ಕನ್ನಡದ ಕಲರವ ಕನ್ನಡ ಹಾಡುಗಳ ಗಾಯನದ ಕಂಪುನವ್ಹೆಂಬರ್ ಒನ್ ಕನ್ನಡಿಗರಾಗದೆ, ನಂಬರ್ ಒನ್ ಕನ್ನಡಿಗರಾಗಬೇಕು

ಕಲಬುರಗಿ,ನ.1: ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇಂದು 67ನೇ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಡಾ. ಶ್ರೀಶೈಲ ಹೊಗಾಡೆ ಮೇಲ್ವಿಚಾರಕರು, ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕಲಬುರಗಿ, ಇವರ ನೇತೃತ್ವದಲ್ಲಿ ಎಲ್ಲ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಸೇರಿ, ‘ಕನ್ನಡತಾಯಿ ಭುವನೇಶ್ವರಿ’ಯ ಭಾವಚಿತ್ರಕ್ಕೆ ಪೂಜೆ ಹಾಗೂ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಕನ್ನಡ ರಾಜ್ಯೋತ್ಸವದ ಕುರಿತು ಕನ್ನಡ ನಾಡು, ನುಡಿ, ಸಂಸೃತಿ, ವೈಭವವನ್ನು ಬಣ್ಣಿಸುವಂತಹ ಭಾಷಣ, ಗಾಯನ, ಕವನ ವಾಚನ ಮುಂತಾದ ಚಟುವಟಿಕೆಗಳು ನಡೆದವು.
ಕುಮಾರಿ: ಅಕ್ಷತಾ ಹಾಗೂ ಗಂಗಶ್ರೀ ಇವರ ‘ಹಚ್ಚೇವು ಕನ್ನಡದ ದೀಪ’ ಎಂಬ ಗಾಯನದೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮ, ಮುಂದೆ ಕುಮಾರಿ: ಪ್ರೀತಿ ಹಾಗೂ ಸಂಗಡಿಗರಿಂದ ‘ಸುರು ಆತ ನೋಡ ಕರುನಾಡ ಹಾಡ’ ಎಂಬ ಜನಪದ ಶೈಲಿಯಲ್ಲಿರುವ ಹಾಡು, ಕುಮಾರಿ: ನಿಕಿತಾ ಹಾಗೂ ಅಂಕಿತಾ ಇವರಿಂದ ‘ಕರುನಾಡ ತಾಯಿ ಸದಾ ಚಿನ್ಮಯಿ’ ಎಂಬ ಹಾಡು, ಹಾಗೂ ಕುಮಾರಿ: ಅನುಶ್ರೀ ಹಾಗೂ ಸೃಷ್ಟಿ ಕೇಶ್ವಾರ ಇವರಿಂದ ‘ಜೋಗದ ಸಿರಿ ಬೆಳಕಿನಲ್ಲಿ’ ಎಂಬ ಮುಂತಾದ ಕನ್ನಡ ಹಾಡುಗಳು ಅಲ್ಲಿರುವ ಪ್ರೇಕ್ಷಕರಲ್ಲಿ ಕನ್ನಡಾಭಿಮಾನವನ್ನು ಹೆಚ್ಚಿಸುವಂತೆ ಮಾಡಿದವು.
ಕುಮಾರಿ: ಗಂಗಾಂಬಿಕಾ ಆವಂತಿ, ಶ್ರದ್ದಾ ನಂದ್ಯಾಳ, ಹಾಗೂ ಕುಮಾರ: ಸಿದ್ದಪ್ಪ ಮತ್ತು ಆದಿತ್ಯಾ ಇವರುಗಳ ಕಂಠಸಿರಿಯಲ್ಲಿ ಕರುನಾಡಿನ ಗತ-ವೈಭವದ ಚರಿತ್ರೆಯು ಭಾಷಣ ರೂಪದಲ್ಲಿ ಮೊಳಗಿತು.
