ಕನ್ನಡದ ಹಿರಿಯ ನಟಿ ಲೀಲಾವತಿ ಅವರಿಗೆ ಶೃದ್ಧಾಂಜಲಿ

ಕಲಬುರಗಿ:ಡಿ.08: ಶುಕ್ರವಾರ ಸಂಜೆ ನಿಧನರಾದ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿರುವ ಹಿರಿಯ ನಟಿ ಲೀಲಾವತಿ ಅವರಿಗೆ ನಗರದ ಜೆ.ಆರ್. ನಗರದಲ್ಲಿನ ‘ಬೀಟಾ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶೃದ್ಧಾಂಜಲಿ ಸಲ್ಲಿಸಲಾಯಿತು.
ಚಿಂತಕಿ ಅಂಕಿತಾ ತಿವಾರಿ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸಮಾಜ ಸೇವಕ ಅಸ್ಲಾಂ ಶೇಖ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಸಂಸ್ಥೆಯ ಸೋಹೆಲ್ ಶೇಖ್, ರಜಯುದ್ದೀನ್ ಜವಾದ್ ಸಿದ್ಧಿಕಿ ಸೇರಿದಂತೆ ಇನ್ನಿತರರಿದ್ದರು.