ಕನ್ನಡದ ಅನಘ್ಯ೯ ರತ್ನ ಪುಟ್ಟರಾಜ ಗವಾಯಿಗಳು


ಸಂಜೆವಾಣಿ ವಾರ್ತೆ
ಕುಕನೂರು, ಮಾ.04: ಕರುನಾಡಿನ ಅನರ್ಗ್ಯ ರತ್ನ ಪಂಡಿತ್ ಗಾನಯೋಗಿ ಪುಟ್ಟರಾಜ ಗವಾಯಿಗಳು ಅಂದ ಅನಾಥ ಮಕ್ಕಳಿಗೆ ದಾರಿದೀಪವಾದವರು ಅಕ್ಷರ ಅನ್ನ ಗಾಯನ ನೀಡಿದ ಮಹಾನ್ ದಿವ್ಯ ಚೇತನರು ಎಂದು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.
ಪಟ್ಟಣದ ಶ್ರೀ ಪಂಚಾಕ್ಷರಿ ಸಂಗೀತ ಸಾಹಿತ್ಯ ಕ್ರೀಡೆ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕುಕುನೂರು ಮತ್ತು ಪ್ರತಿಷ್ಠಿತ ಶ್ರೀ ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯದಲ್ಲಿ ಗಾನಯೋಗಿ ಪುಟ್ಟರಾಜ ಗವಾಯಿಗಳವರ 109ನೆಯ ಜಯಂತೋತ್ಸವ ಸಂಗೀತ ಕಾರ್ಯಕ್ರಮ ದಲ್ಲಿ ಗವಾಯಿಗಳ ಭಾವಚಿತ್ರಕ್ಕೆ ಪುಷ್ಪಾಪಣೆ ಮಾಡಿ ಮಾತನಾಡಿದ ಅವರು, ಉಭಯ ಗುರುಗಳ ಇಚ್ಛೆಯಂತೆ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಕೃಪಾ ಆಶೀರ್ವಾದದಿಂದ ಸಂಗೀತಾ ಸಾಹಿತ್ಯ ನಾಟಕ ಜೊತೆ ಜೊತೆಗೆ ಸಕಲ ವಾದ್ಯ ನುಡಿಸುವ ಕಲಾ ಕಂಠೀರವ ಪುಟ್ಟರಾಜ ಗವಾಯಿಗಳು. ಬದುಕಿನ ಉದ್ದಕ್ಕೂ ತಮ್ಮ ಸೃಜನಾತ್ಮಕ ಹಾಗೂ ಕ್ರಿಯಾಶೀಲತೆಯಿಂದ ಸಂಗೀತ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದವರು . ಅಂತ ಮಹಾತ್ಮರನ್ನು ಪಟ್ಟಣಕ್ಕೆ ಕರೆಯಿಸಿ ಕುಕನೂರನ್ನು ಪಾವನ ಮಾಡಿದ ಮಾಡಿದ ಕೀರ್ತಿ ಅವರ ಅಚ್ಚುಮೆಚ್ಚಿನ ಶಿಷ್ಯರಾದ ತಬಲಾ ಕಲಾವಿದ ಪಂಡಿತ  ಶಿವಕುಮಾರ ಭಜಂತ್ರಿ ಕುಕನೂರರವರಿಗೆ ಸಲ್ಲುತ್ತದೆ. ಗುರುಗಳ ಇಚ್ಛೆಯಂತೆ ಪಟ್ಟಣದಲ್ಲಿ ಸಂಗೀತ ಪಾಠಶಾಲೆಯನ್ನು ತೆರೆದು ನೂರಾರು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ ಪಾಠಶಾಲೆಯು ಯುವಕಲಾವಿದ  ಮುರಾರಿ ಭಜಂತ್ರಿಯವರ ಅವರ ನೇತೃತ್ವದಲ್ಲಿ ಇನ್ನೂ ಹೆಚ್ಚಿನ ಮಟ್ಟಕ್ಕೆ ಬೆಳೆಯಲಿ. ಈ ಶಾಲೆಗೆ ನಮ್ಮ ಸಹಕಾರ ಸಹಾಯ ಸದಾ ಕಾಲ ಇರುತ್ತೆ ಎಂದರು.
ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಚಿಂತಕ ನಿವೃತ್ತ ಉಪನ್ಯಾಸಕ ಆರ್ ಪಿ ರಾಜೂರ, ಸಂಸ್ಥೆಯ ಅಧ್ಯಕ್ಷ .ಸಂಗೀತ ಶಿಕ್ಷಕ. ಪತ್ರಕರ್ತ ಮುರಾರಿ ಭಜಂತ್ರಿ, ಪಪಂ ಮಾಜಿ ಸದಸ್ಯ ಹನುಮಂತಪ್ಪ ಹಂಪನಾಳ, ವೈದ್ಯರಾದ ಜಂಬಣ್ಣ ಅಂಗಡಿ, ಪತ್ರಕರ್ತರಾದ ರುದ್ರಪ್ಪ ಭಂಡಾರಿ, ಕನಕರಾಯ ಭಜಂತ್ರಿ, ಯುವ ಮುಖಂಡ ವೀರೇಶ್ ಸಬರದ್, ಮಂಜುನಾಥ್ ಮ್ಯಾದರ್, ಪಪಂ ಸದಸ್ಯ ಪ್ರಶಾಂತ್ ಆರ್ಬೆರಳಿನ್, ಮಲ್ಲಪ್ಪ ಗುತ್ತಿ, ರಾಮಣ್ಣ ಬಂಡಾರಿ, ಮುಕುಂದ ಭಜಂತ್ರಿ, ರಾಕೇಶ್, ಅಂಬರೀಶ್, ಭಾಸ್ಕರ್, ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು..