ಕನ್ನಡದ ಸಣ್ಣ ಕತೆಗಳ ಜನಕರೆಂದೇ ಖ್ಯಾತಿ ಹೊಂದಿದ್ದ ಮಾಸ್ತಿ

ಮೈಸೂರು. ಜೂ.06: ಬ್ರಾಹ್ಮಣ ಸಂಘ ಹಾಗೂ ಡಿಟಿ.ಎಸ್ ಫೌಂಡೇಶನ್ ವತಿಯಿಂದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಜನ್ಮದಿನೋತ್ಸವದ ಅಂಗವಾಗಿ ಹಿನಕಲ್ ಮತ್ತು ಹೂಟಗಳ್ಳಿ ಕೆಹೆಚ್.ಬಿ ಕಾಲೋನಿಯಲ್ಲಿ ಕೊರೋನಾ ಸೊಂಕಿನಿಂದ ತೊಂದರೆಯಲ್ಲಿರುವ 100 ಅವಶ್ಯಕ ಕುಟುಂಬಗಳಿಗೆ ಆಹಾರ ದಿನಸಿ ಕಿಟ್ ಪದಾರ್ಥಗಳನ್ನು ಬ್ರಾಹ್ಮಣ ಸಂಘ ವತಿಯಿಂದ ವಿರಿಸಲಾಯಿತು.
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ.ಪ್ರಕಾಶ್ ರವರು ಮಾತನಾಡಿ ಕನ್ನಡದ ಸಣ್ಣ ಕತೆಗಳ ಜನಕರೆಂದೇ ಖ್ಯಾತಿ ಹೊಂದಿದ್ದ ಮಾಸ್ತಿ ಅವರು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡವನ್ನು ಹೃದಯ ಭಾಷೆಯಾಗಿ ಜೀವಂತ ವಿರಿಸಿಕೊಂಡವರು .ಮಾಸ್ತಿ ಕನ್ನಡದ ಆಸ್ತಿ ಎನಿಸಿಕೊಂಡಿದ್ದ ಕೇವಲ ಸಾಹಿತ್ಯ ಕೃಷಿ ಯಿಂದಲ್ಲ ಕನ್ನಡದ ಮನಸ್ಸುಗಳನ್ನ ಲೇಖಕರನ್ನ. ಕವಿಗಳನ್ನ ಘೋಷಿಸಿ ಕನ್ನಡದ ಅಸ್ಮಿತೆಯನ್ನು ಎತ್ತರಕ್ಕೆ ಏರಿಸಿದ ಕಾರಣದಿಂದ ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ ರಾಜಸೇವಾ ಪುಸ್ತಕ ಎಂಬ ಬಿರುದಿಗೂ ಭಾಜನರಾಗಿದ್ದ ಮಾಸ್ತಿಯವರು ಸರ್ಕಾರದ ಕಾನೂನು ಕಟ್ಟಳೆಗಳು ಜನಸಾಮಾನ್ಯರಿಗೂ ಅರ್ಥವಾಗುವಂತಗಬೇಕು ಎಂದು ಪ್ರತಿಪಾದಿಸಿ ಹಲವು ಇಂಗ್ಲಿಷ್ ,ಹಾಗೂ ಫ್ರಾನ್ಸ್ ಪ್ರಿನ್ಸ್ ಭಾಷೆಯ ನುಡಿಗಳನ್ನ ಕಂದಾಯ ಇಲಾಖೆಯಲ್ಲಿದ್ದಾಗ ಕನ್ನಡಕ್ಕೆ ಭಾಷಾಂತರ ಮಾಡಿಸಿ ಅನುಷ್ಠಾನಕ್ಕೆ ತಂದರು ಆ ಮೂಲಕ ಆಡಳಿತದಲ್ಲಿ ಕನ್ನಡ ಜಾರಿಗೊಳಿಸಲು ಅಂದೇ ಶ್ರಮಿಸಿ ನಿಜವಾದ ಅರ್ಥದಲ್ಲಿ ಕನ್ನಡದ ಆಸ್ತಿಯಾದರೂ .
ಮಾಸ್ತಿಯವರು ಸಣ್ಣ ಕಥೆಗಳ ಜೊತೆಗೆ ನಾಟಕ, ಆತ್ಮಕಥನ, ಭಾಷಾಂತರ, ಖಂಡ ಕಾವ್ಯ ,ಕವನ ಸಂಕಲನಗಳನ್ನ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ ಅವರದು ವಿದ್ವತ್ ಮತ್ತು ವಿಚಾರ ಲಹರಿಯ ಸಾಹಿತ್ಯ ಶೈಲಿ ಚಿರಸ್ಥಾಯಿಯಾಗಿ ಉಳಿದಿದೆ ಎಂದರು.
ಮಾಸ್ತಿ ಕೇವಲ ಸಾಹಿತ್ಯಕ್ಕಷ್ಟೇ ಅಲ್ಲದೆ ದಕ್ಷ ಆಡಳಿತಗಾರ ಸಂಸ್ಕೃತಿಯ ಪ್ರತಿಪಾದಕರು ಆಗಿದ್ದರು ಇಂದಿಗೂ ಅವರ ಬದುಕು ಬರಹ ಚಿರಸ್ಥಾಯಿಯಾಗಿ ಉಳಿದಿದೆ ಎಂದು ಹೇಳಿದರು
ಈ ಸಂಧರ್ಭದಲ್ಲಿ ಬ್ರಾಹ್ಮಣ ಸಂಘದ ಅಧ್ಯಕರಾದ ಡಿಟಿ.ಪ್ರಕಾಶ್, ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಗೋಪಾಲರಾವ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯರಾದ ಎಂ.ಆರ್ ಬಾಲಕೃಷ್ಣ, ಸಂಜೆಸಮಯ ದಿನಪತ್ರಿಕೆ ಸಂಪಾದಕರಾದ ಅನಿಲ್ ಕುಮಾರ್, ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಸುಚೀಂದ್ರ, ಚಕ್ರಪಾಣಿ, ಜ್ಯೋತಿ ಇನ್ನಿತರರು ಇದ್ದರು.