ಕನ್ನಡದಲ್ಲೇ ಚಾಹಲ್ ಟ್ವೀಟ್ ಆರ್‌ಸಿಬಿ ಅಭಿಮಾನಿಗಳ ಸಂತಸ


ಬೆಂಗಳೂರು,ಏ.೧- ರಾಯಲ್ ಚಾಲೆಂಜರ್‍ಸ್ ತಂಡದ ಆಟಗಾರ ಯಜುವೇಂದ್ರ ಚಾಹಲ್ ಕನ್ನಡದಲ್ಲಿ ಟ್ವೀಟ್ ಮಾಡಿರುವುದಕ್ಕೆ ಕನ್ನಡಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಏ. ೯ ರಿಂದ ನಡೆಯಲಿರುವ ಐಪಿಎಲ್ ಟೂರ್ನಿಗಾಗಿ ಚೆನ್ನೈನಲ್ಲಿರುವ ಆರ್‌ಸಿಬಿ ತಂಡವನ್ನು ಚಾಹಲ್ ಸೇರಿಕೊಂಡಿದ್ದಾರೆ. ಕ್ವಾರಂಟೈನ್ ಮುಗಿಸಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.ಚಾಹಲ್ ಕನ್ನಡದಲ್ಲಿ ಟ್ವೀಟ್ ಮಾಡಿರುವುದನ್ನು ಕಂಡು ಆರ್‌ಸಿಬಿ ಅಭಿಮಾನಿಗಳು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಕುಟುಂಬದೊಂದಿಗೆ ಮತ್ತೆ ಸೇರಿಕೊಳ್ಳಲು ತಮಗೆ ಅತ್ಯಂತ ಖುಷಿಯ ವಿಚಾರವಾಗಿದೆ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.
ಈ ಟ್ವೀಟ್‌ಗೆ ಆರ್‌ಸಿಬಿ ಅಭಿಮಾನಿಗಳಿಂದ ಅಭಿನಂದನೆಗಳ ಮಹಾ ಪೂರವೇ ಹರಿದು ಬಂದಿದೆ.