ಕನ್ನಡದಿಂದ ಭೋಜಪುರಿಗೆ ಹರ್ಷಿಕಾ ಪೂಣಚ್ಚ ಲಗ್ಗೆ

* ಚಿಕ್ಕನೆಟಕುಂಟೆ ಜಿ.ರಮೇಶ್

ಕನ್ನಡದ ನಟಿಯರು ಇತ್ತೀಚಿನ ದಿನಗಳಲ್ಲಿ ಪರಭಾಷೆಯಲ್ಲಿ ಸದ್ದು ಮಾಡುತ್ತಿದ್ದಾರೆ .ಆದರ ಸಾಲಿಗೆ ಇದೀಗ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಕೂಡ ಸೇರ್ಪಡೆಯಾಗಿದ್ದಾರೆ. ಸದ್ದಿಲ್ಲದೆ ಭೋಜಪುರಿ ಚಿತ್ರ ” ಹಮ್ ಹೈನ್ ರಹೀ ಪ್ಯಾರ್ಕೆ” ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. ಆದರ ಟ್ರೈಲರ್ ಬಿಡುಗಡೆಯಾಗಿದ್ದು ಸದ್ದು ಮಾಡುತ್ತಿದೆ.

ಕನ್ನಡದ ನಟಿಯೊಬ್ಬರು ಭೋಜಪುರಿ ಭಾಷೆಯಲ್ಲಿ ನಟಿಸುವ ಮೂಲಕ ಕನ್ನಡದ ಕಂಪನ್ನು ಹೊರ ರಾಜ್ಯಗಳಲ್ಲೂ ಪಸರಿಸುತ್ತಿದ್ದಾರೆ. ಬೋಜಪುರಿ ಭಾಷೆಯಲ್ಲಿ ಮೊದಲ ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನವೇ ಮತ್ತೊಂದು ಭೋಜಪುರಿ ಭಾಷೆಯ ಚಿತ್ರದಲ್ಲಿ ಅವಕಾಶ ಬಂದಿದೆ ಇದಲ್ಲದೆ ತೆಲುಗು ಮತ್ತು ಮಲಯಾಳಂನಲ್ಲೂ ಅವಕಾಶಗಳು ಅರಸಿ ಬಂದಿವೆ.

ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಚಿತ್ರಗಳ ಚಿತ್ರೀಕರಣ ವಿಳಂಬವಾಗಿದೆ ಲಾಕ್ ಡೌನ್ ತೆರೆವಾಗುತ್ತಿದ್ದಂತೆ ಚಿತ್ರೀಕರಣ ಆರಂಭವಾಗಲಿದೆ. ಭೋಜಪುರಿ ,ತೆಲುಗು, ಮಲಯಾಳಂ ಚಿತ್ರಗಳ ಜೊತೆಯಲ್ಲಿ ಕನ್ನಡದಲ್ಲಿ ಓಂ ಪ್ರೇಮ,ಸೇರಿದಂತೆ ನಾಲ್ಕು ಚಿತ್ರಗಳ ಇವೆ.ಒಟ್ಟಾರೆ ಆರು ಚಿತ್ರಗಳು ಹರ್ಷಿಕಾ ಕೈಯಲ್ಲಿವೆ.

ಚಿತ್ರಗಳ ಕುರಿತು ಮಾಹಿತಿ ಹಂಚಿಕೊಂಡ ನಟಿ ಹರ್ಷಿಕಾ ಪೂಣಚ್ಚ, ಭೋಜಪುರಿ ಭಾಷೆಯ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರವನ್ನು ಲಂಡನ್ ನಲ್ಲಿ ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ, ನನ್ನದು ಲಂಡನ್ ನಲ್ಲಿ ಹುಟ್ಟಿ ಬೆಳೆದ ಹುಡುಗಿಯ ಪಾತ್ರ‌. ಹೀಗಾಗಿ ಇಡೀ ಚಿತ್ರದಲ್ಲಿ ಹಿಂದಿಯಲ್ಲಿ ಮಾತನಾಡಿದ್ದೇನೆ.

