ಕನ್ನಡದ ಮೊದಲ ಕವಿಯತ್ರಿ ಅಕ್ಕಮಹಾದೇವಿ ಜಯಂತಿ

ಹೊಳಲ್ಕೆರೆ.ಏ.೨೭; ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶರಣೆ ಅಕ್ಕಮಹಾದೇವಿಯ ಜಯಂತಿಯನ್ನು ಆಚರಿಸಲಾಯಿತು.ತಹಶೀಲ್ಧಾರ್  ಎಂ.ರಮೇಶಾಚಾರಿ ಇವರು ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡುತ್ತ ಹನ್ನೆರಡನೇ ಶತಮಾನದಲ್ಲಿ ವಚನ ಸಾಹಿತ್ಯದ ಪ್ರಮುಖಲ್ಲೊಬ್ಬರು ಅಕ್ಕಮಹಾದೇವಿಯವರು ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ,ಸ್ವಾಭಿಮಾನದ ಪ್ರತೀಕವಾಗಿ ಸ್ತ್ರೀವಾದಿ ಚಳುವಳಿಯ ನಿಜವಾದ ಪ್ರತಿಪಾದಕಿಯಾಗಿ,ಅಕ್ಕರೆಯ ಅಕ್ಕರಾಗಿ ಹೀಗೆ ಹಲವು ರೀತಿಯಲ್ಲಿ ಗುರುತಿಸಬಹುದಾಗಿದೆ.ಅಕ್ಕಮಹಾದೇವಿ ಶಿವನ ಮೇಲೆ ಕವನಗಳನ್ನು ಹಾಡುತ್ತಾ ವಚನಗಳ ಮೂಲಕ ಶಿವಲೀಲೆಯನ್ನು ಸಾರುತ್ತಾ ತಮ್ಮ ಬದುಕನ್ನು ಕಳೆದು ಕನ್ನಡದ ಮೊದಲ ಕವಿಯತ್ರಿ ಮೊದಲ ವಚನಾಗಾರ್ತಿಯಾಗಿ ವಚನಗಳ ಮೂಲಕ ಪ್ರಖ್ಯಾತರಾಗಿದ್ದರೆ ಇವರ ವಚನಗಳನ್ನು ಓದುವುದು ಹಾಗೂ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಸಮಾಜಕ್ಕೆ ತುಂಬಾ ಅವಶ್ಯಕತೆಯಿದೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಎಪಿಎಂಸಿ ಕಾರ್ಯದರ್ಶಿ ಜಿ.ಎಸ್.ಸುರೇಶ್ ಹಾಗೂ ಸಹಾಯಕ ಕಾರ್ಯದರ್ಶಿ ಎ.ಜಿ.ಸುರೇಂದ್ರಬಾಬು ತಾಲ್ಲೂಕು ಮಟ್ಟದ ಅಧಿಕಾರಿಗಳು ತಾಲ್ಲೂಕು ಕಚೇರಿ ಸಿಬ್ಬಂದಿ ಶಕೀಲ್ ಅಹಮ್ಮದ್,ಸನಾವೂಲ್ಲಾ ತಾಲ್ಲೂಕು ಕಚೇರಿ ಸಿಬ್ಬಂದಿವರ್ಗ ಮುಂತಾದವರು ಭಾಗವಹಿಸಿದ್ದರು.