ಕನ್ನಡಭವನದಲ್ಲಿ ರೆಡಿಮೇಟ್ ಉಡುಪುಗಳ ಮಾರಾಟಮೇಳ: 4 ದಿನ ವಿಸ್ತರಣೆ

ಕಲಬುರಗಿ ನ 29: ನಗರದ ಸರ್ದಾರ ವಲ್ಲಭಭಾಯಿ ಪಟೇಲವೃತ್ತದಲ್ಲಿರುವ ಕನ್ನಡ ಭವನ( ಬಾಪುಗೌಡ ದರ್ಶನಾಪುರ ರಂಗಮಂದಿರ)ದಲ್ಲಿ ರೂಪಂ ವತಿಯಿಂದ ಪ್ರಾರಂಭಗೊಂಡ ವಿವಿಧ ಬ್ರಾಂಡೆಡ್ ರೆಡಿಮೇಡ್ ಉಡುಪುಗಳ ಮಾರಾಟಮೇಳವನ್ನು ಗ್ರಾಹಕರ ಉತ್ತಮ ಪ್ರತಿಕ್ರಿಯೆಯಿಂದ ಹೊಸ ಸ್ಟಾಕ್ ನೊಂದಿಗೆ 4 ದಿನ ವಿಸ್ತರಿಸಲಾಗಿದೆ.
ಕೈಗೆಟಕುವ ಬೆಲೆಯಲ್ಲಿ ಪುರುಷರ ಶರ್ಟು,ಪ್ಯಾಂಟು,ಜೀನ್ಸ್, ಟೀಶರ್ಟು,ಮಹಿಳೆಯರ ವಿವಿಧ ವಿನ್ಯಾಸದ ಕುರ್ತಿಗಳು,ಪ್ಯಾಂಟುಗಳು ಮತ್ತು ಮಕ್ಕಳ ಸಿದ್ಧ ಉಡುಪುಗಳು ,ಪ್ರಿಂಟೆಡ್ ಬೆಡ್‍ಶೀಟ್ ಗಳು ,ಪಿಲ್ಲೋ ಕವರುಗಳು ಸೇರಿದಂತೆ ಹಲವಾರು ವಸ್ತ್ರ ವಿನ್ಯಾಸಗಳು,ಗೃಹ ಉಪಯೋಗಿ ಬಟ್ಟೆಯವಸ್ತುಗಳು ಇಲ್ಲಿ ದೊರೆಯುತ್ತಿದ್ದು,ಜನ ಸಂತೋಷದಿಂದ ಖರೀದಿಯಲ್ಲಿ ತೊಡಗಿದ್ದಾರೆ.
ಇಲ್ಲಿನ ಉಡುಪುಗಳಿಗೆ ಶೇ 80ರ ವರೆಗೆ ಅತ್ಯಧಿಕ ರಿಯಾಯತಿ ನೀಡಲಾಗುತ್ತಿದೆ. ಇದು ಗ್ರಾಹಕರ ಮುಖ್ಯ ಆಕರ್ಷಣೆಗೆ ಕಾರಣವಾಗಿದೆ.
ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ಮಾರಾಟ ಮೇಳ ನಡೆಯುತ್ತಿದ್ದು, ಭೇಟಿ ನೀಡುವ ಗ್ರಾಹಕರಿಗೆ ಸಂಪೂರ್ಣ ಉಚಿತ ಪ್ರವೇಶ ಮತ್ತು ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಇನ್ನು ತಡವೇಕೆ? ತ್ವರೆ ಮಾಡಿ. ತಕ್ಷಣ ಕನ್ನಡಭವನದ ರೆಡಿಮೇಡ್ ಉಡುಪುಗಳ ಮಾರಾಟ ಮೇಳಕ್ಕೆ ಭೇಟಿ ನೀಡಿರಿ. ಸುವರ್ಣ ಅವಕಾಶ ಕಳೆದುಕೊಳ್ಳದಿರಿ.ನಿಮಗೆ ಇಷ್ಟವಾದುದನ್ನು ಆಯ್ಕೆ ಮಾಡಿ ಕೊಳ್ಳುವ ಸಂತಸ ನಿಮ್ಮದಾಗಲಿ ಎಂದು ಮಾರಾಟಮೇಳದ ಆಯೋಜಕರು ಮನವಿ ಮಾಡಿದ್ದಾರೆ.