವೆಯೂ ನಾವು ಕನ್ನಡದ ಕೆಲಸ ಕಾರ‍್ಯಗಳಲ್ಲಿ ತೊಡಗಿಸಿಕೊಳ್ಳುವ. ಈ ಮೂಲಕ ನಾಡು ನುಡಿಗೆ ದೇಣಿಗೆ ಸಲ್ಲಿಸುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಕೋವಿಡ್ ಕಾರಣದಿಂದ ವರ್ಷ ೨೦೨೦ ನಮಗೆ ಹಿನ್ನಡೆ ತಂದಿರಬಹುದು. ಆದರೆ ಕನ್ನಡಕ್ಕಾಗಿ ತುಡಿಯುವ ಮನಸ್ಸು ಸದಾ ಇರಲಿ ಎಂದು ಕಾರ‍್ಯಕಾರಿ ಸಮಿತಿ ಸದಸ್ಯ ಎನ್.ಆರ್. ಶ್ರೀನಾಥ್ ಹಾರೈಸಿ ವಂದಿಸಿದರು.
ಕಾರ‍್ಯಕಾರಿ ಸಮಿತಿ ಸದಸ್ಯ ಶಿವಪ್ಪ ಎಂ., ಕಲಾವಿದ ಸುಧೀರ್ ಫಡ್ನೀಸ್, ಹಿರಿಯ ಕನ್ನಡಿಗ ಮೂರ್ತಿ ಕೆ.ಎಸ್., ಐಟಿಬಿಪಿಯ ಜಕ್ಕಪ್ಪ, ಶ್ರೀಮತಿ ಪದ್ಮಿನಿ ಶ್ರೀನಾಥ್ ಮೊದಲಾದವರು ಭಾಗವಹಿಸಿದರು.