ಭೋಜಪುರಿ ಭಾಷೆಯ ಜೊತೆಗೆ ಹಿಂದಿಯಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ ಯಾವಾಗ ಎನ್ನುವುದು ಚಿತ್ರತಂಡ ಇನ್ನಷ್ಟೇ ತಿಳಿಸಬೇಕಾಗಿದೆ. ಭೋಜಪುರಿ ಚಿತ್ರದ ಚಿತ್ರೀಕರಣ ಜನವರಿಯಲ್ಲಿ ನಡೆಯಿತು. ಸರಿ ಸುಮಾರು 45 ದಿನಗಳ ಕಾಲ ಲಂಡನ್ ನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದೆ.ಇದೊಂದು ವಿಶೇಷ ಅನುಭವ ಎಂದು ಅವರು ಮಾಹಿತಿ ಹಂಚಿಕೊಂಡರು

ಕನ್ನಡ ಭೋಜಪುರಿ ತೆಲುಗು ಮತ್ತು ಮಲಯಾಳಂ ಸೇರಿದಂತೆ ವಿವಿಧ ಭಾಷೆಯಲ್ಲಿ ಆರು ಚಿತ್ರಗಳು ಕೈಯಲ್ಲಿವೆ ಲಾಕ್ ಡೌನ್ ಇರುವುದರಿಂದ ಯಾವಾಗ ಆರಂಭವಾಗುತ್ರದೆ ಗೊತ್ತಿಲ್ಲ. ಎಲ್ಲಾ ಚಿತ್ರಗಳಲ್ಲೂ ಭಿನ್ನವಾದ ಪಾತ್ರಗಳು ಮತ್ತು ಕಥೆಗಳಿವೆ ಎಂದರು.

ಸಾಲು ಸಾಲು ಚಿತ್ರ

ಕನ್ನಡದಲ್ಲಿ “ಓ ಪ್ರೇಮ ” ಸೇರಿ 4 , ತೆಲುಗು ಮಲಯಾಳಂ ಮತ್ತು ಭೋಜಪುರಿ ಮತ್ತೊಂದು ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿ ಹರ್ಷಿಕಾ ಪೂಣಚ್ಚ ಬ್ಯುಸಿಯಾಗಿದ್ದಾರೆ.

ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಆರಂಭವಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಸಾಮಾಜಿಕ ಕಾರ್ಯದಲ್ಲಿ ಭಾಗಿ

ಲಾಕ್ ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡಜನರಿ್ಗೆಗೆ ಬೆಂಗಳೂರಿನ ಮೂಲೆಮೂಲೆಗಳಲ್ಲಿ ಆಹಾರದ ಕಿಟ್ “ಭುವನಂ ಪೌಂಡೇಷನ್” ಮೂಲಕ ವಿತರಿಸಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಫೀಡ್ ಕರ್ನಾಟಕ ಯೋಜನೆ ಕಳೆದ ಐದು ವರ್ಷದಿಂದ ನಡೆಯುತ್ತಿದೆ.‌ಕೊಡಗು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಆದಾಗ ನೆರವಿಗೆ ಧಾವಿಸಿದ್ದೇವೆ. ಇದರ ಜೊತೆಗೆ

ಶ್ವಾಸ ಯೋಜನೆ ಆರಂಬಿಸಲಾಗಿದ್ದು ಆಸ್ಪತ್ರೆಯಲ್ಲಿ ಹಾಸಿಗೆ ಸಿಗುವ ತನಕ ಸರ್ಕಾರಿ ಆಸ್ಪತ್ರೆ‌ ಮುಂದೆ ಬಸ್ ಇರಲಿದೆ ಎಂದು ಹರ್ಷಿಕಾ ಪೂಣಚ್ಚ ಹೇಳಿಕೊಂಡರು.