ಹಚ್ಚಹಸುರಿನ ಸುಂದರ ಬೆಟ್ಟ-ಗುಡ್ಡಗಳ ನದಿಗಳು ಹರಿಯುವ ಸಾಧು-ಸಂತರು ಶಿವಶರಣರು ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡನಾಡು ಎಂಬ ಹೆಸರೇ ಒಂದು ಧೀಮಂತ ಶಕ್ತಿ. ಇಂತಹ ನಾಡಿನಲ್ಲಿ ಹುಟ್ಟಿರುವುದೇ ನಮ್ಮೆಲ್ಲರ ಅದೃಷ್ಟ. ಪ್ರತಿ ವರ್ಷ ನವಂಬರ್ 1 ರಂದು ನಾವೆಲ್ಲರೂ ಅತ್ಯಂತ ಸಡಗರ-ಸಂಭ್ರಮದಿಂದ ಎಲ್ಲ ಜಾತಿ-ಮತ-ಧರ್ಮಗಳ ಜನರೆಲ್ಲರೂ ಸೇರಿ ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ ಅದಕ್ಕಾಗಿಯೇ ನಮ್ಮ ರಾಷ್ಟ್ರಕವಿ ಕುವೆಂಪುರವರು ಈ ನಾಡನ್ನು ಭೂದೇವಿಯ ಮಕುಟದ ನವಮಣಿಯೆ ಗಂಧದ ಚಂದದ ಹೊನ್ನಿನ ಗಣಿಯೆ ಎಂದು ವರ್ಣಿಸಿದ್ದಾರೆ ಹಾಗೆಯೇ ಇದು ಸರ್ವಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಎಂದೂ ಸಹ ವರ್ಣಿಸಿದ್ದಾರೆ. ನಾವೆಲ್ಲರೂ ಕನ್ನಡದಲ್ಲಿ ಮಾತಾಡೋಣ. ಕನ್ನಡದಲ್ಲೇ ವ್ಯವಹರಿಸೋಣ. ನಮ್ಮ ಭಾವನೆಗಳನ್ನು ಕನ್ನಡದಲ್ಲೇ ವ್ಯಕ್ತಪಡಿಸೋಣ. ಕನ್ನಡ ನಮ್ಮ ಮಾತೃಭಾμÉ .ಅದು ನಮ್ಮ ಜೀವದ ಭಾμÉ .ಹಾಗಾಗಿ ಅದನ್ನು ಸ್ಪಷ್ಟವಾಗಿ ಬಳಸುವ ಮೂಲಕ ಇಲ್ಲಿನ ಸಾಹಿತ್ಯ-ಸಂಸ್ಕøತಿ, ಆಚಾರ-ವಿಚಾರ, ಸಂಸ್ಕಾರ-ಸಂಪ್ರದಾಯ, ರೀತಿ-ನೀತಿ, ಘನತೆ_ಗಾಂಭೀರ್ಯಗಳನ್ನು ಗೌರವಿಸುವ ಮೂಲಕ ಸಮಾಜದ ಮುಖ್ಯವಾಹಿನಿಯ ಬಾಂಧವ್ಯಕ್ಕೆ ಪ್ರತಿಸ್ಪಂದಿಸುತ್ತಾ ಜೀವಂತವಾಗಿರಿಸೋಣ. ನಮ್ಮ ಸುತ್ತಮುತ್ತಲಿನ ಭಾμÉಗಳನ್ನು ಕಲಿಯೋಣ. ಗೌರವಿಸೋಣ, ಆದರೆ ಕನ್ನಡವನ್ನೇ ಬಳಸೋಣ ಮತ್ತು ಬೆಳೆಸೋಣ ಇದೇ ನಿಜವಾದ ಭಾμÁಭಿಮಾನವೂ ಹೌದು ನಮ್ಮ ಜೀವಂತಿಕೆಯ ಸಾಕ್ಷಿಯೂ ಹೌದು. ಎಂದು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಅದೇ ರೀತಿ ಇಂದು ಶರಣಬಸವೇಶ್ವರ ಸಂಸ್ಥಾನದ ಪ್ರಸ್ತುತ 9ನೇ ಪೀಠಾಧಿಪತಿಗಳಾದ ಚಿ. ದೊಡ್ಡಪ್ಪ ಅಪ್ಪ ಅವರ ಜನ್ಮ ದಿನಾಚರಣೆಯೂ ಕೂಡಾ ಇಂದೇ ಆಗಿದ್ದು, ಶರಣಬಸವೇಶ್ವರರ ಅನುಗ್ರಹ ಅವರ ಮೇಲೆ ಸದಾ ಇರಲಿ ಎಂದು ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರಿಗೆ ನಮ್ಮ ಕಾಲೇಜಿನ ಎಲ್ಲ ಆಡಳಿತ ಮಂಡಳಿಯ ವತಿಯಿಂದ, ಪ್ರಾಚಾರ್ಯರ ವತಿಯಿಂದ, ಎಲ್ಲ ಉಪನ್ಯಾಸಕರ ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿ ವತಿಯಿಂದ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಲಾಯಿತು.
ಕುಮಾರಿ: ದೇವಿಕಾ ತಮಶೆಟ್ಟಿ ಇವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ನಾಡಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.